ಬಂಟ್ವಾಳ ಪೇಟೆಯಲ್ಲಿರುವ ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಯ ಎಲ್ಲ 75 ವಿದ್ಯಾರ್ಥಿಗಳು ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು ಶೇ.100 ಫಲಿತಾಂಶ ದಾಖಲಿಸಿದೆ.

ವರದರಾಜ ಕಾಮತ್
ಸತತ 10ನೇ ಬಾರಿ ಶೇ.100 ಫಲಿತಾಂಶ ದಾಖಲಿಸಿದ ಕೀರ್ತಿ ಶಾಲೆಗೆ ದೊರಕಿದೆ ಎಂದು ಶಾಲಾ ಸಂಚಾಲಕ ಎ.ಗೋವಿಂದ ಪ್ರಭು, ಮುಖ್ಯೋಪಾಧ್ಯಾಯಿನಿ ರೋಶನಿ ತಾರಾ ಡಿಸೋಜ ತಿಳಿಸಿದ್ದು, ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ.
17 ಅತ್ಯುತ್ತಮ ಶ್ರೇಣಿ, 30 ಪ್ರಥಮ ಶ್ರೇಣಿ, 28 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ವರದರಾಜ ಕಾಮತ್ 601 ಅಂಕ ಗಳಿಸಿ ಶಾಲೆಗೆ ಮೊದಲಿಗನಾಗಿದ್ದಾನೆ.
Be the first to comment on "ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆ: ಸತತ 10ನೇ ಬಾರಿ ಶೇ.100 ಫಲಿತಾಂಶ"