ಮಂಗಳೂರು ನಿವಾಸಿ ಆದ್ಯಾ ಪಿ.ವಿ. 2018ರ ನವೆಂಬರ್‌ನಲ್ಲಿ ನೆಡೆದ ಲೆಕ್ಕ ಪರಿಶೋಧಕರ (ಸಿ.ಎ) ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿದ್ದಾರೆ.
ಕು.ಆದ್ಯಾ, ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪದ್ಯಾಣ ವಿಶ್ವೇಶ್ವರ ಮತ್ತು ಶಕುಂತಲಾ ಅವರ ಪುತ್ರಿ. ವಿವಿಧ ಕೇಂದ್ರೀಯ ವಿದ್ಯಾಲಯಗಳಲ್ಲಿ (ಕೆ.ವಿ) ಪ್ರಾಥಮಿಕ ಶಿಕ್ಷಣ ಪಡೆದ ಅವರು, ಪಣಂಬೂರಿನ ಕೆ.ವಿಯಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ನಗರದ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪಿ.ಯು ಶಿಕ್ಷಣ ಪೂರೈಸಿದರು. ಅದರ ಜತೆ ಜತೆಗೇ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಪದವಿ ಅಧ್ಯಯನ ಮಾಡಿದರು. ಅವರು ಪ್ರಸಿದ್ಧ ಪತ್ರಕರ್ತ ದಿ.ಪದ್ಯಾಣ ಗೋಪಾಲಕೃಷ್ಣ (ಪ.ಗೋ) ಅವರ ಮೊಮ್ಮಗಳು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಿ.ಎ. ಪರೀಕ್ಷೆ ಯಲ್ಲಿ ಉತ್ತೀರ್ಣ"