- ಡಾ. ಎ.ಜಿ.ರವಿಶಂಕರ್
ಬಾದಾಮಿಯಲ್ಲಿ ಯಥೇಷ್ಟವಾಗಿ ಕಬ್ಬಿಣದ ಸತ್ವ, ಕ್ಯಾಲ್ಸಿಯಂ,ಮೆಗ್ನೀಷಿಯಂ ತಾಮ್ರ ವಿಟಮಿನ್ಗಳು ಅಡಕವಾಗಿವೆ.ಆದುದರಿಂದ ಇದು ಪುಷ್ಟಿದಾಯಕವಾಗಿ ಮತ್ತು ಆರೋಗ್ಯದಾಯಕವಾಗಿ ಕೆಲಸ ಮಾಡುತ್ತದೆ.
- ಬದಾಮಿಯಲ್ಲಿ ಕ್ಯಾಲ್ಸಿಯಂ ಅಂಶ ಇರುವ ಕಾರಣ ಮಕ್ಕಳಲ್ಲಿ ಇದು ಮೂಳೆಯ ಬೆಳವಣಿಗೆ ಮತ್ತು ದ್ರುಢತೆಗೆ ಸಹಕರಿಸುತ್ತದೆ. ಹಾಗೆಯೇ ವಯಸ್ಕರಲ್ಲಿ ಮೂಳೆ ಮೆತ್ತಗಾಗುವುದನ್ನು ಅಥವಾ ಸುರಿಬೀಳುವುದನ್ನು (osteo porosis )ತಡೆ ಕಟ್ಟುತ್ತದೆ.
- ಇದರಲ್ಲಿ ನಾರಿನ ಅಂಶ ಇರುವ ಕಾರಣ ಮಲಬದ್ಧತೆ ನಿವಾರಣೆಯಾಗುತ್ತದೆ.
- ಬೆಳಗ್ಗೆ ಬಾದಾಮಿಯನ್ನು ಸೇವಿಸುವುದರಿಂದ ಹಸಿವಿನ ಪ್ರಮಾಣ ಕಡಿಮೆಯಾಗುತ್ತದೆ. ಆ ಮೂಲಕ ಶರೀರದ ಅಧಿಕ ತೂಕವನ್ನು ಇಳಿಸಲು ಸಹಕರಿಸುತ್ತದೆ.
- ನಿಯಮಿತವಾಗಿ ಬಾದಾಮಿಯನ್ನು ಸೇವಿಸುವುದರಿಂದ ಮಕ್ಕಳಲ್ಲಿ ನೆನಪು ಶಕ್ತಿ ಮತ್ತು ಬುದ್ದಿಶಕ್ತಿ ಅಧಿಕವಾಗುತ್ತದೆ.
- ಇದು ಶರೀರದಲ್ಲಿ ಒಳ್ಳೆಯ ಕೊಬ್ಬಿನ ಅಂಶವನ್ನು ಅಧಿಕ ಗೊಳಿಸಿ ಕೆಟ್ಟ ಕೊಬ್ಬಿನ ಅಂಶವನ್ನು ಹೋಗಲಾಡಿಸಿ ಸಮತೋಲನವನ್ನು ಕಾಪಾಡುತ್ತದೆ.ಇದರಿಂದ ಹೃದಯದ ಸಮಸ್ಯೆಯನ್ನೂ ಸಹ ತಡೆಕಟ್ಟಬಹುದು
- ಬಾದಾಮಿಯನ್ನು ಹುಡಿಮಾಡಿ ತುಪ್ಪಕ್ಕೆ ಹಾಕಿ ಕುಡಿಸಿ ಎಳೆಮಕ್ಕಳಿಗೆ ಹಚ್ಚುವುದರಿಂದ ಮಕ್ಕಳ ಚರ್ಮವು ಕಾಂತಿಯುತವಾಗುತ್ತದೆ.
- ಕಣ್ಣಿನ ಸುತ್ತ ಕಪ್ಪು ಕಲೆಗಳು ಕಾಣಿಸಿಕೊಂಡಾಗ ಬಾದಾಮಿಯ ಎಣ್ಣೆಯನ್ನು ಕಣ್ಣಿನ ಸುತ್ತ ಉಜ್ಜಿದರೆ ಕಲೆಗಳು ಮಾಯವಾಗುತ್ತವೆ.
- ಬಾದಾಮಿ ಸೇವನೆಯಿಂದ ತಲೆಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ನುಣುಪನ್ನು ಪಡೆಯುತ್ತದೆ.
- ಬಾದಾಮಿ ಮುಟ್ಟಿನ ಸಮಯದ ಅಧಿಕ ರಕ್ತಸ್ರಾವವನ್ನು ಕಡಿಮೆಗೊಳಿಸುತ್ತದೆ.
- ಇದು ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಉತ್ತಮ ಪಥ್ಯ ಆಹಾರವಾಗಿದ್ದು ಅವರಲ್ಲಿ ರಕ್ತದ ಹಾಗು ಇತರ ಸತ್ವಗಳ ಸಮತೋಲನವನ್ನು ಕಾಪಾಡಲು ಸಹಕರಿಸುತ್ತದೆ.
- ಬಾದಾಮಿ ಹುಡಿಯನ್ನು ಹಾಲಿನಲ್ಲಿ ಕಲಸಿ ಮುಖಕ್ಕೆ ಲೇಪಿಸಿದರೆ ಮೊಡವೆಗಳು ಮಾಯವಾಗಿ ಮುಖ ಸುಂದರವಾಗುತ್ತದೆ.
- ಬಾದಾಮಿಯು ರಕ್ತದ ಒತ್ತಡವನ್ನು ಹತೋಟಿಗೆ ತರಲು ಸಹಕರಿಸುತ್ತದೆ.
- ಇದರಲ್ಲಿರುವ ನಾರಿನ ಅಂಶ ಹಾಗು ಮೆಗ್ನೀಷಿಯಂ ಅಂಶಗಳು ಮಧುಮೇಹವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
- ಬಾದಾಮಿ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಹಾಗು ವೀರ್ಯದ ಪ್ರಮಾಣವನ್ನು ಅಧಿಕ ಗೊಳಿಸುತ್ತದೆ.
- ಪ್ರತಿದಿನ 4 ರಿಂದ 5 ಬಾದಾಮಿ ಸೇವನೆಯು ಮನುಷ್ಯನ ವ್ಯಾಧಿಕ್ಷಮತ್ವ ಶಕ್ತಿಯನ್ನು ಅಧಿಕ ಗೊಳಿಸುತ್ತದೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಶಕ್ತಿವರ್ಧಕ – ಬಾದಾಮಿ"