ಇಡೀ ಕುಟುಂಬವೇ ಆತ್ಮಹತ್ಯೆ ಮಾಡುವ ಉದ್ದೇಶದಿಂದ ನದಿಗೆ ಹಾರಿದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಿ.ಸಿ.ರೋಡಿನ ನೇತ್ರಾವತಿ ಸೇತುವೆ ಬಳಿ ಶನಿವಾರ ರಾತ್ರಿ ನಡೆದಿದೆ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕು ಕಡಂಗ ಎಂಬಲ್ಲಿಯ ನಿವಾಸಿಗಳಾದ ಸದ್ಯ ಮೈಸೂರಿನಲ್ಲಿ ವಾಸ ಮಾಡುತ್ತಿದ್ದ ಕೌಶಿಕ್ ಮಂದಣ್ಣ (30), ಕಲ್ಪಿತಾ ಮಂದಣ್ಣ (20) ನೀರುಪಾಲಾಗಿದ್ದರೆ, ಅವರ ತಾಯಿ ಕವಿತಾ ಮಂದಣ್ಣ (55) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ 10.45ರ ಸುಮಾರಿಗೆ ಈ ಘಟನೆ ನಡೆದಿದ್ದು, ನೀರುಪಾಲಾದವರ ಶೋಧಕಾರ್ಯವನ್ನು ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಸ್ಥಳೀಯ ಈಜುಪಟುಗಳು ನಡೆಸುತ್ತಿದ್ದಾರೆ.
ಕೊಡಗು ಜಿಲ್ಲೆ ವೀರಾಜಪೇಟೆಯ ಬಳ್ಳಚಂಡ ಕುಟುಂಬಸ್ಥರಾದ ಕಡಂಗ ಮೂಲದ ಮೈಸುರು ನಿವಾಸಿ ಕೃಷಿಕ ಕಿಶನ್ ಮಂದಣ್ಣ ಶನಿವಾರ ಮೃತಪಟ್ಟಿದ್ದರು. ಈ ಘಟನೆಯಿಂದ ಆಘಾತಗೊಂಡ ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆ ಎನ್ನಲಾಗಿದೆ. ಸುಮಾರು 10.30ರಿಂದ 10.45ರ ವೇಳೆಗೆ ತಮ್ಮ ಪ್ರೀತಿಯ ನಾಯಿ ಜೊತೆ ನದಿಗೆ ಹಾರಿದ್ದಾರೆ. ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗೂಡಿನಳಿ ಹಳೇ ಸೇತುವೆ ಬಳಿ ಕವಿತಾ ಮತ್ತು ನಾಯಿಯನ್ನು ರಕ್ಷಿಸಲಾಯಿತಾದರೂ ಮಧ್ಯರಾತ್ರಿ ಕವಿತಾ ಮೃತಪಟ್ಟಿದ್ದಾರೆ. ಉಳಿದಿಬ್ಬರ ಶೋಧ ಕಾರ್ಯ ಭಾನುವಾರ ಬೆಳಗ್ಗೆಯೂ ಮುಂದುವರಿದಿದೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಸ್ಥಳಕ್ಕೆ ಬೇಟಿ ತನಿಖೆ ನಡೆಸುತ್ತಿದ್ದಾರೆ.
www.bantwalnews.com Editor: Harish Mambady
ಕಾರಲ್ಲಿ ಬಂದು ಸೇತುವೆಯಿಂದ ನೇತ್ರಾವತಿಗೆ ಹಾರಿದರು
Be the first to comment on "ಮೈಸೂರಲ್ಲಿ ತಂದೆ ಸಾವು, ಬಂಟ್ವಾಳದಲ್ಲಿ ನದಿಗೆ ಹಾರಿದ ತಾಯಿ, ಮಕ್ಕಳು"