ಚಿಣ್ಣರಲೋಕ ಮೋಕೆದ ಕಲಾವಿದೆರೆ ಸೇವಾ ಟ್ರಸ್ಟ್ ಬಂಟ್ವಾಳ, ಚಿಣ್ಣರಲೋಕ ಸೇವಾಬಂಧು ಬಂಟ್ವಾಳ, ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕರಾವಳಿ ಕಲೋತ್ಸವ ಜನವರಿ 26ರವರೆಗೆ ನಡೆಯುತ್ತಿದ್ದು, ಕಾರ್ಯಕ್ರಮಗಳ ವಿವರ ಹೀಗಿದೆ.
ಜನವರಿ 2ರಂದು ಸಂಜೆ 6ಕ್ಕೆ ಮೋಕೆದ ಕಲಾವಿದರು ಅಭಿನಯದ ಮೋಹನದಾಸ ಕೊಟ್ಟಾರಿ ಮುನ್ನೂರು ರಚಿಸಿ ನಿರ್ದೇಶಿಸಿರುವ ನಾಟಕ ತೆಲಿಪುವರಾ ಅತ್ತ್ ಬುಲಿಪುವರಾ ಪ್ರದರ್ಶನಗೊಳ್ಳಲಿದೆ.
ಜನವರಿ 3ರಂದು ರಶೀದ್ ನಂದಾವರ ತಂಡದಿಂದ ಮಾಪುಲೇ ಪಾಟ್, ಜನವರಿ 4ರಂದು ಶನಿವಾರ ಸಂಜೆ 6 ಗಂಟೆಗೆ ಪೊಲೀಸ್ ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ನಗರ, ಸಂಚಾರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಮಾಹಿತಿ ಕಾರ್ಯಕ್ರಮ, 6.30ಕ್ಕೆ ಎಕ್ಸ್ ಟ್ರೀಮ್ ಡ್ಯಾನ್ಸ್ ಕ್ರೀಮ್ ಬಿ.ಸಿ.ರೋಡ್ ವತಿಯಿಂದ ಡ್ಯಾನ್ಸ್ ಕರಾವಳಿ ಫಿಲ್ಮ್ ಡ್ಯಾನ್ಸ್, ಜ.5ರಂದು ಭಾನುವಾರ ಮಧ್ಯಾಹ್ನ 2.30ಕ್ಕೆ ಕೀರ್ತಿಶೇಷ ತೀರ್ಥಪ್ರಸಾದ್ ಸವಿನೆನಪಿನೊಂದಿಗೆ ಕರಾವಳಿ ಸರಿಗಮಪ ಸೀಸನ್ 6 ಸೆಮಿಫೈನಲ್ ಮತ್ತು ಫೈನಲ್, 6ರಂದು ಸೋಮವಾರ ಸಂಜೆ 7ಕ್ಕೆ ಶ್ರೀಲಲಿತೆ ಕಲಾವಿದರು ಮಂಗಳೂರು ವತಿಯಿಂದ ನಾಟಕ ಶನಿಮಹಾತ್ಮೆ, ಜ.7ರಂದು ಚಿಣ್ಣರಲೋಕ ಸೇವಾ ಟ್ರಸ್ಟ್ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ, 8ರಂದು ಬುಧವಾರ ಸಂಜೆ 6ಕ್ಕೆ ಶಾರದಾ ಕಲಾಕೇಂದ್ರ ಟ್ರಸ್ಟ್ ಪುತ್ತೂರು ತಂಡದಿಂದ ಸುದರ್ಶನ ಎಂ.ಎಲ್. ಭಟ್ ನಿರ್ದೇಶನದಲ್ಲಿ ಡಿಂಪಲ್ ಶಿವರಾಜ್ ಮತ್ತು ಬಳಗದಿಂದ ನೃತ್ಯಾರ್ಚನೆ, ನೃತ್ಯರೂಪಕ ಶ್ರೀನಿವಾಸ ಕಲ್ಯಾಣ, 9ರಂದು ಗುರುವಾರ ನರಿಕೊಂಡು ಶಾಲೆ ವಿದ್ಯಾರ್ಥಿಗಳ ಕುಣಿತ ಭಜನೆ, ಬಳಿಕ ರೇಖಾ ದಿನೇಶ್ ಮಂಜೇಶ್ವರ ಶಿಷ್ಯೆಯರಿಂದ ಭರತನಾಟ್ಯ ನೃತ್ಯವೈಭವ, 10ರಂದು ಶುಕ್ರವಾರ ಸಂಜೆ 6ರಿಂದ ಪುರುಷೋತ್ತಮ ಕೊಯಿಲ ಸಾರಥ್ಯದ ತೆಲಿಕೆದ ಕಲಾವಿದೆರ್ ಕೊಯಿಲ ಅಭಿನಯದ ಗೆಂದಗಿಡಿ ನಾಟಕ, 11ರಂದು ಶನಿವಾರ ಸಂಜೆ 6ಕ್ಕೆ ಸುವರ್ಣ ಸರಪಾಡಿ ಕಾರ್ಯಕ್ರಮ, ಸರಪಾಡಿ ಅಶೋಕ್ ಶೆಟ್ಟಿ ಅವರ ಯಕ್ಷಪಯಣದ 50ರ ಸಂಭ್ರಮ, ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೊಂದಿ ಬೆಳಕಿನ ಯಕ್ಷಗಾನ ಮಹಾಸಂಶಪ್ತಕರು, 12ರಂದು ಭಾನುವಾರ ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಬಹುಸಂಸ್ಕೃತಿ ಸಂಭ್ರಮ, ಬಹುಭಾಷಾ ಕವಿಸಂಗಮ, ಶ್ರುತಿ ದೇವಾಡಿಗ ಮತ್ತು ತಂಡದಿಂದ ಯಕ್ಷನಾಟ್ಯ ವೈಭವ, ಶ್ರುತಿಲಯ ಕಲಾಕೇಂದ್ರ ಕುತ್ತಾರ್ ಅವರಿಂದ ಕಂಗೀಲು ನೃತ್ಯ, ಕೊಡವ ಸಾಂಸ್ಕೃತಿಕ ಟ್ರಸ್ಟ್ ನಿಂದ ಕೊಡವ ಉಮ್ಮತ್ತಾಟ್ ನೃತ್ಯ, ರಾಹುಲ್ ಪಿಂಟೊ ಮತ್ತು ತಂಡದಿಂದ ಕೊಂಕಣಿ ನೃತ್ಯ, ಲತೀಫ್ ನೇರಳಕಟ್ಟೆ ತಂಡದಿಂದ ದಫ್ ನೃತ್ಯ, ಪುಷ್ಪರಾಜ್ ಯೇನೆಕಲ್ ಮತ್ತು ತಂಡದಿಂದ ಅರೆಭಾಷೆ ನೃತ್ಯ ವೈಭವ ನಡೆಯಲಿದೆ ಎಂದು ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ತಿಳಿಸಿದ್ದಾರೆ. ಅಮ್ಯೂಸ್ ಮೆಂಟ್ ಪಾರ್ಕ್ ಗೂ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ರಾಜಸ್ತಾನ್, ಮೈಸೂರು ಮೊದಲಾದ ಕಡೆಗಳಿಂದ ಮಳಿಗೆಗಳು ಬಂದಿವೆ, ಫ್ಯಾನ್ಸಿ, ಪಾದರಕ್ಷೆ ಸಹಿತ ಹಲವು ಖರೀದಿಯ ವಸ್ತುಗಳು ಇಲ್ಲಿ ಲಭ್ಯ ಎಂದವರು ತಿಳಿಸಿದ್ದಾರೆ.
Be the first to comment on "ಕರಾವಳಿ ಕಲೋತ್ಸವ: ಕಾರ್ಯಕ್ರಮ ವೈವಿಧ್ಯಗಳೇನು?"