ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿ 75ರ ನೇತ್ರಾವತಿ ಸೇತುವೆಯಿಂದ ಮೂವರು ನದಿಗೆ ಹಾರಿರುವ ಶಂಕೆ ಇದ್ದು, ಅವರ ಪೈಕಿ ಮಹಿಳೆಯೊಬ್ಬರನ್ನು ರಕ್ಷಿಸಿದರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಜಾಹೀರಾತು
ಉಳಿದಿಬ್ಬರ ಶೋಧ ಕಾರ್ಯ ನಡೆಸಲಾಗುತ್ತಿದೆ. ಮೈಸೂರು ನೋಂದಣಿ ಇರುವ ಮಾರುತಿ ಇಕೋ ವಾಹನದಲ್ಲಿ ಆಗಮಿಸಿ ನೀರಿಗೆ ಹಾರಿದ್ದಾರೆ
. ಕೂಡಲೇ ಸ್ಥಳೀಯರು ಕಾರ್ಯಪ್ರವೃತ್ತರಾಗಿದ್ದು, ಗೂಡಿನಬಳಿ ಹಳೇ ಸೇತುವೆ ಬಳಿ ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ತುಂಬೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಆದರೆ ರಾತ್ರಿ ಸುಮಾರು 11.50ರ ವೇಳೆ ಮೃತಪಟ್ಟಿದ್ದಾರೆ. ಕಾರಿನಲ್ಲಿ ಬಂದು ನೀರಿಗೆ ಹಾರಿದವರ ವಿವರ ಇನ್ನಷ್ಟೇ ತಿಳಿಯಬೇಕಿದೆ. ಬಂಟ್ವಾಳ ನಗರ ಎಸ್ಸೈ ಚಂದ್ರಶೇಖರ್ ಸ್ಥಳದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ.
www.bantwalnews.com Editor: Harish Mambady
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕಾರಲ್ಲಿ ಬಂದು ಸೇತುವೆಯಿಂದ ನೇತ್ರಾವತಿಗೆ ಹಾರಿದರು"