ಕ್ಯೂ ನಿಲ್ತೀರಾ? ಫಾಸ್ಟಾಗ್ ಹಾಕಿಸ್ತೀರಾ?

ಜಾಹೀರಾತು

ಟೋಲ್ ಗಳಲ್ಲಿ ದಿನನಿತ್ಯ ಸಂಚರಿಸುವವರೇ, ನೀವು ಕ್ಯೂ ನಿಲ್ತೀರಾ? ಫಾಸ್ಟಾಗ್ ಹಾಕಿಸ್ಕೊಳ್ತೀರಾ? 

ಕೇಂದ್ರ ಸರಕಾರ ಒಂದು ತಿಂಗಳ ಗಡುವು ವಿಸ್ತರಿಸಿದ್ದರೂ ಫಾಸ್ಟಾಗ್ ಕಡ್ಡಾಯಕ್ಕೆ ಟ್ರಯಲ್ ಗಳು ಭಾನುವಾರವೇ ಆರಂಭಗೊಂಡಿವೆ. ರಾ.ಹೆ. 75ರಲ್ಲಿ ಟೋಲ್ ಗಳಲ್ಲಿ ಕ್ಯಾಶ್ ಓನ್ಸಿ ಮತ್ತು ಫಾಸ್ಟಾಗ್ ಓನ್ಸಿ ಎಂಬ ಲೇನ್ ಗಳು ಕಂಡುಬಂದವು. ಫಾಸ್ಟಾಗ್ ಹಾಕಿಸಿಕೊಂಡವರಿಗೆ ರಾಜಮರ್ಯಾದೆ, ಇಲ್ಲದಿದ್ದರೆ ಕ್ಯೂ ಎಂಬ ಪರಿಸ್ಥಿತಿ ಇತ್ತು.

ಫಾಸ್ಟಾಗ್‌ ವ್ಯವಸ್ಥೆಯ ಮೂಲ ಉದ್ದೇಶವೇ ಟೋಲ್‌ಗ‌ಳಲ್ಲಿ ಕ್ಯಾಶ್‌ಲೆಸ್‌ ಪೇಮೆಂಟ್‌ ಅನ್ನು ಉತ್ತೇಜಿಸುವುದು. ವಾಹನ ದಟ್ಟಣೆಯನ್ನು ಕಡಿತಗೊಳಿಸುವುದು ಇದರ ಮತ್ತೂಂದು ಉದ್ದೇಶವಾಗಿದೆ. ಸರಕಾರ ಫಾಸ್ಟಾಗ್‌ ವಾಹನಗಳಿಗೆ ಶೇ. 2.5 ರಿಯಾಯಿತಿಯನ್ನು ನೀಡುತ್ತದೆ. ಇಂಧನ ಉಳಿತಾಯ ಬಹುದೊಡ್ಡ ಲಾಭ.

ಟೋಲ್‌ ಪ್ಲಾಜಾದಲ್ಲಿರುವ ಫಾಸ್ಟಾಗ್‌ಲೇನ್‌ ಮೂಲಕ ಹಾದು ಹೋದಾಗ ಸ್ವಯಂಚಾಲಿತವಾಗಿ ಆಗಿ ಸ್ಕ್ಯಾನ್‌ ಆಗುತ್ತದೆ. ಇದೇ ವೇಳೆ ಫಾಸ್ಟಾಗ್‌ ಖಾತೆಯಿಂದ ಶುಲ್ಕ ಸಂದಾಯವಾಗುತ್ತದೆ. ಇದರ ನೋಟಿಫಿಕೇಶನ್‌ ಮೊಬೈಲ್‌ಗ‌ಳಿಗೆ ಎಸ್‌ಎಂಎಸ್‌ ಮೂಲಕ ಬರುತ್ತದೆ.  ದೇಶದ ಎಲ್ಲಾ ಟೋಲ್ಳಲ್ಲಿ ಫಾಸ್ಟಾಗ್ಲೇನ್ಗಳನ್ನು ಅಳವಡಿಸಲಾಗುತ್ತದೆ. ಅದರ ಮೂಲಕವೇ ವಾಹನಗಳು ಸಂಚರಿಸಬೇಕಾಗಿದ್ದು, ಟೋಲ್ವೆಚ್ಚವನ್ನು ಫಾಸ್ಟಾಗ್ಮೂಲಕ ಪಾವತಿಸಬೇಕಾಗುತ್ತದೆ. ಒಂದು ವೇಳೆ ಫಾಸ್ಟಾಗ್ವ್ಯವಸ್ಥೆ ಅಳವಡಿಸದೇ ಇದ್ದ ವಾಹನವಾದರೆ ಟೋಲ್ಮೊತ್ತದ ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ. ಟೋಲ್ ಒಂದು ಕಡೆ ಮಾತ್ರ ಫಾಸ್ಟಾಗ್ಮತ್ತು ಇತರ ಪಾವತಿ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು ಕಂಡುಬಂತು. ಇಲ್ಲಿ ಫಾಸ್ಟಾಗ್ಇಲ್ಲದ ವಾಹನಗಳು ಸರತಿ ಸಾಲಿನಲ್ಲಿ ಕಾಯಬೇಕಾಗಿ ಬರುತ್ತದೆ. ಉಳಿದ ಎಲ್ಲಾ ಲೇನ್ಗಳಲ್ಲಿ (ಪಥ) ಫಾಸ್ಟಾಗ್ಗಳು ಮಾತ್ರ ಇರಲಿವೆ.

ಬಂಟ್ವಾಳನ್ಯೂಸ್  ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
ಜಾಹೀರಾತು
ಜಾಹೀರಾತು

Be the first to comment on "ಕ್ಯೂ ನಿಲ್ತೀರಾ? ಫಾಸ್ಟಾಗ್ ಹಾಕಿಸ್ತೀರಾ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*