ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಸೋಂಕು ದೃಢಪಟ್ಟವರ ಪೈಕಿ ಮಂಗಳೂರು ತಾಲೂಕೊಂದರಲ್ಲೇ 4942 ಪ್ರಕರಣಗಳು ಕಂಡುಬಂದಿವೆ. ಅದಾದ ನಂತರದ ಸ್ಥಾನ ಬಂಟ್ವಾಳ ತಾಲೂಕಿಗೆ ಬರುತ್ತದೆ. ಇಲ್ಲಿ ಇದುವರೆಗೆ 667 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ಬೆಳ್ತಂಗಡಿ 366, ಪುತ್ತೂರು 345, ಮೂಡುಬಿದಿರೆ 98, ಮೂಲ್ಕಿ 91, ಸುಳ್ಯ 90 ಮತ್ತು ಕಡಬದಲ್ಲಿ 55 ಪ್ರಕರಣಗಳು ದೃಢಪಟ್ಟಿವೆ. ಇವತ್ತು ದಾಖಲಾದ ಪ್ರಕರಣಗಳು ಒಟ್ಟು 194. ಇವುಗಳ ಪೈಕಿ ಮಂಗಳೂರು 129, ಪುತ್ತೂರು 16, ಬೆಳ್ತಂಗಡಿ 16, ಬಂಟ್ವಾಳ 15, ಸುಳ್ಯದಲ್ಲಿ 7 ಪ್ರಕರಣಗಳು ದೃಢಪಟ್ಟರೆ, ಮೂಲ್ಕಿ, ಮೂಡುಬಿದಿರೆ, ಕಡಬಗಳಲ್ಲಿ ಯಾರಿಗೂ ಇಂದು ಸೋಂಕು ದೃಢಪಟ್ಟಿಲ್ಲ. ದ.ಕ.ದಲ್ಲಿ ಟೆಸ್ಟ್ ಮಾಡಿದ ಹೊರಜಿಲ್ಲೆಯ 11 ಮಂದಿಗೆ ಸೋಂಕು ಇಂದು ದೃಢಪಟ್ಟಿದ್ದು, ಹೀಗೆ ಹೊರಜಿಲ್ಲೆಯ 421 ಮಂದಿಗೆ ಇದುವರೆಗೆ ಸೋಂಕು ದೃಢಪಟ್ಟಿದೆ. ಒಟ್ಟಾರೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7075 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಇಂದು 194 ಮಂದಿಗೆ ಸೋಂಕು ದೃಢಪಟ್ಟರೆ, 183 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 6 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ದ.ಕ.ಜಿಲ್ಲೆಯಲ್ಲಿ ಒಟ್ಟು 3374 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 3487 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 214 ಮಂದಿ ಕೊರೊನಾ ಸೋಂಕು ದೃಢಪಟ್ಟವರು ಸಾವನ್ನಪ್ಪಿದ್ದಾರೆ.
Be the first to comment on "ಕೊರೊನಾ ಸೋಂಕಿತರು: ಮಂಗಳೂರು ತಾಲೂಕು ನಂ.1, ಬಂಟ್ವಾಳ ನಂ.2 ಇದು ದಕ್ಷಿಣ ಕನ್ನಡ ಜಿಲ್ಲೆಯ ಮಾಹಿತಿ"