ಬಂಟ್ವಾಳ ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಪಲ್ಲವಿ ಶೆಟ್ಟಿ 622 ಅಂಕ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ. ಸರಪಾಡಿ ಸಮೀಪ ಕಕ್ಕೆಪದವು ಬಳಿಯ ಮುಲ್ಕಾಜೆಮಾಡ ನಿವಾಸಿಯಾಗಿರುವ ದಯಾನಂದ ಶೆಟ್ಟಿ ಮತ್ತು ಆಶಾ ಡಿ. ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಈಕೆಗೆ ಡಾಕ್ಟರ್ ಆಗುವಾಸೆ. ವಿಜ್ಞಾನದಲ್ಲಿ 98, ಇಂಗ್ಲೀಷ್ ನಲ್ಲಿ 99 ಅಂಕಗಳನ್ನು ಗಳಿಸಿರುವ ಈಕೆ, ಉಳಿದ ಎಲ್ಲ ಸಬ್ಜೆಕ್ಟ್ ಗಳಲ್ಲಿ ಪೂರ್ಣ ಅಂಕ ಗಳಿಸಿದ್ದಾಳೆ. ತಂದೆ ದಯಾನಂದ ಶೆಟ್ಟರು ಕೃಷಿಕರು. ಸರಪಾಡಿ ಗ್ರಾಪಂ ಅಧ್ಯಕ್ಷರೂ ಆಗಿದ್ದವರು. ಅಣ್ಣ ಪವನ್ ನಿಟ್ಟೆಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾನೆ. ತಂದೆ, ತಾಯಿಯ ಮುದ್ದಿನ ಮಗಳು ಪಲ್ಲವಿ ಮಂಗಳೂರಿನಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಅಣಿಯಾಗುತ್ತಿದ್ದಾಳೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ಎಸ್.ವಿ.ಎಸ್. ವಿದ್ಯಾಗಿರಿಯ ಪಲ್ಲವಿ ಶೆಟ್ಟಿ 622 ಅಂಕ"