ಬಂಟ್ವಾಳ: ಬಂಟ್ವಾಳ ಜೈನ್ ಮಿಲನ್, ಶ್ರೀದೇವಿ ಮೆಡಿಕಲ್ಸ್ ಸಹಯೋಗದಲ್ಲಿ ಬಂಟ್ವಾಳದ ಮೂರು ಪೊಲೀಸ್ ಠಾಣೆಗಳಿಗೆ ತೆರಳಿ, ಸಿಬ್ಬಂದಿಗೆ ಬೇಕಾದ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ವಿತರಿಸಲಾಯಿತು.
ಜಾಹೀರಾತು
ವೃತ್ತ ನೀರಿಕ್ಷಕ ಟಿ.ಡಿ ನಾಗರಾಜ್, ಬಂಟ್ವಾಳ ನಗರ ಠಾಣೆಗೆ ಎಸ್.ಐ. ಅವಿನಾಶ್, ಸಂಚಾರಿ ಠಾಣೆಗೆ ಎಸ್.ಐ. ರಾಜೇಶ್ ಕೆ.ವಿ ಅವರಿಗೆ ಪದಾಧಿಕಾರಿಗಳು ನೀಡಿದರು. ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8, ಮಂಗಳೂರು ವಿಭಾಗದ ಅಧ್ಯಕ್ಷ ಸುದರ್ಶನ್ ಜೈನ್, ಕಾರ್ಯದರ್ಶಿ ಸುಭಾಷ್ ಚಂದ್ರ ಜೈನ್, ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಡಾ.ಸುದೀಪ್ ಕುಮಾರ್, ಕಾರ್ಯದರ್ಶಿ ಸನ್ಮತಿ ಜಯಕೀರ್ತಿ, ಉಪಾಧ್ಯಕ್ಷ ಹರ್ಷರಾಜ್ ಬಲ್ಲಾಳ್ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ಜೈನ್ ಮಿಲನ್ ನಿಂದ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ವಿತರಣೆ"