ಕಂದಾಯ ಇಲಾಖೆ, ಸಂಗಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ, ವ್ರದ್ದಾಪ್ಯ ವೇತನ ಮತ್ತು ವಿವಿಧ ಸರಕಾರಿ ಸವಲತ್ತು ವಿತರಣೆ ಕಾರ್ಯಕ್ರಮ ಸಂಗಬೆಟ್ಟು ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉಳ್ಳಿಪ್ಪಾಡಿ ಅವರು 46 ಜನರಿಗೆ ಹಕ್ಕುಪತ್ರ, 10 ಜನರಿಗೆ ಮಾಸಿಕ ವೇತನ ಪಿಂಚಣಿ , 10 ಜನರಿಗೆ ಪಾಕ್ರತಿಕ ವಿಕೋಪ ಚೆಕ್ ಹಾಗೂ ರಾಷ್ಟ್ರೀಯ ಕುಟುಂಬ ಸಹಾಯ ಧನ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಮಾಜಿ ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಗ್ರಾಮ ಪಂಚಾಯತ್ ಅದ್ಯಕ್ಷೆ ಗುಲಾಬಿ ಶೆಟ್ಟಿ ಗ್ರಾ.ಪಂ.ಉಪಾಧ್ಯಕ್ಷ ಸತೀಶ್ ಪೂಜಾರಿ, ಎಪಿಎಂಸಿ ಮಾಜಿ ಸದಸ್ಯ ರತ್ನಾಕರ ಚೌಟ , ಗ್ರಾ.ಪಂ.ಸದಸ್ಯ ರಾದ ಶ್ರೀಧರ ಎಸ್ ಪಿ, ಸುಲೋಚನ, ನಳಿನಿ , ವಿಮಲ, ಸುರೇಶ್ ಕುಲಾಲ, ಮಯ್ಯೆದಿ, ದೇವಪ್ಪ ಕರ್ಕೇರ, ಪದ್ಮಲತಾ , ಪಂಚಾಯತ್ ಸಿಬ್ಬಂದಿ ಮಹಾಬಲ ನಾಯ್ಕ, ಗ್ರಾಮ ಸಹಾಯ ಕ ಸತೀಶ್ ಶೆಟ್ಟಿ ಗಾರ್, ಪ್ರಮುಖರಾದ ಉಮೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಕುಮಾರ್ ಸ್ವಾಗತಿಸಿ , ಗ್ರಾಮ ಕರಣಿಕ ಜನಾರ್ಧನ ವಂದಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿಲ್ಬಿಯಾ ಪೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ಗುಂಡು ಎಸೆತ ಹಾಗೂ ಚಕ್ರ ಎಸೆತದಲ್ಲಿ ಮಿಂಚಿದ ಸಿದ್ದಕಟ್ಟೆ ಗುಣಶ್ರೀ ವಿದ್ಯಾಲಯದ ವಿದ್ಯಾರ್ಥಿ ರಾಷ್ಟ್ರೀಯ ಕ್ರೀಡಾ ಪಟು ರಮ್ಯ ಶ್ರೀ ಜೈನ್ ಅವರನ್ನು ಗೌರವಿಸಲಾಯಿತು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಂಗಬೆಟ್ಟಿನಲ್ಲಿ ಸರಕಾರಿ ಸವಲತ್ತುಗಳ ವಿತರಣೆ"