- ಅಧ್ಯಕ್ಷರಾಗಿ ಇದಿನಬ್ಬ, ಕಾರ್ಯದರ್ಶಿಯಾಗಿ ಅನ್ವರ್ ಕೆ.ಎಚ್

Idinabba
ಬದ್ರಿಯಾ ಜುಮಾ ಮಸೀದಿ ಧಾರ್ಮಿಕ ಚಾರಿಟೇಬಲ್ ಟ್ರಸ್ಟ್ ಬಿ.ಸಿ.ರೋಡ್ ತಲಪಾಡಿ ಇದರ ವಾರ್ಷಿಕ ಮಹಾಸಭೆಯು ತಲಪಾಡಿ ಮಸೀದಿಯಲ್ಲಿ ರವಿವಾರ ಸಂಜೆ ನಡೆಯಿತು.
ಇದೇ ಸಂದರ್ಭದಲ್ಲಿ 2018-19 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಇದಿನಬ್ಬ ಇಲೆವೆನ್, ಉಪಾಧ್ಯಕ್ಷರಾಗಿ ಇದಿನಬ್ಬ ಕೆಸ್ಸಾರ್ಟಿಸಿ, ಮುಹಮ್ಮದ್ ಬಜಾಜ್, ಕಾರ್ಯದರ್ಶಿಯಾಗಿ ಅನ್ವರ್ ಕೆ.ಎಚ್., ಜೊತೆ ಕಾರ್ಯದರ್ಶಿಯಾಗಿ ಲತೀಫ್ ಬಿ.ಸಿ., ಶಮೀರ್ ದಿಯಾಮೋಳ್, ಕೋಶಾಧಿಕಾರಿಯಾಗಿ ಮುಹಮ್ಮದ್ ಕೆ., ಲೆಕ್ಕಪರಿಶೋಧಕರಾಗಿ ಮುಸ್ತಾಕ್ ಬಿ.ಎಂ ಅವರನ್ನು ಆಯ್ಕೆ ಮಾಡಲಾಯಿತು.

Anwar
ನಝೀರ್ ಟಿ.ಎಂ., ಬಶೀರ್ ಟಿ, ನಾಸೀರ್ ವಿ.ಎಚ್., ನವಾಝ್, ಸಲಾಂ ಬಿ.ಎಂ.ಟಿ., ರಫೀಕ್ ಸಪ್ನಾ, ಲತೀಫ್ ಕೆಮ್ಮಾರ, ಪಿ.ಕೆ. ಅಬೂಬಕರ್, ಝುಬೈಲ್ ಜುಬ್ಬಿ ಅವರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.ಮುಹಮ್ಮದ್ ಬಜಾಜ್ ಅವರು ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಆರ್‌ಎಫ್‌ನ ಅನ್ವರ್ ಕೆ.ಎಚ್. ವಾರ್ಷಿಕ ವರದಿ ಮಂಡಿಸಿದರು. ಮುಸ್ತಾಕ್ ಬಿ.ಎಂ. ತಲಪಾಡಿ ಸ್ವಾಗತಿಸಿ, ನಿರೂಪಿಸಿದರು.
Be the first to comment on "ತಲಪಾಡಿ ಬದ್ರಿಯಾ ಜುಮಾ ಮಸೀದಿ ಪದಾಧಿಕಾರಿಗಳ ಆಯ್ಕೆ"