- ಸರಪಾಡಿ ಅಶೋಕ ಶೆಟ್ಟಿ ಅವರಿಗೆ ಕರಾವಳಿ ಸೌರಭ ಪ್ರಶಸ್ತಿ ಪ್ರದಾನ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಆಶ್ರಯದಲ್ಲಿ ಡಿ. 21ರಿಂದ ಜ.1ರವರೆಗೆ ಕರಾವಳಿ ಕಲೋತ್ಸವ 2019-20 ಬಿ.ಸಿ.ರೋಡಿನ ಗಾಣದಪಡ್ಪು ಮೈದಾನದಲ್ಲಿ ನಡೆಯಲಿದೆ.
ಕರಾವಳಿ ಉತ್ಸವದ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು ಸೋಮವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಕಲೋತ್ಸವದ ಚಿಣ್ಣರೋತ್ಸವದ ಅಧ್ಯಕ್ಷರಾಗಿ ಆಶ್ಲೇಷ್ ಕೆ. ಭಾಗವಹಿಸುವರು. ಯಕ್ಷಗಾನ ಕಲಾವಿದ, ಸಂಘಟಕ ಸರಪಾಡಿ ಅಶೋಕ ಶೆಟ್ಟಿ ಅವರಿಗೆ ಕರಾವಳಿ ಸೌರಭ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು, ಪ್ರಮುಖರಾದ ಜಯರಾಮ ರೈ ವಿಟ್ಲ, ಕಾಂತಾಡಿಗುತ್ತು ಸೀತರಾಮ ಶೆಟ್ಟಿ, ಕಲಾವಿದ ಎಚ್.ಕೆ.ನಯನಾಡು ಹಾಜರಿದ್ದು, ಮಾಹಿತಿ ನೀಡಿದರು.
ಏನಿದು ಕಲೋತ್ಸವ:
ಸಂಸ್ಥೆಯ ಕಾರ್ಯಕ್ಷೇತ್ರದ ಸಾಧನೆಯನ್ನು ಸಮುದಾಯಕ್ಕೆ ಮನವರಿಕೆ ಮಾಡಿ ಕೊಡುವುದು ಮತ್ತು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ಒದಗಿಸಿಕೊಡಬೇಕೆಂಬ ಉದ್ದೇಶದಿಂದ ಕರಾವಳಿ ಕಲೋತ್ಸವ ನಡೆಯುತ್ತದೆ. ಮಕ್ಕಳ ಚಿಣ್ಣರೋತ್ಸವ, ನಾಟಕೋತ್ಸವ, ರಾಜ್ಯಮಟ್ಟದ ಪಿಲ್ಮಿ ಡ್ಯಾನ್ಸ್ ಸ್ಪರ್ಧೆ, ಜಿಲ್ಲಾ ಮಟ್ಟದ ಸಿಂಗಾರಿ ಮೇಳ(ಚೆಂಡೆ ಸ್ಫರ್ದೆ), ಜಾನಪದ ನೃತ್ಯ, ಭರನಾಟ್ಯ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಕಲಾವಿದರು ಭಾಗವಹಿಲಿದ್ದಾರೆ.
ಉದ್ಘಾಟನಾ ಸಮಾರಂಭ:
ಡಿ. 21ರಂದು ಸಂಜೆ ೫ರಿಂದ ಬಿ.ಸಿ.ರೋಡು ಅನ್ನಪೂರ್ಣೇಶ್ವರಿ ಕಲಾಮಂಟಪದಿಂದ ಜಾನಪದ ಡಿಬ್ಬಣದ ಮೆರವಣಿಗೆಯು ರಾಜ್ಯ ಹಾಗೂ ಹೊರ ರಾಜ್ಯ ಜಾನಪದ ತಂಡಗಳೊಂದಿಗೆ ನಡೆಯಲಿದ್ದು, ವೈವಿಧ್ಯಮಯ ಕಾರ್ಯಕ್ರಮಗಳ ಪ್ರಸ್ತುತಿಯೊಂದಿಗೆ ಬಿ.ಸಿ.ರೋಡಿನ ಗಾಣದಪಡ್ಪು ಕೀರ್ತಿಶೇಷ ಕದ್ರಿ ಗೋಪಾಲನಾಥ ಕಲಾವೇದಿಕೆಯತ್ತ ಸಾಗಲಿದೆ. ಸಂಜೆ 6.30 ಕ್ಕೆ ಕರಾವಳಿ ಕಲೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಉದ್ಘಾಟನೆ, ಚಿಣ್ಣರ ಚಿತ್ತಾರ ಚಿತ್ರಕಲೆ ಪ್ರದರ್ಶನ ಉದ್ಘಾಟನೆ, ಅಮ್ಯೂಸ್ಮೆಂಟ್ ಪಾರ್ಕ್ ಉದ್ಘಾಟನೆ ಹಾಗೂ ಕರಾವಳಿ ಸೌರಭ ಪ್ರಶಸ್ತಿಪ್ರಧಾನ ಹಾಗೂ ಚಿಣ್ಣರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ
ಜಾನಪದ ನೃತ್ಯ ಪ್ರದರ್ಶನ, ರಾಗ ರಂಜಿನಿ ಸಂಗೀತ ರಸಮಂಜರಿ, ಸರಿಗಮಪ, ಚೆಂಡೆ ಸ್ಪರ್ಧೆ, ಕರಾವಳಿ ಸರಿಗಮ, ಸಂಗೀತ ಸ್ಪರ್ಧೆಯ ಮೆಗಾ ಆಡಿಷನ್, ಕರಾವಳಿ ಝೇಂಕಾರ, ರಂಗಭೂಮಿಯಲ್ಲಿ ಸೇವೆಗೈದ ಹಿರಿಯರಿಗೆ ಸನ್ಮಾನ, ಕೃಷ್ಣ ಕೃಷ್ಣ ಶ್ರೀ ಕೃಷ್ಣ ಯಕ್ಷಗಾನ, ಚಿಣ್ಣರೋತ್ಸವ, ನೃತ್ಯವೈಭವ, ಕರಾವಳಿ ಡ್ಯಾನ್ಸ್ ಧಮಾಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಚಿಣ್ಣರ ಲೋಕ ಟ್ರಸ್ಟ್:
ಬಂಟ್ವಾಳ ತಾಲೂಕಿನ ಸಜಿಪಮುನ್ನೂರಿನ ಶ್ರೀಶಾರದಾ ಭಜನಾ ಮಂದಿರದಲ್ಲಿ 2006ರಲ್ಲಿ ಪ್ರಾರಂಭಗೊಂಡ ಸಂಸ್ಥೆ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಮಾತ್ರವಲ್ಲ ರಾಜ್ಯಾದಂತ ಪ್ರಸಿದ್ಧವಾಗಿರುವ ಈ ಸಂಸ್ಥೆಯು ಜಿಲ್ಲಾದ್ಯಂತ 43 ಶಾಖೆಗಳನ್ನು ಪ್ರಾರಂಭಿಸಿದೆ. ಸುಮಾರು 5346 ಮಕ್ಕಳು ಯಕ್ಷಗಾನ, ಸಂಗೀತ, ಜಾನಪದ ನೃತ್ಯ , ಚೆಂಡೆ , ನಾಟಕ ಕಲೆ ಇವೇ ಮೊದಲಾದ ಹಲವು ಸಾಂಸ್ಕೃತಿಕ ಚಟುವಟಿಕಗೆಳ ತರಬೇತಿ ಪಡೆಯುತ್ತಿದ್ದಾರೆ ಹಾಗೂ ಪ್ರದರ್ಶನ ನೀಡುತ್ತಿದ್ದಾರೆ. ಹಲವಾರು ಯುವ ಪ್ರತಿಭೆಗಳನ್ನು ಕಲಾ ಪ್ರಪಂಚಕ್ಕೆ ಪರಿಚಯಿಸಿರುವ ಹೆಮ್ಮೆ ಸಂಸ್ಥೆಗಿದ್ದು, ನುರಿತ ಅನುಭವಿ 31 ತರಬೇತುದಾರರಿಂದ ವಿವಿಧ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ.
ಕಾರ್ಯಕ್ರಮಗಳ ಡಿಟೈಲ್ಸ್:
ಡಿಸೆಂಬರ್ 21 ರಂದು ಶನಿವಾರ ಸಂಜೆ 5 ಗಂಟೆಗೆ ಬಿ ಸಿ ರೋಡು ಅನ್ನಪೂರ್ಣೇಶ್ವರಿ ಕಲಾಮಂಟಪದಿಂದ ಜಾನಪದ ದ್ಬಿಣದ ಮೆರವಣಿಗೆÂಯು ರಾಜ್ಯ ಹಾಗೂ ಹೊರ ರಾಜ್ಯದ ಜಾನಪದ ತಂಡಗಳೊಂದಿಗೆ ಕಲೋತ್ಸವ ವೇದಿಕೆಗೆ ಸಾಗಿ ಬರಲಿದೆ. ವೈವಿಧ್ಯಮಯ ಕಾರ್ಯಕ್ರಮಗಳ ಪ್ರಸ್ತುತಿಯೊಂದಿಗೆ ಸಂಜೆ 6.30 ಕ್ಕೆ ಕರಾವಳಿ ಕಲೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಉದ್ಘಾಟನೆ, ಚಿಣ್ಣರ ಚಿತ್ತಾರ ಚಿತ್ರಕಲೆ ಪ್ರದರ್ಶನ ಉದ್ಘಾಟನೆ, ಅಮ್ಯೂಸ್ಮೆಂಟ್ ಪಾರ್ಕ್ ಉದ್ಘಾಟನೆ ನಡೆಯಲಿದೆ. ಕರಾವಳಿ ಸೌರಭ ಪ್ರಶಸ್ತಿ ಪ್ರಧಾನ ಹಾಗೂ ಚಿಣ್ಣರ ಪ್ರಶಸ್ತಿ ಪ್ರಧಾನ, 7.30ಕ್ಕೆ ಜಾನಪದ ನೃತ್ಯ ಪ್ರದರ್ಶನ, ರಾತ್ರಿ 8ಕ್ಕೆ ರಾಗ ರಂಜಿನಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಡಿ 22 ರಂದು ಬೆಳಿಗ್ಗೆ 9.30 ರಿಂದ 2.30ರ ತನಕ ಕರಾವಳಿ ಸರಿಗಮ 2019-20 ಸಂಗೀತ ಸ್ಪರ್ದೆಯ ಮೆಗಾ ಆಡಿಷನ್, ಅಪರಾಹ್ನ 3 ಗಂಟೆಯಿಂದ ಕರಾವಳಿ ಝೇಂಕಾರ 2019-20. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಚೆಂಡೆ ಸ್ಪರ್ಧೆ ನಡೆಯಲಿದೆ. ಸಂಜೆ 7ಕ್ಕೆ ಸಭಾ ಕಾರ್ಯಕ್ರಮ, ರಂಗಭೂಮಿಯಲ್ಲಿ ಸೇವೆಗೈದ ಹಿರಿಯರಿಗೆ ಸನ್ಮಾನ, ರಾತ್ರಿ 8.30ಕ್ಕೆ ಕರಾವಳಿ ಝೇಂಕಾರ 2019-20 ಚೆಂಡೆ ಸ್ಪರ್ಧೆ ಪೈನಲ್ ನಡೆಯಲಿದೆ.
ಡಿ 23 ರಂದು ಸಂಜೆ ಗಂಟೆ 5ಕ್ಕೆ ಚಿಣ್ಣರೋತ್ಸವ 2019-20, ಸಂಜೆ 7ಕ್ಕೆ ಸಭಾ ಕಾರ್ಯಕ್ರಮ, ರಂಗ ಭೂಮಿಯಲ್ಲಿ ಸೇವೆಗೈದ ಹಿರಿಯರಿಗೆ ಸಮ್ಮಾನ, ನೃತ್ಯವೈಭವ, ರಾತ್ರಿ 8.30ಕ್ಕೆ ಸಂಸ್ಥೆಯ ಮಕ್ಕಳಿಂದ ಯಕ್ಷಗಾನ “ಕೃಷ್ಣ ಕೃಷ್ಣ ಶ್ರೀ ಕೃಷ್ಣ” ನಡೆಯಲಿದೆ.
ಡಿ 24 ರಂದು ಸಂಜೆ 4.30 ರಿಂದ ಕರಾವಳಿ ಡ್ಯಾನ್ಸ್ ಧಮಾಕ 2019-20, 7ಕ್ಕೆ ಸಭಾ ಕಾರ್ಯಕ್ರಮ, ರಂಗಭೂಮಿಯಲ್ಲಿ ಸೇವೆಗೈದ ಹಿರಿಯರಿಗೆ ಸಮ್ಮಾನ, ರಾತ್ರಿ 8.30ಕ್ಕೆ ಕರಾವಳಿ ಡ್ಯಾನ್ಸ್ ಧಮಾಕ 2019-20 ರ ಫೈನಲ್ ಕಾರ್ಯಕ್ರಮ ನಡೆಯಲಿದೆ.
ಡಿ 25 ರಂದು ಬೆಳಿಗ್ಗೆ 9.30 ರಿಂದ ಕರಾವಳಿ ಸರಿಗಮ 2019-20 ರ ಸಂಗೀತ ಸ್ಪರ್ಧೆಯ ಸೆಮಿಪೈನಲ್, ಸಂಜೆ 7ಕ್ಕೆ ಸಭಾ ಕಾರ್ಯಕ್ರಮ, ರಂಗಭೂಮಿಯಲ್ಲಿ ಸೇವೆಗೈದ ಹಿರಿಯರಿಗೆ ಸನ್ಮಾನ, ರಾತ್ರಿ 8.30 ಕ್ಕೆ ಕರಾವಳಿ ಸರಿಗಮಪ 2019-20 ರ ಸಂಗೀತ ಸ್ಪರ್ಧೆ ಪೈನಲ್ ನಡೆಯಲಿದೆ.
ಡಿ 26 ರಂದು ಸಂಜೆ 5 ಗಂಟೆಗೆ ಸಂಸ್ಥೆಯ ಮಕ್ಕಳಿಂದ ನೃತ್ಯ ವೈಭವ, ಸಂಜೆ 7ಕ್ಕೆ ನಾಟಕೋತ್ಸವ 2019-20 ಉದ್ಘಾಟನೆ, ಸನ್ಮಾನ ಸಮಾರಂಭ, ರಾತ್ರಿ 8ಕ್ಕೆ ಶಾರದಾ ಕಲಾವಿದೆರ್ ವಗ್ಗ ಅಭಿನಯದ ಸ್ಪರ್ಧಾ ನಾಟಕ “ಪೊರ್ಲಾವೊಡು….. ಈ ಬದ್ಕ್”. ನಡೆಯಲಿದೆ.
ಡಿ 27 ರಂದು ಸಂಜೆ 5ಕ್ಕೆ ನರಿಕೊಂಬು ದ.ಕ.ಜಿ.ಹಿ.ಪ್ರಾ ಶಾಲಾ ಮಕ್ಕಳಿಂದ ಸಾಂಸ್ಕøತಿಕ ವೈಭವ, ಸಂಜೆ 7ಕ್ಕೆ ಸಭಾ ಕಾರ್ಯಕ್ರಮ, ರಂಗಭೂಮಿಯಲ್ಲಿ ಸೇವೆಗೈದ ಹಿರಿಯರಿಗೆ ಸನ್ಮಾನ, ರಾತ್ರಿ 8ಕ್ಕೆ ಅಭಿನಯ ಕಲಾವಿದೆರ್ ಮಂಕುಡೆ ಅಭಿನಯದ ಸ್ಪರ್ಧಾ ನಾಟಕ “ಬಿಲೆ ಕಟ್ಟೊಡ್ಚಿ” ನಡೆಯಲಿದೆ.
ಡಿ 28 ರಂದು ಸಂಜೆ 5ಕ್ಕೆ ಅನಂತಾಡಿ ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲಾ ಮಕ್ಕಳಿಂದ ನಾಟ್ಯ ಝೇಂಕಾರ, ಸಂಜೆ 7ಕ್ಕೆ ಸಭಾ ಕಾರ್ಯಕ್ರಮ, ರಂಗಭೂಮಿಯಲ್ಲಿ ಸೇವೆಗೈದ ಹಿರಿಯರಿಗೆ ಸನ್ಮಾನ, ರಾತ್ರಿ 8ಕ್ಕೆ ರಂಗಭೂಮಿ ಕಲಾವಿದೆರ್ ಬಿ.ಸಿ.ರೋಡು ಅಭಿನಯದ ಸ್ಪರ್ಧಾ ನಾಟಕ “ಒಂಜೆಕ್ ರಡ್ಡೆಕ್” ನಡೆಯಲಿದೆ.
ಡಿ 29 ರಂದು ಬೆಳಿಗ್ಗೆ 9.30 ರಿಂದ ಚಿಣ್ಣರ ಚಿತ್ತಾರ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಸಂಜೆ 5ಕ್ಕೆ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢ ಶಾಲೆ ಶಂಭೂರು ಇವರಿಂದ ನಾಟ್ಯ ಲಹರಿ, ಸಂಜೆ 6.30 ಕ್ಕೆ ಬೆಳ್ಳಿ ಪರದೆಯಲ್ಲಿ ಮಿಂಚಲಿರುವ ವಿಕ್ರಾಂತ್ (ವಿಕ್ಕಿ) ಚಲನಚಿತ್ರ ಸಿನಿಮಾ ಲೋಕ (ಸಾಧನೆ ಮತ್ತು ಪರಿಚಯ), ಸಂಜೆ 7ಕ್ಕೆ ಸಭಾ ಕಾರ್ಯಕ್ರಮ, ರಂಗಭೂಮಿಯಲ್ಲಿ ಸೇವೆಗೈದ ಹಿರಿಯರಿಗೆ ಸಮ್ಮಾನ, ರಾತ್ರಿ 8ಕ್ಕೆ ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಅಭಿನಯದ ಸ್ಪರ್ಧಾ ನಾಟಕ “ಇಂಚಲಾ ಉಂಡಾ” ಕಾರ್ಯಕ್ರಮ ನಡೆಯಲಿದೆ.
ಡಿ 30 ರಂದು ಸಂಜೆ 5 ಗಂಟೆಗೆ ಶ್ರೀ ಶಾರದಾ ಚೆಂಡೆ ಬಳಗ ಬಂಟ್ವಾಳ ಮೊಗರ್ನಾಡು ಇದರ ಕಲಾವಿದರಿಂದ ನೃತ್ಯೋಲ್ಲಾಸ, ಸಂಜೆ 7ಕ್ಕೆ ಸಭಾ ಕಾರ್ಯಕ್ರಮ, ರಂಗಭೂಮಿಯಲ್ಲಿ ಸೇವೆಗೈದ ಹಿರಿಯರಿಗೆ ಸನ್ಮಾನ, ರಾತ್ರಿ 8 ಕ್ಕೆ ಮಾನಸ ಕಲಾವಿದೆರ್ ಫರಂಗಿಪೇಟೆ ಅಭಿನಯದ ಸ್ಪರ್ಧಾ ನಾಟಕ “ಕೈಕ್ ತಿಕ್ಕುಜೆರ್” ಪ್ರಸ್ತುತಗೊಳ್ಳಿದೆ.
ಡಿ 31 ರಂದು ಸಂಜೆ 5ಕ್ಕೆ ಶಂಭೂರು ಸರಕಾರಿ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನೃತ್ಯ ಸಿಂಚನ, ಸಂಜೆ 7ಕ್ಕೆ ಸಭಾ ಕಾರ್ಯಕ್ರಮ, ರಂಗ ಭೂಮಿಯಲ್ಲಿ ಸೇವೆಗೈದ ಹಿರಿಯರಿಗೆ ಸನ್ಮಾನ, ರಾತ್ರಿ 8ಕ್ಕೆ ತೆಲಿಕೆದ ಕಲಾವಿದೆರ್ ಕೊಯಿಲ ಅಭಿನಯದ ಸ್ಪರ್ಧಾ ನಾಟಕ “ಪಂಡ ಕೇನುಜೆರ್” ಪ್ರಸ್ತುತಗೊಳ್ಳಲಿದೆ.
ಜನವರಿ 1ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ, ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ
www.bantwalnews.com Editor: Harish Mambady
Be the first to comment on "ಡಿ.21ರಿಂದ ಜನವರಿ 1ರವರೆಗೆ ಬಂಟ್ವಾಳದಲ್ಲಿ ಕರಾವಳಿ ಕಲೋತ್ಸವ"