ಬಂಟ್ವಾಳದಲ್ಲೇ ಇರುವ ಸಂಪನ್ಮೂಲ ಬಳಸಿ, ವೆನ್ಲಾಕ್ ಗೆ ಅನಿವಾರ್ಯವಾದರೆ ಕಳಿಸಿ, ಸಮನ್ವಯತೆಯಿಂದ ಕೆಲಸ ನಿರ್ವಹಿಸಿ

ಬಂಟ್ವಾಳದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳ ಸಭೆ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ ದ.ಕ.ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಕುಮಾರ್, ಎಸ್ಪಿ ಋಷಿಕೇಶ್ ಸೋನಾವಣೆ, ಸಭೆಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪುರಸಭೆ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ತಹಸೀಲ್ದಾರ್ ರಶ್ಮಿ ಎಸ್.ಆರ್, ಡಿವೈಎಸ್ಪಿ ವೆಲಂಟೈನ್ ಡಿಸೋಜ, ತಾಪಂ ಇಒ ರಾಜಣ್ಣ,, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಬಿಇಒ ಜ್ಞಾನೇಶ್, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ವಿಟ್ಲ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು, ಸಹಿತ ವೈದ್ಯಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ‌ಉಪಸ್ಥಿತರಿದ್ದರು. ಈ ಸಂದರ್ಭ ಡಿಸಿ, ಜಿಪಂ ಸಿಇಒ, ಉಸ್ತುವಾರಿ ಸಚಿವರು, ಸಂಸದರು ಮತ್ತು ಶಾಸಕರು ಕೆಲವೊಂದು ಮಾರ್ಗಸೂಚಿಗಳನ್ನು ಹಾಗೂ ಮಾಹಿತಿಗಳನ್ನು ಸಭೆಗೆ ನೀಡಿದರು. ಅವು ಹೀಗಿದೆ.

  • ರೋಗಲಕ್ಷಣಗಳು ಇರುವವರಿಗೆ ಕೋವಿಡ್ ಟೆಸ್ಟ್ ಮಾಡಿದರೆ 24 ಗಂಟೆಯಲ್ಲಿ ವರದಿ ಲಭಿಸುತ್ತದೆ. ಈ ಕುರಿತು ಸೋಮವಾರದಿಂದ ಕ್ರಮ ಕೈಗೊಳ್ಳಲಾಗುತ್ತದೆ.
  • ರೋಗಲಕ್ಷಣಗಳು ಇದ್ದರೆ, ನೆಗೆಟಿವ್ ಬಂದರೂ ಜಾಗ್ರತೆ ವಹಿಸಬೇಕು. ಅನವಶ್ಯಕವಾಗಿ ಓಡಾಡದಿರಿ.
  • ಯಾವ್ಯಾವ ಕಾರ್ಯಪಡೆ ಹೇಗೆ ಕೆಲಸ ಮಾಡಬೇಕು ಎಂಬ ಮಾರ್ಗಸೂಚಿಯನ್ವಯ ಕೆಲಸ ಮಾಡಲಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ಅಧಿಕಾರಿಗಳು ಕೊರೊನಾ ಹಾಟ್ ಸ್ಪಾಟ್ ಎಲ್ಲಿ ಆಗಿದೆ ಎಂಬ ಕುರಿತು ನೀಡಬೇಕು. ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ನೀಡಬೇಕು.
  • ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸೌಲಭ್ಯ ತಾಲೂಕಿನಲ್ಲೇ ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಅಧಿಕಾರಿಗಳ ಸಮನ್ವಯತೆ ಇಲ್ಲಿ ಮುಖ್ಯ ಪರಸ್ಪರ ಅಸಹಕಾರದ ದೂರು ಬರಬಾರದು. ಇದು ದೂರುವ ಹೊತ್ತಲ್ಲ.
  • ಒಬ್ಬ ಕೋವಿಡ್ ಸೋಂಕಿತನ 30 ಪ್ರಾಥಮಿಕ ಸಂಪರ್ಕ ಗುರುತಿಸಿ, ಅವರಿಗೆ ಕೋವಿಡ್ ಪರೀಕ್ಷೆ ಮಾಡಿಸಿ. ಅದೇ ರೀತಿ ಕೋವಿಡ್ ಸೋಂಕಿತರ ಮನೆಯನ್ನು ಮೈಕ್ರೋ ಕಂಟೈನ್ಮೆಂಟ್ ವಲಯವನ್ನಾಗಿ ಮಾಡಿರಿ. ಸ್ಥಳೀಯವಾಗಿ ಟಾಸ್ಕ್ ಫೋರ್ಸ್ ನಿಗಾ ವಹಿಸಿ. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಿರಿ.
  • ಕೊರೊನಾ ಸಂಬಂಧಿಸಿ, ಯಾವ ಇಲಾಖೆಯೂ ನಮಗೆ ಸಂಬಂಧವಿಲ್ಲ ಎಂದು ಹೇಳುವ ಹಾಗಿಲ್ಲ. ಯಾರು ಸರಿಯಾಗಿ ಕೆಲಸ ಮಾಡುತ್ತಿಲ್ಲವೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
  • ರೋಗಲಕ್ಷಣ ಹೊಂದಿರುವ ಅಥವಾ ರೋಗ ಸೋಂಕಿತರ ಡಾಟಾ ಸಂಗ್ರಹ ಮಾಡಬೇಕು.ಮೊಬೈಲ್ ಟೀಮ್ ಗಳನ್ನು ಉಪಯೋಗಿಸಿ, ಎಲ್ಲ ಇಲಾಖೆಗಳ ತಂಡವನ್ನು ಬಳಸಿಕೊಳ್ಳಿ. ಮೇ ಅಂತ್ಯದಲ್ಲಿ ಕೊರೊನಾ ಸಂಖ್ಯೆ ಜಾಸ್ತಿ ಆಗುವ ಸಾಧ್ಯತೆಯೂ ಇರುವ ಕಾರಣ ಗಂಭೀರವಾಗಿ ಕೆಲಸ ಮಾಡಿರಿ.
  • ಎರಡನೇ ಬಾರಿ ಲಸಿಕೆ ಹಾಕುವವರಿಗೆ ಪ್ರಾಧಾನ್ಯತೆ ನೀಡಲಾಗುವುದು. ವೆನ್ಲಾಕ್ ಗೆ ಒಮ್ಮೆಲೇ ರೋಗಿಗಳ ಸಂಖ್ಯೆ ಜಾಸ್ತಿ ಆಗುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಲ್ಲೇ ರೋಗ ಉಪಶಮನದ ಕುರಿತು ಕ್ರಮ ಕೈಗೊಳ್ಳಬೇಕು. ಬಂಟ್ವಾಳದಲ್ಲಿ ಸುಸಜ್ಜಿತ ಆಸ್ಪತ್ರೆ, ತಜ್ಞ ವೈದ್ಯರು, ಬೇಕಾದ ಮೂಲಸೌಕರ್ಯಗಳು ಇರುವಾಗ ವೆನ್ಲಾಕ್ ಗೆ ಅನಿವಾರ್ಯವಾದರೆ ಮಾತ್ರ ಕಳುಹಿಸುವಂತೆ ನೋಡಿಕೊಳ್ಳಿ. ಇಲ್ಲಿರುವ 10 ವೆಂಟಿಲೇಟರ್ ಗಳನ್ನು ಸದುಪಯೋಗಪಡಿಸಿಕೊಳ್ಳಿ.
  • ಆಕ್ಸಿಜನ್ ಕೊರತೆ ನೀಗಿಸಲು ಜಂಬೋ ಸಿಲಿಂಡರ್ ಗಳನ್ನೂ ವ್ಯವಸ್ಥೆ ಮಾಡಿಕೊಳ್ಳಿ.ಕೋವಿಡ್ ಕೇರ್ ಸೆಂಟರ್ ಗೆ ಒಬ್ಬರಿಗೆ 250 ರೂಗಳಂತೆ ದಿನಕ್ಕೆ ಖರ್ಚು ಮಾಡಲು ಅವಕಾಶವಿದ್ದು ಉತ್ಕೃಷ್ಟ ಗುಣಮಟ್ಟದ ಆಹಾರವನ್ನೇ ಅವರಿಗೆ ಒದಗಿಸಿ.ಮೃತದೇಹ ಸಾಗಾಟ, ಅಂತ್ಯಸಂಸ್ಕಾರವನ್ನು ಸರ್ಕಾರದ ವತಿಯಿಂದ ಉಚಿತವಾಗಿ ಮಾಡಲಾಗುತ್ತದೆ. ಇದಕ್ಕೆ ಯಾವುದೇ ಹಣ ನೀಡುವುದು ಬೇಕಿಲ್ಲ.
  • ಪ್ರೈವೇಟ್ ಆಂಬುಲೆನ್ಸ್ ಗಳಿಗೆ ಜಿಪಿಎಸ್ ಅಳವಡಿಸಲಾಗುವುದು.
  • ರೆಮಿಡಿಸಿರ್ ಔಷಧವನ್ನು ಅಗತ್ಯವುಳ್ಳವರಿಗಷ್ಟೇ ನೀಡಿ.
  • ಫರಂಗಿಪೇಟೆಯಲ್ಲಿ ಲಾಕ್ಡೌನ್ ಉಲ್ಲಂಘನೆ ಕುರಿತು ದೂರುಗಳು ಬರುತ್ತಿವೆ. ಪೊಲೀಸ್ ಇಲಾಖೆ ನಿಗಾ ವಹಿಸಿ.
  • ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಸಭೆ ಮಾಡಿ, ಸಮಸ್ಯೆ ಬಗೆಹರಿಸುವ ಕುರಿತು ಕ್ರಮ ಕೈಗೊಳ್ಳಿ ಬೆಂಗಳೂರು ಮತ್ತಿತರ ಕಡೆಗಳಿಂದ ಬಂದವರನ್ನು ಅವರವರ ಮನೆಗಳಲ್ಲೇ ಕ್ವಾರಂಟೈನ್ ಮಾಡಿ, ಲಕ್ಷಣ ಕಂಡರೆ ತಪಾಸಣೆ ಮಾಡಲು ಮನವೊಲಿಸಿ.
  • ಏಪ್ರಿಲ್ ನಲ್ಲಿ 542 ಪ್ರಕರಣ:ಕೊರೊನಾಕ್ಕೆ ಸಂಬಂಧಿಸಿ ಏಪ್ರಿಲ್ 1ರಿಂದ 30ರವರೆಗೆ ತಾಲೂಕಿನಲ್ಲಿ ಒಟ್ಟು 542 ಪ್ರಕರಣಗಳು ವರದಿಯಾಗಿವೆ. ಇವರಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ 194 ಮಂದಿ ಹಾಗೂ ಸೆಕೆಂಡರಿ ಕಾಂಟಾಕ್ಟ್ ಆಗಿದ್ದ 6 ಮಂದಿ ಒಳಗೊಂಡಿದ್ದಾರೆ. 391 ಮಂದಿ ಹೋಂ ಐಸೋಲೇಶನ್ ನಲ್ಲಿದ್ದರೆ, 34 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 12 ಮಂದಿ ಚಿಕಿತ್ಸೆ ಪಡೆದಿದ್ದಾರೆ. 12 ಮಂದಿ ಮೃತಪಟ್ಟಿದ್ದಾರೆ. ಇರಾ ಗ್ರಾಮದ ಒಂದೇ ಮನೆಯ ಐದು ಮಂದಿ, ಬಿ.ಕಸ್ಬಾ ಗ್ರಾಮದ ಪಲ್ಲಮಜಲಿನ ಒಂದೇ ಮನೆಯ 7 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಡಾ. ದೀಪಾ ಪ್ರಭು ಹೇಳಿದರು.
  • ಪುರಸಭೆ ವ್ಯಾಪ್ತಿಯಲ್ಲಿ 114 ಸೋಂಕಿತರು: ಬಂಟ್ವಾಳ ಪುರಸಭೆ ಒಂದರಲ್ಲೇ ಒಟ್ಟು 114 ಮಂದಿ ಸೋಂಕಿತರಿದ್ದು, ಇವರಲ್ಲಿ 102 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ. ಬಂಟ್ವಾಳ ಪುರಸಭೆ ವ್ಯಾಪ್ತಿಯ ಪಲ್ಲಮಜಲು ಹಾಗೂ ಕೋಂಗ್ರಬೆಟ್ಟು ಪರಿಸರದಲ್ಲಿ ಅಧಿಕ ಸೋಂಕಿತರು ಇದ್ದಾರೆ ಎಂದು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಹೇಳಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಂಟ್ವಾಳದಲ್ಲೇ ಇರುವ ಸಂಪನ್ಮೂಲ ಬಳಸಿ, ವೆನ್ಲಾಕ್ ಗೆ ಅನಿವಾರ್ಯವಾದರೆ ಕಳಿಸಿ, ಸಮನ್ವಯತೆಯಿಂದ ಕೆಲಸ ನಿರ್ವಹಿಸಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*