ಬೆಳಗಿನ ಜಾವ ಮಂಗಳೂರಿನಲ್ಲಿ ಮಹಿಳೆಯೊಬ್ಬರ ಶವದ ಭಾಗಗಳು ದೊರಕಿದ ಘಟನೆ ವರದಿಯಾಗಿದ್ದು, ನಗರ ಪೊಲೀಸರು ಶವದ ಗುರುತು ಪತ್ತೆ ಹಚ್ಚಿದ್ದಾರೆ.
ಸಾಂದರ್ಭಿಕ
ಪ್ರಾಥಮಿಕ ತನಿಖೆಯ ಪ್ರಕಾರ ನಗರದ ನಿವಾಸಿ ಶ್ರೀಮತಿ ಶೆಟ್ಟಿ (ಪ್ರಾಯ ಸುಮಾರು 35ರಿಂದ 40) ಎಂಬಾಕೆಯ ಶವವಿದು ಎಂದು ಹೇಳಲಾಗಿದ್ದು, ವೈಯಕ್ತಿಕ ಕಾರಣಗಳಿಂದ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈಗಾಗಲೇ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದು, ಶವವನ್ನು ನಿನ್ನೆ ರಾತ್ರಿ ತಂದು ರುಂಡವನ್ನು ಕದ್ರಿ ಪಾರ್ಕ್-ಕೆಪಿಟಿ ಬಳಿಯ ಅಂಗಡಿಯೊಂದರ ಬಳಿ ಹಾಕಿದ್ದರೆ, ಕೆಲ ಭಾಗಗಳನ್ನು ಅಲ್ಲೇ ಪಕ್ಕದ ಗೋಣಿ ಚೀಲವೊಂದರಲ್ಲಿ ಬಿಸಾಡಿದ ಸ್ಥಿತಿಯಲ್ಲಿತ್ತು, ದೇಹವನ್ನು ತುಂಡರಿಸಿ, ಗೋಣಿ ಚೀಲದಲ್ಲಿ ತುಂಬಿಸಿ ಮಹಿಳೆಯ ರುಂಡ ಕದ್ರಿ ಕೆಪಿಟಿ ಬಳಿ ಪಾರ್ಕಿನಲ್ಲಿ ಹೆಲ್ಮೆಟ್‍ನಲ್ಲಿ ಪತ್ತೆಯಾಗಿತ್ತು. ಕೆಲ ಹೊತ್ತಿನಲ್ಲಿ ಮಂಗಳೂರಿನ ನಂದಿಗುಡ್ಡ ಸಮೀಪದಲ್ಲೂ ಶವದ ಭಾಗಗಳು ಪತ್ತೆಯಾದ ಕುರಿತು ವರದಿಯಾದವು. ಈಕೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ವೈಯಕ್ತಿಕ ದ್ವೇಷದಿಂದ ಮಾಡಿಬಹುದೇ ಎಂಬ ಶಂಕೆಯಿಂದ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to comment on "ಭೀಕರವಾಗಿ ಹತ್ಯೆಯಾದ ಮಹಿಳೆಯ ಗುರುತು ಪತ್ತೆ, ತೀವ್ರಗೊಂಡ ಪೊಲೀಸ್ ತನಿಖೆ"