ನಿಲ್ಲದ ಮಳೆ, ಮನೆ, ಅಂಗಡಿಗಳು ಜಲಾವೃತ

ಕಳೆದ ಆರು ದಿನಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರ ರಾತ್ರಿಯೂ ಮುಂದುವರಿದಿದ್ದು, ಬಂಟ್ವಾಳ ತಾಲೂಕಿನ ಹಲವು ಮನೆಗಳು, ಅಂಗಡಿ ಮುಂಗಟ್ಟು, ಪ್ರಾರ್ಥನಾ ಮಂದಿರಗಳು ಜಲಾವೃತವಾಗಿವೆ.

ರಾತ್ರಿಯ ವೇಳೆ ನೇತ್ರಾವತಿ ನೀರಿನ ಮಟ್ಟ ಏರುತ್ತಿದೆ. ನೀರಿನ ಮಟ್ಟ 10 ಗಂಟೆ ವೇಳೆಗೆ 10.8 ಮೀಟರ್ ಇತ್ತು. ಗಂಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾಗಿದೆ.

ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಗ್ರಾಮ ಲೆಕ್ಕಾಧಿಕಾರಿ ಶಿವನಾಂದ ನಾಟೆಕಾರ್ ಸಿಬ್ಬಂದಿ ಸದಾಶಿವ ಕೈಕಂಬ ಸಹಿತ ಕಂದಾಯ ಇಲಾಖೆಯ ಸಿಬ್ಬಂದಿ ಜತೆಗಿದ್ದರು.

ನಾವೂರು,ಅಜಿಲಮೊಗರು,ಬಂಟ್ವಾಳ ಸಮೀಪದ ಜಕ್ರಿಬೆಟ್ಟು,ಬಡ್ಡಕಟ್ಟೆ,ವಿ.ಪಿ.ರಸ್ತೆ, ಕಂಚಿಕಾರಪೇಟೆ,ಬಸ್ತಿಪಡ್ಪು,ಭಂಡಾರಿಬೆಟ್ಟು,ನಂದರಬೆಟ್ಟು,ತಲಪಾಡಿ, ಬ್ರಹ್ಮರಕೊಟ್ಲು ಮೊದಲಾದೆಡೆ  ಮನೆಗಳು,ತೋಟಗಳಿಗೂ ನೆರೆ ನೀರು ನುಗ್ಗಿದೆ. ಸುಮಾರು 300 ಕ್ಕೂ ಹೆಚ್ಚು ಮಂದಿ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಹಶೀಲ್ದಾರ್ ರಶ್ಮಿ ಅವರು ತಿಳಿಸಿದ್ದಾರೆ.

ಬಂಟ್ವಾಳ ಬಡ್ಡಕಟ್ಟೆ ಮೀನು ಮಾರ್ಕೆಟ್,ಬಸ್ ತಂಗುದಾಣ ಪ್ರದೇಶ,ಆಲಡ್ಕ,ಜಕ್ರಿಬೆಟ್ಟು,ಬಳಿ ರಸ್ತೆಯಲ್ಲಿ ವಾಹನ  ಸಂಚಾರವು ಸ್ಥಗಿತಗೊಂಡಿದೆ. ಎಲ್ಲಾ ವಾಹನಗಳು ಗಾಣದಪಡ್ಪ ಆಗಿ ನೆರೆ ವಿಮೋಚನಾ ರಸ್ತೆಯ ಮೂಲಕಬಂಟ್ವಾಳಕ್ಕೆಪ್ರವೇಶಿಸುತ್ತಿವೆ.

ಬಂಟ್ವಾಳ ಶಾಸಕ ಸ್ಥಿತಿಯನ್ನು ಅವಲೋಕಿಸುವುದರ ಜೊತೆಗೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ನಿವಾಸಿಗಳಾದ ಜಯಪೂಜಾರಿ,ಬಾಲಕೃಷ್ಣ ಪೂಜಾರಿ, ಲಕ್ಷಣ ಪೂಜಾರಿ, ಪೂವಪ್ಪ ಪೂಜಾರಿ ಎಂಬವರ ಮನೆಗಳಿಗೆ ನಾಡದೋಣಿಯ ಮೂಲಕ ತೆರಳಿದ  ಶಾಸಕ,  ಸಂತ್ರಸ್ಥರನ್ನು ಭೇಟಿ ಯಾಗಿ ಇವರನ್ನು ದೋಣಿಯ ಮೂಲಕ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದರು.ಇಲ್ಲಿ  ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು ,ದ್ವೀಪದಂತಿರುವ ಪ್ರದೇಶಗಳಿಗೆ ನಾಡದೋಣಿಯ ಮೂಲಕ ಮಾತ್ರ ಸಂಪರ್ಕ ಸಾಧ್ಯವಾಗಿತ್ತು. ಜಲಾವೃತಗೊಂಡ ಅಜಿಲಮೊಗರು ಮಸೀದಿ ಗೆ ಬೇಟಿ ನೀಡಿ ಅಲ್ಲಿನ ಪ್ರಮುಖರಿಂದ ಮಾಹಿತಿ ಪಡೆದರು.

ಸಹಾಯಕ ಕಮೀಷನರ್ ರವಿಚಂದ್ರ ನಾಯಕ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. 

ಮಾಜಿ ಸಚಿವ ಬಿ.ರಮಾನಾಥ ರೈ ತಾಲೂಕಿನ ವಿವಿಧೆಡೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

 

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ 

  

 

Be the first to comment on "ನಿಲ್ಲದ ಮಳೆ, ಮನೆ, ಅಂಗಡಿಗಳು ಜಲಾವೃತ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*