ಪೊಳಲಿ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆ: ಹಲವು ವೈಶಿಷ್ಟ್ಯಗಳೊಂದಿಗೆ ಕಾರ್ಯಕ್ರಮ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಬಂಟ್ವಾಳ:  ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಪುನರ್ ಪ್ರತಿಷ್ಟೆ,ಅಷ್ಟಬಂಧ,ನೂತನ ಧ್ವಜಸ್ತಂಭ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಮಾ.4 ರಿಂದ 13ರವರೆಗೆ ವಿವಿಧ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ತಿಳಿಸಿದ್ದಾರೆ. 

ಜಾಹೀರಾತು

ಮಂಗಳವಾರ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 20 ಕೋ.ರೂ.ವೆಚ್ಚದಲ್ಲಿ ದೇವಳದ. ನವೀಕರಣಗೊಳಿಸಲಾಗಿದ್ದು,ಶ್ರೀ ದುರ್ಗಾಪರಮೇಶ್ವರಿ,ಶ್ರೀ ರಾಜರಾಜೇಶ್ವರಿ,ಶ್ರೀ ಮಹಾಗಣಪತಿ,ಶ್ರೀ ಭದ್ರಕಾಳಿ ದೇವರುಗಳ ಹಾಗೂ ಪರಿವಾರ ಸಾನಿಧ್ಯಗಳ ಗರ್ಭಗೃಹಗಳನ್ನು ಪುನರ್ ನಿರ್ಮಾಣಗೊಂಡಿದೆ ಎಂದು ಅವರು ವಿವರಿಸಿದರು.

ಹತ್ತು ದಿನಗಳ ಕಾಲ ನಡೆಯಲಿರುವ   ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಪ್ರತಿನಿತ್ಯ ವಿವಿಧ ವೈಧಿಕ,ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು,   ರಾತ್ರಿವರೆಗೂ ಮೂಡಬಿದ್ರೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ  ಡಾ.ಮೋಹನ್ ಆಳ್ವ ಅವರ ಎಂದರು.ದರ್ಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಆಯೋಜಿಸಲಾಗಿದೆ ಎಂದು ತಿಳಿಸಿದರು.

ಜಾಹೀರಾತು

ಬ್ರಹ್ಮಕಲಶಾಭಿಷೇಕ ನಡೆಯಲಿರುವ ಮಾ.13 ಸೇರಿದಂತೆ ಹತ್ತು ದಿನಗಳ ಕಾಲ ಕ್ಷೇತ್ರಕ್ಕೆ ಸುಮಾರು 10 ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು,ಪ್ರತಿಯೊಬ್ಬ ಭಕ್ತರಿಗೆ ನಿರಂತರ ಉಪಹಾರ ಹಾಗೂ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.ಬ್ರಹ್ಮಕಲಶದ ಯಶಸ್ವಿಗಾಗಿ ವಿವಿಧ ಸಮಿತಿ ಹಾಗೂ ಉಪಸಮಿತಿಯ ಮಾರ್ಗದರ್ಶನದಲ್ಲಿ ಕಾರ್ಯಕರ್ತರು  ಹಗಲಿರುಳು  ಶ್ರಮವಹಿಸುತ್ತಿದ್ದಾರೆ. ಹತ್ತು ದಿನಗಳ ಕಾಲ ಸಕಲ ವ್ಯವಸ್ಥೆಗಳ ಸುಧಾರಣೆ ಮತ್ತು ನಿರ್ವಹಣೆಗಾಗಿ ಸ್ವಯಂಸೇವಕರನ್ನು ಆಹ್ವಾನಿಸಿದ್ದು,ಈಗಾಗಲೇ ಒಂದು ಸಾವಿರ     ಮಹಿಳೆಯರು ,ಎರಡು ಸಾವಿರ ಪುರುಷರು ಹೆಸರು ನೋಂದಾಯಿಸಿದ್ದು, ಸ್ವಯಂಸೇವಕರ ಸಂಖ್ಯೆ ಐದು ಸಾವಿರ ದಾಟುವ ನಿರೀಕ್ಷೆ ಇದ್ದು,ಇವರನ್ನು ಗುಂಪಿಗಳಾಗಿ ವಿಂಗಡಿಸಿ, ಈ ಗುಂಪಿಗೆ ಒಬ್ಬರನ್ನು ನಾಯಕನನ್ನಾಗಿ ನಿಯೋಜಿಸಲಾಗುವುದು ಎಂದರು.

20 ಎಕ್ರೆಯಲ್ಲಿ ಪಾರ್ಕಿಂಗ್ :

ಜಾಹೀರಾತು

ದೇವಳಕ್ಕೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಸುಮಾರು ಇಪ್ಪತ್ತು ಎಕ್ರೆ ಜಮೀನಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸರಕಳ್ಳರ ಮತ್ತು ಕಿಸೆ ಕಳ್ಳರ ಹಾವಳಿ ತಪ್ಪಿಸಲು ದೇವಳದ ಸುತ್ತ ಸಿಸಿ ಕ್ಯಾಮರ ಅಳವಡಿಸಲಾಗುವುದು, ಪಾರ್ಕಿಂಗ್ ಜಾಗದಿಂದಲೇ ಭಕ್ತರಿಗೆ  ದೇವಳಕ್ಕೆನಡೆದುಕೊಂಡು ಬರಲು ಕಾರ್ಪೆಟ್ ವ್ಯವಸ್ಥೆ ಹಾಕಲಾಗುವುದು ಎಂದರು.

ಹೊರೆಕಾಣಿಕೆ: ಸಮಿತಿಯ ಗೌರವಾಧ್ಯಕ್ಷ ಬಿ.ನಾಗರಾಜ ಶೆಟ್ಟಿ ಅವರು ಮಾತನಾಡಿ, ಮಾ.4ರಿಂದ 8ರ ವರೆಗೆ ಜಿಲ್ಲೆಯ ವಿವಿಧ ಕ್ಷೇತ್ರ ಮತ್ತು ಭಾಗದಿಂದ ಕ್ಷೇತ್ರಕ್ಕೆ ಭವ್ಯವಾದ ಹೊರೆಕಾಣಿಕೆ ಮೆರವಣಿಗೆ ಬರಲಿದ್ದು,ಉಗ್ರಾಣದಲ್ಲಿ ಜೋಪಾನವಾಗಿ ಕಾಪಿಡಲಾಗುವುದು ಎಂದರು.ಇದೇ ವೇಳೆ ಜೀರ್ಣೋದ್ದಾರ ಸಮಿತಿಯ ಪ್ರ.ಕಾರ್ಯದರ್ಶಿ ಯು.ತಾರನಾಥ ಆಳ್ವ,ಉಳಿಪಾಡಿಗುತ್ತು  ದೇವಳದ ಜೀರ್ಣೋದ್ದಾರಕ್ಕೆ 18.5 ಕೋ.ರೂ.ವಿನ ಕ್ರಯಾಯೋಜನೆ ತಯಾರಿಸಲಾಗಿತ್ತು.ಈ ಪೈಕಿ ದಾನಿಗಳ ನೆರವು,ವಸ್ತು ಮತ್ತು ಸೇವಾ ರೂಪದಲ್ಲಿ ನಡೆದ ಕಾಮಗಾರಿ ಹಾಗೂ ಹುಂಡಿ ಹಣ,ದೇವಸ್ಥಾನದ ಅನುದಾನ ಸೇರಿದಂತೆ ಒಟ್ಟು 16.5 ಕೋ.ರೂ.ಅನುದಾನ ಒದಗಿಬಂದಿದೆ.ಈಗಾಗಲೇ 14.7 ಕೋ.ರೂ.ಖರ್ಚಾಗಿದ್ದು,ದೇವರ ಕೆಲಸದಲ್ಲಿ ಎಲ್ಲಡೆಯಿಂದ ನೆರವು ಒದಗಿ ಬಂದಿರುವುದು ,ಜೀರ್ಣೋದ್ದಾರ ಕಾರ್ಯಗಳಿಗೆ ಶಕ್ತಿ ತುಂಬಿದೆ ಎಂದು ಹೇಳಿದರು.ದೇವಸ್ಥಾನವನ್ನು ಶಿಲಾಮಯಗೊಳಿಸಲಾಗಿದ್ದು,ಕಾಷ್ಠಶಿಲ್ಪ,ದ್ವಾರಗಳಿಗೆ ರಜತಕವಚ,ಮೇಲಗಚಾವಣಿಗೆ ತಾಮ್ರದ ಹೊದಿಕೆಯೊಂದಿಗೆ ದೇವಸ್ಥಾನವನ್ನು ನವೀಕೃತಗೊಳಿಸಲಾಗಿದೆ ಎಂದರು.

ಹಳೇ ತಾಮ್ರದ ಸ್ಮರಣಿಕೆ:

ಜಾಹೀರಾತು

ಹಳೇ ದೇವಳದ ಮೆರಲ್ಚಾವಣಿಯ ಹೊದಿಸಲಾಗಿದ್ದ  ತಾಮ್ರದ ಹೊದಿಕೆಯನ್ನೇ ಬಳಸಿ ಸ್ಮರಣಿಕೆಯನ್ನು ತಯಾರಿಸಲಾಗಿದ್ದು,ದಾನಿಗಳು ಹಾಗೂ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಗಣ್ಯರಿಗೆ ಈ ಸ್ಮರಣಿಕೆಯನ್ನೇನೀಡಲಾಗುವುದು

ಲೇಪಾಷ್ಠಾಬಂಧ:

ಪೊಳಲಿ ಕ್ಷೇತ್ರದಲ್ಲಿ ವಿಶೇಷವಾಗಿ ಮೂಲದೇವರಾದ ಶ್ರೀ ರಾಜರಾಜೇಶ್ವರೀ ಮಣ್ಣಿನ ರೂಪದಲ್ಲಿರುವುದರಿಂದ ಅದರ ಶಕ್ತಿಯನ್ನು ಕಂಚಿನ ಮೂರ್ತಿಗೆ ಆಹ್ವಾನಿಸಿ ಅಭಿಷೇಕ ನಡೆಸಲಾಗುವುದು ,ಮೂರ್ತಿಗೆ ಲೇಪಾಷ್ಠಾಬಂಧ ನಡೆಸಲಾಗುತ್ತದೆ ಎಂದು ಹಿರಿಯ ಸಾಹಿತಿ, ಬ್ರಹ್ಮಕಲಶದ ಇನ್ನೊರ್ವ ಗೌರವಾಧ್ಯಕ್ಷ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ತಿಳಿಸಿದರು.

ಜಾಹೀರಾತು

ಸುದ್ದಿಗೋಷ್ಠಿಯಲ್ಲಿ ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ,ಪ್ರಧಾನ ಆರ್ಚಕ ಮಾಧವ ಭಟ್,ಅನುವಂಶಿಕ ಮೊಕ್ತೇಸರ ಚೇರ ಸೂರ್ಯ ನಾರಾಯಣ ರಾ.,ಪ್ರಚಾರ ಸಮಿತಿ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ, ಸಮಿತಿ ಪದಾಧಿಕಾರಿಗಳಾದ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ,ವೆಂಕಟೇಶ ತಂತ್ರಿ,ಮಾಧವ ಮಯ್ಯ,ಸುಬ್ರಾಯ ಕಾರಂತ,ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಚಂದ್ರಹಾಸ ಶೆಟ್ಟಿ ರಂಗೋಲಿ,ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಮೊದಲಾದವರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಪೊಳಲಿ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆ: ಹಲವು ವೈಶಿಷ್ಟ್ಯಗಳೊಂದಿಗೆ ಕಾರ್ಯಕ್ರಮ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*