ಲಾಕ್ ಡೌನ್ ಸಡಿಲಿಕೆಯಲ್ಲಿರುವ ರಾಜ್ಯಕ್ಕೆ ಕೊರೊನಾ ರಿಪೋರ್ಟುಗಳು ಆಘಾತ ನೀಡಿವೆ. ಭಾನುವಾರ ಬೆಳಗ್ಗೆ ಪ್ರಕಟಗೊಂಡ ರಾಜ್ಯ ಸರಕಾರದ ವರದಿಯಂತೆ ಒಟ್ಟು 53 ಹೊಸ ಕೇಸ್ ಗಳು ದಾಖಲಾಗಿವೆ.
ಇವತ್ತಿನವರೆಗೆ ರಾಜ್ಯದಲ್ಲಿ ಒಟ್ಟು 847 ಕೋವಿಡ್ ಕೇಸುಗಳು ದೃಢಪಟ್ಟಿವೆ. ಇವುಗಳ ಪೈಕಿ 31 ಮಂದಿ ಮೃತಪಟ್ಟಿದ್ದಾರೆ. 405 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಮೇ.7ರಂದು ಬೆಂಗಳೂರಿನಲ್ಲಿ ಮೃತಪಟ್ಟ ಮಹಿಳೆಗೆ ಇಂದು ಕೋವಿಡ್ ಇರುವುದು ದೃಢಪಟ್ಟಿದೆ. ವಿವರ ಇಲ್ಲಿದೆ.
ಬೆಳಗಾವಿ 22,ಶಿವಮೊಗ್ಗ 08,ಬಾಗಲಕೋಟೆ 08,ಉತ್ತರಕನ್ನಡ 07,ಬೆಂಗಳೂರು 03,ಕಲಬುರ್ಗಿ03,ದಾವಣಗೆರೆ 01,ಚಿಕ್ಕಬಳ್ಳಾಪುರ 01 ಇವತ್ತು ಪತ್ತೆಯಾದ 53 ಪ್ರಕರಣಗಳಲ್ಲಿ ಸೇರಿವೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಯಾವುದೇ ಪ್ರಕರಣ ವರದಿಯಾಗಿಲ್ಲ. ಇಂದು 14ವರ್ಷಕ್ಕಿಂತ ಕೆಳಗಿನ 8ಮಕ್ಕಳಿಗೆ 22 ಮಹಿಯರಿಗೆ ಸೇರಿದಂತೆ ಒಟ್ಟು 53ಮಂದಿಗೆ ಸೋಂಕು ಧೃಢಪಟ್ಟಿದೆ.
ಹೆಚ್ಚಿನ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಲು ಕ್ಲಿಕ್ ಮಾಡಿರಿ
https://chat.whatsapp.com/HEamC5PR5BQ1pNoRgq3yx4
Be the first to comment on "ರಾಜ್ಯದಲ್ಲಿ ಹೆಚ್ಚುತ್ತಿದೆ ಕೊರೊನಾ ಪಾಸಿಟಿವ್ ಕೇಸುಗಳ ಸಂಖ್ಯೆ, ಭಾನುವಾರ ಬೆಳಗ್ಗೆ ತಲುಪಿತು 847"