ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 17: ಪಾದರಕ್ಷೆಯ ಮರದ ಪೆಟ್ಟಿಗೆಯಲ್ಲಿ ಬಿನ್ನವತ್ತಳೆ !

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಸಾಹಿತ್ಯಪ್ರೇಮಿ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ). ಲೇಖನಮಾಲೆಯ 17ನೇ ಕಂತು ಇಲ್ಲಿದೆ.

ವಿಶೇಷ ಸೃಷ್ಟಿಗಳ ಲೋಕದಲ್ಲಿ –ಅಂಕಣ17ಪಾದರಕ್ಷೆಯ ಮರದ ಪೆಟ್ಟಿಗೆಯಲ್ಲಿ ಬಿನ್ನವತ್ತಳೆ !
 
ಹಠಾತ್ತಾಗಿ ವಹಿಸಿಕೊಟ್ಟಿದ್ದ ಪುರವಣಿಯ ಪುಟವಿನ್ಯಾಸದ ಕೆಲಸದ ವೇಳೆಆ ಪುರವಣಿಗಾಗಿ ಬರಹಗಳ ಸಂಗ್ರಹ ವ್ಯವಸ್ಥೆಯ ಹೊಣೆ ನಿರ್ವಹಿಸಿದವರು ಯಾರು ? ಹಾಗೆಯೇಸಂಪಾದಕೀಯ ಶಾಖೆಗೆ ಅವಶ್ಯವಿರುವ ಆಧಾರ –ಆಕರ ಸಾಹಿತ್ಯದ ಸಂಗ್ರಹ ಯಾರ ಸುಪರ್ದಿನಲ್ಲಿದೆ ? ಎಂಬ ಎರಡು ಪ್ರಶ್ನೆಗಳಿಗೂ ಉತ್ತರ ಬೇಕಾಗಿತ್ತು.
 
ಮತ್ತೊಮ್ಮೆ ಮೇಲಿನಿಂದ ‘ಬುಲಾವ್’ ಬರುವ ಮೊದಲೇ ಆ ಬಗ್ಗೆ ಮಾಹಿತಿ ಸಂಗ್ರಹಿಸಿದೆಸಿಕ್ಕ ಮಾಹಿತಿನವಭಾರತದ ಕಾರ್ಯವೈಖರಿಯ ಹಲವು ವೈಶಿಷ್ಟ್ಯಗಳನ್ನು ನಿಚ್ಚಳವಾಗಿ ಕಾಣಿಸಿತು. “ಬೇಕಾಗುವ ಎಲ್ಲಾ ಸಾಧನ ಸಂಗ್ರಹವೂ ಇಲ್ಲಿ ಇದೆ.ನಮ್ಮ ಉಪಯೋಗಕ್ಕೆ ಮಾತ್ರ ಯಾವುದೂ ಸಿಗುವುದಿಲ್ಲಎಲ್ಲವನ್ನೂ ಮೇಲಿನ ಆಫೀಸ್ ಕಪಾಟುಗಳಲ್ಲಿಟ್ಟು ಬೀಗ ಹಾಕಲಾಗಿದೆ. –ಎಂ.ಡಿ.ಯವರ ಆರ್ಡರ್ ಪ್ರಕಾರಇಲ್ಲಿ ಇರುವುದು ಅದು ಒಂದು ಮಾತ್ರ” ಎಂದು ಮರುಗಿದ ಸಹೋದ್ಯೋಗಿಯೊಬ್ಬರು ಕೈ ತೋರಿದತ್ತ ನಡೆದೆಬೆಂಗಳೂರಿನಲ್ಲಿ ಹಿಂದೆಂದೋ ಕಂಡಿದ್ದ ‘ತಲೆದಿಂಬಿನ’ ಜೀರ್ಣಾವಸ್ಥೆಯ ಅಪರಾವತಾರ ಅಲ್ಲೂ ಕಂಡಿತು !ಸಂಪಾದಕೀಯ ಸಿಬ್ಬಂದಿಯಿಂದ ಕೆಲಸ ಮಾಡಿಸಬೇಕಾದರೆಎರಡೇ ಎರಡು ಸೀಲಿಂಗ್ ಫ್ಯಾನ್ ಇದ್ದ ಬಿಸಿಧಗೆಯ ಕಲ್ನಾರು ಶೆಡ್ ನಲ್ಲಿ ಎಲ್ಲರನ್ನೂ ಕೂಡಿಹಾಕಬೇಕುಒಬ್ಬರನ್ನೊಬ್ಬರು ಮಾತನಾಡಿಸದ ಹಾಗೆ ಮೇಜುಗಳನ್ನು ದೂರದೂರಕ್ಕೆ ಇರಿಸಬೇಕು,ಉಸಿರಾಡಬೇಕಾದರೂ ‘ಎಂ.ಡಿ.ಯವರ ಅಪ್ಪಣೆ ತಂದುಕೊಡಿ’ ಎಂದು ಪ್ರಸಾರಾಂಗ ಅಧಿಕಾರಿ ಕಾಮತರ ಮರ್ಜಿ ಕಾಯಬೇಕು ಎಂಬ ಅಘೋಷಿತ ನಿಯಮಗಳೂ ಮನದಟ್ಟಾದವು.
 
ಕುಂದುಕೊರತೆಗಳ ಬಗ್ಗೆ ‘ಏನಾದರೂ’ ಮಾಡಬಲ್ಲ ಹಂತಕ್ಕೆ ನಾನಿನ್ನೂ ಮುಟ್ಟಿರಲಿಲ್ಲಸಮಸ್ಯೆಯ ಅಧ್ಯಯನ ಇನ್ನೂ ನಡೆಯಬೇಕಾಗಿದೆ ಎಂದಷ್ಟೇ ಮನವರಿಕೆಯಾಯಿತುಮಾಡಬೇಕಾದ ಹೆಚ್ಚಿನ ಕೆಲಸಸದ್ಯಕ್ಕೆ ಏನೂ ಇಲ್ಲಎಡಿಟೋರಿಯಲ್ನಲ್ಲಿ ಕುಳಿತಿದ್ದು – ಕರೆದಾಗಲೆಲ್ಲಾ ಇಲ್ಲಿಗೆ ಬರುತ್ತಾ ಇರು’ ಎಂಬ ಆಂತರಿಕ ಅಧ್ಯಾದೇಶದ ಅವಧಿ ಮುಗಿಯುತ್ತಿದ್ದಂತೆಒಮ್ಮೆ ಕರೆ ಕಳುಹಿಸಿದ್ದ ವೇಳೆಯಲ್ಲಿ
 
ನೋಡುವ – ಸಂಡೇ ಸ್ಪೆಷಲ್ ಎಡಿಶನ್ನಿನ ಒಂದು ಡಮ್ಮಿ ಪೇಜ್ ಪ್ರಿಪೇರ್ ಮಾಡಿ” ಎಂಬ ಆದೇಶ ಬಂತುವಿದೇಶಿ ವಿನ್ಯಾಸಗಳ ಮೇಲಿನ ಅವರ ವ್ಯಾಮೋಹದ ಸುಳಿವಿದ್ದ ಕಾರಣಬುದ್ಧಿ ಉಪಯೋಗಿಸಿ, (ಮೇಜಿನ ಪಕ್ಕದಲ್ಲೇ ಇರಿಸಿದ್ದ ಸಿಲೋನ್ ಒಬ್ಸರ್ವರ್ ಪತ್ರಿಕೆಯ ವಿನ್ಯಾಸವನ್ನೂ ಕಳ್ಳನೋಟದಲ್ಲೇ ಗಮನಿಸಿಒಂದು ಫುಲ್ ಸ್ಕೇಪ್ ಹಾಳೆಯಲ್ಲಿ ‘ರವಿವಾರದ ನವಭಾರತ’ ಮುಖಪುಟ ವಿನ್ಯಾಸ ಗೀಚಿದೆ. (ಒಂದೆರಡಾದರೂ ತಿದ್ದುಪಡಿಗಳನ್ನು ಮಾಡುವ ಅವರ ಆಸೆ ಪೂರೈಸಿಕೊಳ್ಳಲುಸಾಕಷ್ಟು ಅವಕಾಶಗಳನ್ನೂ ಒದಗಿಸಿದ್ದೆ!)
 
ತೋರಿಸಿದ್ದ ಡಮ್ಮಿಯನ್ನು ನೋಡಿ “ಐ ಸೀಓ ಕೆ ಯು ಸೀಮಿ ಟುಮಾರೊ” ಎಂದಾಗ – ಅಪೂರ್ವವೆನ್ನಬಹುದಾದ ಮುಗುಳ್ನಗೆಯೊಂದು ಮುಖದಲ್ಲಿದ್ದಂತೆ ಭಾಸವಾಯಿತು.
 
ಅಂದಿನ ದಿನಗಳಲ್ಲಿ ‘ವಿಶೇಷವೆಂದೇ ಕಂಡಿದ್ದ ನವಭಾರತ ‘ಸಾಪ್ತಾಹಿಕ’ ಸಂಚಿಕೆಯ ಕೊಡುಗೆಯಲ್ಲಿ ನನ್ನ ಪಾಲು ಅರ್ಧ ಮಾತ್ರ.ಸಂಚಿಕೆ ಹೊರ ಬರಲು ಆರಂಭವಾದ ಮೇಲೆ ಆ ಕೊಡುಗೆ ಪೂರ್ಣಪ್ರಮಾಣದ್ದಾಯಿತುಪ್ರತಿ ಭಾನುವಾರವೂ ಹೊರಬರಬೇಕಾದ ಪುಟಗಳಿಗೆ “ಬೇಕಾದ್ದೆಲ್ಲವನ್ನೂ ಕೇಳಿಪಡೆಯುವ” ಸ್ವಾತಂತ್ರ್ಯ ದೊರೆತಿತ್ತುಅದನ್ನು ಪೂರ್ಣವಾಗಿ ಉಪಯೋಗಿಸಿಕೊಂಡೆ.ಲೇಖನ  – ಚಿತ್ರ ಇತ್ಯಾದಿಗಳ ಸಂಗ್ರಹವನ್ನು ಬಹುಬೇಗನೆ ಬೆಳೆಸಿಕೊಂಡ ಕಾರಣಮುಂದಿನ ಸಂಚಿಕೆಗಳ ರೂಪುರೇಷೆಯನ್ನು ನಾಲ್ಕು ವಾರಗಳ ಮೊದಲೇ ನಿರ್ಧರಿಸಲು ಸಾಧ್ಯವಾಯಿತು.
 
ಸಂಪನ್ಮೂಲದ ಅಭಾವ ನವಭಾರತಕ್ಕೆ ಮೊದಲಿನಿಂದಲೂ ಇರಲಿಲ್ಲಜಿಲ್ಲಾ ಮಟ್ಟದ ದಿನಪತ್ರಿಕೆಯೊಂದನ್ನು ಒಯ್ಯಬಹುದಾದಷ್ಟು ಎತ್ತರಕ್ಕೆ ಒಯ್ದ ವಿ.ಎಸ್.ಕುಡ್ವರುಅದರ ವ್ಯಾಪ್ತಿಯನ್ನು ಇನ್ನೂ ವಿಸ್ತರಿಸುವತ್ತ ಮಗನು ಮಾಡಿದ್ದ ಸಲಹೆ ಪ್ರಿಯವೆನಿಸಿದ್ದರಿಂದ ಅವುಗಳನ್ನು ಕಾರ್ಯಗತಗೊಳಿಸುವ ಸ್ವಾತಂತ್ರ್ಯವನ್ನೂ ಕೊಟ್ಟಿದ್ದರುಪಿ.ಟಿ.ವಾರ್ತಾ ವ್ಯವಸ್ಥೆರೋಟರಿ ಮುದ್ರಣ ಯಂತ್ರರಾಜ್ಯ ರಾಜಧಾನಿ ಮತ್ತು ದೇಶದ ಮಹಾನಗರಗಳಲ್ಲಿ ಸ್ವಂತ ಪ್ರತಿನಿಧಿಗಳು.ಬಿ.ಸಿ. –..ಎನ್.ಎಸ್.ಸದಸ್ಯತ್ವ ಇತ್ಯಾದಿಗಳೆಲ್ಲವನ್ನೂ ಹೊಂದಿದ್ದ ಜಿಲ್ಲಾ ಕೇಂದ್ರದ ಪತ್ರಿಕೆ ಅಂದಿನ ಮಟ್ಟಿಗೆ ಕರ್ನಾಟಕದಲ್ಲಿ ಬೇರಾವುದೂ ಇರಲಿಲ್ಲ. (ಹುಬ್ಬಳ್ಳಿಯನ್ನು ಪ್ರಾದೇಶಿಕ ಕೇಂದ್ರವೆಂದೇ ಪರಿಗಣಿಸಬೇಕು – ಜಿಲ್ಲಾ ಕೇಂದ್ರವಲ್ಲಪ್ರತಿಗಳ ವಿತರಣೆಗೆ ಸಹ ಸಂಸ್ಥೆಯ ಬಸ್ ಗಳ ಸೌಕರ್ಯವಿತ್ತು – ಏಜೆಂಟರ ವ್ಯವಹಾರದ ವೇಳೆ ಅದ್ಭುತ ಹಿಡಿತವೂ ಇದ್ದು ಜಾಹಾರಾತು ಪ್ರಸಾರಗಳೆರಡರಿಂದಲೂ ಹೇರಳ ಸಂಪಾದನೆಯಾಗುತ್ತಿತ್ತು.
 
ಇರುವ ಎಲ್ಲಾ ಸೌಕರ್ಯಗಳನ್ನು ಉಪಯೋಗಿಸಿಕೊಂಡುಆತ್ಮತೃಪ್ತಿಯಿಂದ ಇಲ್ಲಿ ಕೆಲಸ ಮಾಡಲು ಸಾಧ್ಯ – ಸಣ್ಣ ಪುಟ್ಟ ಕಿರುಕುಳಗಳು ನಗಣ್ಯವೆಂದುಕೊಂಡರೆ – ಎಂಬ ತೀರ್ಮಾನಕ್ಕೆ ತಿಂಗಳೊಳಗೇ ಬಂದೆ.
 
ಆ ತಿಂಗಳ ಕೊನೆಯ ದೈನಿಕ ಪುಟಗಳಲ್ಲೂ ಸಾಧ್ಯವಿರುವ ಹೊಸ ವಿನ್ಯಾಸಗಳನ್ನು ಅಳವಡಿಸಬೇಕೆಂದು ಆದೇಶ ಬಂದಾಗ ಅದನ್ನು ಹೆಚ್ಚಿನ ಹೊಣೆ ಎಂದು ತಿಳಿದುಕೊಳ್ಳದೆ ಒಪ್ಪಿಕೊಂಡೆಆ ಒಪ್ಪಿಗೆಯಿಂದಾಗಿತಮ್ಮ ಕಾರ್ಯವಿಧಾನವನ್ನು ಬದಲಾಯಿಸಲು ಇಚ್ಛೆಯೇ ಇರದ ಸಹೋದ್ಯೋಗಿಗಳನ್ನು ಕೂಡಾ ಹೊಂದಾಣಿಕೆಯಿಂದ ಮನವೊಲಿಸುವ (ಹಿಂದೆ ಗಮನಿಸದೆ ಉಳಿದಿದ್ದಅಗತ್ಯವೂ ಮನದಟ್ಟಾಯಿತು.
 
ಪೂರ್ಣ ಪ್ರಮಾಣದ ದಿನಪತ್ರಿಕೆಗೆ ಬೇಕಾಗಿದ್ದ ಸಾಧನಸಂಪತ್ತು– ಪರಿಕರಗಳನ್ನು ಸಂಚಯಿಸಿ ತಮ್ಮ ಮುಂದಿನ ಪೀಳಿಗೆಗೆ ವಹಿಸಿಕೊಟ್ಟ ವಿ.ಎಸ್.ಕುಡ್ವರ ಗಮನಅವುಗಳನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳಲು ತಮ್ಮ ಸಿಬ್ಬಂದಿಗೆ ಕೊಡಬೇಕಾದ ತರಬೇತಿಯತ್ತ ಹರಿದಿರಲಿಲ್ಲಅವರ ಮುಂದಿನವರೂ ಅದರ ಅವಶ್ಯಕತೆಯನ್ನು ಪರಿಗಣಿಸಿರಲಿಲ್ಲಕಂಪೋಸಿಂಗ್ ವಿಭಾಗದಲ್ಲಂತೂ ‘ಪ್ರಶ್ನಾತೀತ’ ಕಾರ್ಯವೈಖರಿ ಇತ್ತುಸಂಪಾದಕೀಯ ವಿಭಾಗ– ತಮ್ಮ ನಿರ್ದಿಷ್ಟ ಕೆಲಸಗಳನ್ನು ನಿರ್ವಹಿಸುತ್ತಿದ್ದ ಕೆಲವೇ ಮಂದಿ ಹಳಬರ ಹೊರತಾಗಿ – ತಮಗಿಷ್ಟ ಬಂದ ರೀತಿಯಲ್ಲಿ ಕೆಲಸ ಮಾಡುವ ‘ಉತ್ಸಾಹಿಗಳಿಂದ ತುಂಬಿತ್ತು. (ಅವರಲ್ಲೂ ಹೆಚ್ಚಿನವರು ಪದವಿ ಪರೀಕ್ಷಾ ಫಲಿತಾಂಶ ಕಾಯುವ ತಾತ್ಕಾಲಿಕ ಅವಧಿಯಲ್ಲೇ ಅಲ್ಪಸ್ವಲ್ಪ ಸಂಪಾದನೆಗಾಗಿ ಬಂದಿದ್ದವರು.)
 
ಅದರಿಂದಾಗಿಸುದ್ದಿಗಳ ಶೀರ್ಷಿಕೆಗಳು ಅದಲಿಬದಲಾಗುವುದುಕೊನೆಯ ಕಾಲಂನ ವರದಿಯ ಅಂತ್ಯ ಒಂದನೆ ಕಾಲಂನಲ್ಲಿ ಬರುವುದುತಲೆಬರಹದ ಅಚ್ಚುಮೊಳೆಗಳ ಅನಿರ್ಬಂಧಿತ ಗಾತ್ರಇತ್ಯಾದಿ ಆಭಾಸಗಳೂ
 
ಟೆಲಿಪ್ರಿಂಟರ್  ಸುದ್ದಿಗಳನ್ನು ವಿಂಗಡಿಸಿ ಹಂಚುವ ವ್ಯವಸ್ಥೆ ಇಲ್ಲದೆ, ‘ಸಿಕ್ಕಿದವರು ಸಿಕ್ಕಿದ್ದನ್ನೇ ಭಾಷಾಂತರಿಸಿದ’ ಕಾರಣಒಂದು ಸುದ್ದಿ ಮೂರು ರೀತಿಯಲ್ಲಿ ಒಂದೇ ಪುಟದಲ್ಲಿ ಪ್ರಕಟವಾಗುವುದು (ವರದಿಯಲ್ಲಿನ ಒಂದು ಹೆಸರಿಗೆ ಮೂರು ರೂಪಗಳೂ ಇರುವುದುಮುಂತಾದ ಗೊಂದಲಗಳೂ 
 
ಸಾಕಷ್ಟು ಆಗುತ್ತಿದ್ದವುಅನುವಾದ ವೈಶಿಷ್ಟ್ಯದಲ್ಲಿ
 
Sandalwood Casket ಎಂಬ ಶಬ್ದಗಳನ್ನು ಯಥಾವತ್ ಅನುವಾದಿಸಿದಾಗ ಮೊದಲನೇ ಶಬ್ದವನ್ನು ವಿಭಜಿಸಿ, The President was presented with an address in a sandalwood casket ಎಂಬುದನ್ನು ‘ರಾಷ್ಟ್ರಪತಿಯವರಿಗೆ ಪಾದರಕ್ಷೆಯ ಮರದ ಪೆಟ್ಟಿಗೆಯಲ್ಲಿ ಬಿನ್ನವತ್ತಳೆ ಅರ್ಪಣೆ’ ಎಂದು ಪ್ರಕಟಿಸಿದ್ದ (ನನ್ನ ಹಿಂದಿನ ಕಾಲದಒಂದು ನಿದರ್ಶನವೂ ಪ್ರಖ್ಯಾತವಾಗಿತ್ತು!
 
ಇಂಥ ಅಭಾಸಗಳು ಆಗದಂತೆ ನೋಡಿಕೊಳ್ಳುವ ಹೊಣೆ ಹೊರಬೇಕಾದರೆಸೂಕ್ತ ಅಧಿಕಾರದ ಜೊತೆಗೆಸ್ವಾತಂತ್ರ್ಯವೂ ಬೇಕು ಎಂಬುದಕ್ಕೆ ‘ಸ್ವಾತಂತ್ರ್ಯ ಕೊಟ್ಟ’ ವಾಗ್ದಾನ ಬಂದಿತುಆದರೆಹುದ್ದೆಯ ಹೆಸರು ಸೂಚಿಸುವ ನೇಮಕಾತಿಯ ಪತ್ರ ಮಾತ್ರ ಬರಲಿಲ್ಲ. (ಸಂಪಾದಕೀಯ ವಿಭಾಗದ ಯಾರಿಗೂ ಹೊರಹೊಣೆಯ ಸೂಚನೆ ಕೂಡಾ ಹೋಗಲಿಲ್ಲ!)
 
ಅದರಿಂದಾಗಿ ಮೊದಮೊದಲು ‘ಅಧಿಕಾರ ಚಲಾಯಿಸಲು ಪ್ರಯತ್ನಿಸುತ್ತಿದ್ದಾನೆ’ ಎಂದು ಭಾವಿಸಿದ್ದ ಸಹೋದ್ಯೋಗಿಗಳ ಅಸಂತುಷ್ಟಿಯ ಅನುಭವವಾಯಿತುಕ್ರಮೇಣ ಪರಿಹಾರವನ್ನೂ ಕಂಡುಕೊಳ್ಳಲಾಯಿತು.
 
 (ಮುಂದಿನ ಭಾಗದಲ್ಲಿ)

(ಇದು ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರು ಬರೆದು, ಅಂಕಣಮಾಲೆಯಾಗಿ ಪ್ರಕಟಗೊಂಡು, ಪುಸ್ತಕರೂಪವಾಗಿ ಹೊರಬಂದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಪುಸ್ತಕದ ಮರುಪ್ರಕಟಣೆ.)

ಜಾಹೀರಾತು

for more info about padyana gopalakrishna click this link:

https://bantwalnews.com/2017/08/17/pa-go-series-15/

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 17: ಪಾದರಕ್ಷೆಯ ಮರದ ಪೆಟ್ಟಿಗೆಯಲ್ಲಿ ಬಿನ್ನವತ್ತಳೆ !"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*