ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 13: ಬಹುಶಃ ನೀವು ಪ್ರೆಸಿಡೆಂಟರನ್ನು ಹೋಗಿ ನೋಡುವುದಿಲ್ಲ

ಸ್ವೊರ್ಡ್ ಕಟ್ ಯುವಕ ಪ.ಗೋ (1970ರ ಸಂಗ್ರಹ)

ಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ). ಲೇಖನಮಾಲೆಯ 13ನೇ ಕಂತು ಇಲ್ಲಿದೆ.

ವಿಶೇಷಸೃಷ್ಟಿಗಳಲೋಕದಲ್ಲಿ –ಅಂಕಣ13: ಬಹುಶಃ ನೀವು ಪ್ರೆಸಿಡೆಂಟರನ್ನು ಹೋಗಿ ನೋಡುವುದಿಲ್ಲ
 
ಕಾಂಗ್ರೆಸ್ ಸಂದೇಶದ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡಿಸುವ ಕಾರ್ಯಕ್ರಮವನ್ನುಚಾಮರಾಜಪೇಟೆಯ ಸಿದ್ಧಾರೂಢ ಮಠದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

1990 ರ ದಶಕದ ಚಿತ್ರ:ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡ ಅಂದಿನ ಕರ್ನಾಟಕ ರಾಜ್ಯದ ಕಾನೂನು ಸಚಿವರಾದ  ಎಮ್.ವೀರಪ್ಪ ಮೊಯ್ಲಿಯವರ ಜೊತೆ ಸಂವಾದದಲ್ಲಿ ಟೈಮ್ಸ್ ಆಫ್ ಇಂಡಿಯಾ ಮಂಗಳೂರು ಪ್ರತಿನಿಧಿ ಶ್ರೀ. ಪ. ಗೋಪಾಲಕೃಷ್ಣ.

 
ಕಾರ್ಯಕ್ರಮ ನಿಯೋಜಿಸಿದವರುಆಗಿನ್ನೂ ವಿನೋದ ಮಾಸಪತ್ರಿಕೆಯ ಸಂಪಾದಕರಷ್ಟೇ ಆಗಿದ್ದಚಾಮರಾಜಪೇಟೆ ಕಾಂಗ್ರೆಸ್ ಘಟಕದ ಮುಖ್ಯ ಕಾರ್ಯಕರ್ತ ನಾರಾಯಣ ಅವರುಮಹಾತ್ಮಾಗಾಂಧಿಜನ್ಮ ಜಯಂತಿಯ 60ನೇ ವಾರ್ಷಿಕಾಚರಣೆಯ ಸಂಕೇತವಾಗಿ, 60 ಮಂದಿ ಹೊಸ ಚಂದಾದಾರರಿಗೆಹನುಮಂತಯ್ಯನವರು ಪತ್ರಿಕೆಯನ್ನು ವಿತರಿಸಿ ಉದ್ಘಾಟಿಸುವ ಕಾರ್ಯಕ್ರಮ.
 
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಗೆ ಕಾರ್ಯಕ್ರಮದ ನೆನಪು ಹುಟ್ಟಿಸಿಅವರನ್ನು ಸಮಯಕ್ಕೆ ಸರಿಯಾಗಿ ಕರೆದೊಯ್ದೆಆವರಣ ಪ್ರವೇಶಿಸುತ್ತಿದ್ದಂತೆಸಮಯಕ್ಕೆ ಮೊದಲೇ ಬಂದಲ್ಲಿ ಹಾಜರಾಗಿದ್ದ ಹನುಮಂತಯ್ಯ “ಮೈ ಹುಶಾರಿಲ್ಲನಾರಾಯಣಪ್ರೋಗ್ರಾಂ ಶುರು ಮಾಡಿಸ್ತೀಯಾ ?” ಎನ್ನುವುದು ಕೇಳಿಸಿತುಅಪ್ಪಣೆಯಂತೆ ಕಾರ್ಯಕ್ರಮ ಆರಂಭವಾಯಿತು.
 
(ಬಂದಿದ್ದ ನಾಲ್ಕೈದು ಪತ್ರಿಕಾಪ್ರತಿನಿಧಿಗಳನ್ನು ಕಂಡು ವರದಿ ತಯಾರಿಸಿ ಹಂಚಿಸುವ ಉಳಿಯಿತು ಎಂದುಕೊಂಡೆ…)
 
ತನ್ನ ಭಾಷಣವನ್ನು ‘ಅನುಮತಿಯೊಂದಿಗೆ ಕುಳಿತುಕೊಂಡೇ’ ಆರಂಭಿಸಿದ ಹನುಮಂತಯ್ಯ ಸಿದ್ಧಾಂತ –ತತ್ವಗಳ ವಿಶ್ಲೇಷಣೆಯನ್ನು ಮೊದಲಿಗೆ ಎತ್ತಿಕೊಂಡರುಮಾಕ್ಸ್ ಪ್ರತಿಪಾದಿಸಿದ “From  each according to ability -to each according to needs” (ನನ್ನ ಅನುವಾದ ಶಕ್ತಿಯಂತೆಪ್ರತಿಯೊಬ್ಬನಿಂದ ಶಕ್ತ್ಯಾನುಸಾರ ಪ್ರತಿಯೊಬ್ಬನ ಅವಶ್ಯಕತೆಗೆ), ಸಿದ್ಧಾಂತದ ಇಂಗ್ಲಿಷ್ ವಾಕ್ಯಜೋಡಣೆಯಲ್ಲಿ ಅದರಿಂದಾದ ಒಂದು ತಪ್ಪಿಗೆ
 
ವೀರಣ್ಣಗೌಡರ ಆಕ್ಷೇಪ ಬಂತುಕಾರ್ಯಕ್ರಮಕ್ಕೆ ಹೊಸ ತಿರುವು ಕೊಟ್ಟಿತುಇಂದಿನ ಹಲವು ನಿಮಿಷ ನಡೆದ ಚರ್ಚೆಯಲ್ಲಿ ಅಪ್ರಸ್ತುತ ವಿಷಯಗಳೂ ತೂರಿಬಂದವುನಾರಾಯಣಯ ವಿನೀತ ಪ್ರಾರ್ಥನೆಯಿಲ್ಲದಿದ್ದರೆಕಾರ್ಯಕ್ರಮವೇ ಅರ್ಧಕ್ಕೆ ನಿಂತುಹೋಗುವಷ್ಟು ಕಾವು ಕಂಡುಬಂದಿತ್ತು!
 
ಕೊನೆಯಲ್ಲಿಪ್ರತಿಗಳನ್ನು 60 ಚಂದಾದಾರರಿಗೆ ವಿತರಣೆ ಮಾಡಬೇಕೆಂದು ನಾರಾಯಣರು ಕೇಳಿಕೊಂಡಾಗಹನುಮಂತಯ್ಯಅದು ಯಾಕೆ 60 ಜನನೂರು ಆದ್ರೂ ಇರಬೇಕಿತ್ತು” ಎಂದು ಪ್ರಶ್ನಿಸಿವೀರಣ್ಣಗೌಡರ ಉತ್ತರಕ್ಕಾಗಿ ಕಾದರುಗೌಡರಿಂದ ಉತ್ತರ ಬರಲ್ಲಿ,60ರ ಸಂಕೇತವನ್ನು ವಿವರಿಸುವ ‘ಧೈರ್ಯ’ ನಾರಾಯಣರಿಗೂ ಇರಲಿಲ್ಲ!
 
ಅಷ್ಟೆಲ್ಲ ಜನಕ್ಕೆ ಹಂಚೋವಷ್ಟು ಟೈಮ್ ನನಗಿಲ್ಲಸಿಂಬಾಲಿಕ್ ಆಗಿ ಕೆಲವರಿಗೆ ನೀಡ್ತೀನಿ” ಎಂದಾಗಮೌನವಾಗಿ ಒಪ್ಪಿಕೊಂಡು,ತಮ್ಮ ಪ್ರತಿ ಪಡೆದ ಕೃತಾರ್ಥರ ಒಂದೆರಡು ಭಾವಚಿತ್ರಗಳನ್ನೂ ತೆಗೆಯಲಾಯಿತು.
 
ಕಾರ್ಯಕ್ರಮ ಮುಗಿಸಿದ ಮೇಲೆಪ್ರೆಸಿಡೆಂಟರ ಕಾರಿನಲ್ಲೇ ಮರಳುವ ಅವಕಾಶ ಸಿಗಲಿಲ್ಲಆದ್ದರಿಂದ ವರದಿಗಾರ ಮಿತ್ರರ ಜೊತೆಯಲ್ಲೇ ಹೆಜ್ಜೆ ಹಾಕಿದೆದೊಡ್ಡ ಪ್ರೋಗ್ರಾಮ್ ನ ಮೇಲೆವರಿಂದ ಬಂದ ಟೀಕೆಟಿಪ್ಪಣಿಗಳೆಲ್ಲವನ್ನೂ ಕಿವಿಕೊಟ್ಟು ಕೇಳಿದೆ.
 
ಅಂದು ಮೊದಲ್ಗೊಂಡು ಮುಂದಿನ ಮೂರು ತಿಂಗಳು, ‘…. ಸಂದೇಶದ ಪ್ರದೇಶ ಕಾಂಗ್ರೆಸ್ ವಾತಾವರಣದಲ್ಲಿ ಕಂಡುಬಂದ ನೋಟುಗಳುಗಳಿಸಿದ ಅನುಭವಗಳುಆದ ಸ್ವಾರಸ್ಯಗಳು ಉಲ್ಲೇಖನಾರ್ಹ.
 
ಕಾಂಗ್ರೆಸ್ ಭವನದಲ್ಲೇ ದಿನವಿಡೀ ಕಳೆಯಲು ಸಾಧ್ಯವಾಗದಂತಹ ಪರಿಸ್ಥಿತಿ ನನ್ನದುಆದರೂ ಸರಿಮಾಡಬೇಕಾದ ಕೆಲಸವನ್ನು ಮಾಡಿ ಮುಗಿಸಿದರಾಯಿತುಹೇಗೂ ಹಾಕಬೇಕಾದ ಹಾಜರಿ ಪುಸ್ತಕ ಅಲ್ಲಿಲ್ಲವೆಂದು ವರ್ತಿಸುತ್ತಿದ್ದ ನನ್ನಬಗ್ಗೆ– ದೂರು ಸಲ್ಲಿಸಲು,ಅಲ್ಲಿದ್ದ ‘ಪ್ರೆಸಿಡೆಂಟ್ ನಿಷ್ಠರಾದ ಪೂರ್ಣಕಾಲಿಕ ಸಿಬ್ಬಂದಿಯವರಿಗೆ ಹೆಚ್ಚು ಸಮಯ ತಗಲಲಿಲ್ಲಸಿಕ್ಕಿದ ಒಂದು ಸಂದರ್ಭದಲ್ಲಿ ಗೌಡರು ‘ನನ್ನನ್ನು ಸರಿಯಾಗಿ ಕೂರಿಸಿಕೊಂಡರು.’ ಪರಿಣಾಮಯಾವ ರೀತಿಯಲ್ಲೂ ಸಂಬಂಧವಿರದಿದ್ದ ಕೆಲಸವನ್ನು ಕೂಡಾ ನನ್ನ ತಲೆಗೆ ಸಿಬ್ಬಂದಿಯವರು ಕಟ್ಟಿ(ಸಿ)ದರು.
 
ಹೆಗಡೆಯವರಲ್ಲಿ ನಾನು ಸಲ್ಲಿಸಿದ ಪ್ರತಿಭಟನೆ “ಬಹುಶಃ ನೀವು ಪ್ರೆಸಿಡೆಂಟರನ್ನು ಹೋಗಿ ನೋಡುವುದಿಲ್ಲಅವರಿಗೆ ಕಾಣಿಸಿಕೊಳ್ತಾ ಇರಿ” ಎಂಬ ಸಲಹೆಯನ್ನಷ್ಟೇ ಪ್ರತಿಪಾದಿಸಿತು. ‘ಸಿಬ್ಬಂದಿ ಧಾಳಿಯಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ನಾನೇ ಹಾಕಿಕೊಳ್ಳುವಂತೆ ಮಾಡಿತು.
 
ಅದುವರೆಗೂಅಗತ್ಯವಿದ್ದ ರಕ್ಷಣೆಯನ್ನು ಪಡೆದುಕೊಳ್ಳಲು ಶಕ್ತಿಯ ಪ್ರಾತಿನಿಧ್ಯದಿಂದ ಸಾಧ್ಯವೆಂಬ ವಿಚಾರ ನನಗೆ ಹೊಳೆದಿರಲಿಲ್ಲ.ಆ ಜ್ಞಾನೋದಯವಾದ ಕೆಲವೇ ದಿನಗಳಲ್ಲಿಅವಕಾಶವನ್ನು ಉಪಯೋಗಿಸಿಕೊಂಡೆನಿಜಲಿಂಗಪ್ಪನವರು ಪಕ್ಷದ ಪರವಾಗಿ ಒಂದು ಪತ್ರಿಕಾಗೋಷ್ಠಿಯನ್ನು ಭವನದಲ್ಲಿ ಕರೆದಿದ್ದರುಗೋಷ್ಠಿಯ ಕೋಣೆಗೆ ನುಗ್ಗುತ್ತಿದ್ದ ವರದಿಗಾರರ ಜೊತೆಯಲ್ಲಿದ್ದ ನನ್ನನ್ನು ಕಂಡ,ಸಿಬ್ಬಂದಿ ಪ್ರಮುಖ “ಊಂ ?ನೀವೆಲ್ಲಿಗೆ?” ಎಂದಷ್ಟೇ ನುಡಿದುನನ್ನನ್ನು ತಡೆದ.
 
ಮಾತಿನಲ್ಲಿ ಉತ್ತರವೀಯದೆಕಿಸೆಯಲ್ಲಿರಿಸಿದ್ದ ಮಾನ್ಯತಾಪತ್ರವನ್ನು ತೆಗೆದು ತೋರಿಸಿ ಒಂದು ಕುಹಕನಗೆ ಹೊರಡಿಸಿದೆ.ಕೋಣೆಯೊಳಗೆ ನುಗ್ಗಿಗೋಷ್ಠಿಯ ಹಲವರಲ್ಲಿ ಒಬ್ಬನಾದೆ.
 
ನನ್ನ ಇರವನ್ನು ಗಮನಿಸಿದ ನಿಜಲಿಂಗಪ್ಪಆಗಾಗ ನನ್ನ ಕಡೆ ನೋಡುತ್ತಿದ್ದರುಇವನನ್ನು ಎಲ್ಲೋ ಕಂಡಂತಿದೆ ಎಂಬ ಹಾಗೆ,ಹುಬ್ಬುಗಂಟಿಕ್ಕುತ್ತಿದ್ದರುಪರಿಚಯವನ್ನು ಅವರು ಕೇಳಲಿಲ್ಲ– ನಾನು ಹೇಳಲೂ ಇಲ್ಲ.
 
ಗೋಷ್ಠಿ ಮುಗಿಸಿ ಹೊರಬಂದ ಮೇಲೆ -“ನೀವೂ ಪೇಪರ್ನವ್ರು ಅಂತ ಮೊದ್ಲೇ ಗೊತ್ತಾಗಿರ್ಲಿಲ್ಲ” ಎಂದು ನಯವಾಗಿ ಮಾತನಾಡಿಸಿದ(ಸಿಬ್ಬಂದಿಪ್ರಮುಖ, “ಸಾರ್” ಸಂಬೋಧನೆಯನ್ನೂ (ಪ್ರಥಮಬಾರಿಗೆಸೇರಿಸಿದಾಗಒಮ್ಮೆಲೆ ಬಿಗುಮಾನ ಪ್ರದರ್ಶಿಸಿದೆ.ಹಾಜರಾತಿ ಸಮಯದಿಂದ ವಿನಾಯಿತಿಯನ್ನೂ ಅಂದೇ ಪಡೆದೆ.
 
ಆದರೆಸಂದೇಶದ ನೌಕರನಾಗಿ ಹೆಚ್ಚು ದಿನ ಕಳೆಯಲು ಸಾಧ್ಯವಾಗದೆಂಬ ಯೋಚನೆ ಕೂಡಾ ಅದೇ ದಿನ ಮೂಡಿತು.
 
ಈ ನಡುವೆ ಸಂಯುಕ್ತ ಕರ್ನಾಟಕದ ಬೆಂಗಳೂರು ಮುದ್ರಣದ ಸಿದ್ಧತಾ ವ್ಯವಸ್ಥೆಯ ಪ್ರಗತಿ –ಮಾಹಿತಿ ಸಲ್ಲಿಸುತ್ತಿದ್ದೆಅಲ್ಲಿಗೆ ಪ್ರವೇಶ ದೊರಕಿಸಿಕೊಳ್ಳುವ ಪ್ರಯತ್ನ ಇನ್ನೂ ಹೆಚ್ಚಬೇಕೆಂಬ ತೀರ್ಮಾನಕ್ಕೆ ಅಂದೇ ಬಂದೆ.
 
ಆಗಮುಖ್ಯಮಂತ್ರಿ ಬಿ.ಡಿ.ಜತ್ತಿಯವರ (ವಿಧಾನ ಮಂಡಲಪಕ್ಷದ ಗುಂಪಿಗೂಪ್ರದೇಶ ಕಾಂಗ್ರೆಸ್ ವರಿಷ್ಠರ ಗುಂಪಿಗೂ ತೀವ್ರ ಮೇಲಾಟ ನಡೆಯುತ್ತಿತ್ತುಹೆಗಡೆ ವೀರೇಂದ್ರ ಪಾಟೀಲರ ಸ್ವತಂತ್ರ ‘ಧ್ವನಿಗೆ ಪಕ್ಷದಲ್ಲಿ ಮನ್ನಣೆಯೂ ಇತ್ತು.
 
ಅದೇ ಸಮಯದಲ್ಲಿ ತನ್ನ ಪುತ್ರಿಗೆ ಪಕ್ಷದಲ್ಲಿ ಸ್ಥಾನ ದೊರಕಿಸಲು  ನೆಹರೂರವರು ಮಾಡಿದ ಪ್ರಯತ್ನಗಳಿಂದಾಗಿ ಇಂದಿರಾ ಗಾಂಧಿಯವರು ಕಾಂಗ್ರೆಸ್ಸಿನ ಮಹಿಳಾ ವಿಭಾಗದ ಪ್ರಮುಖರಾಗಿದ್ದರುವಿಭಾಗದ ಸಮ್ಮೇಳನಕ್ಕಾಗಿ ಒಂದು ಬಾರಿ ಬೆಂಗಳೂರಿಗೆ ಬಂದು ತಂಗಿದ್ದರು.
 
ತನ್ನ ವಸತಿಸ್ಥಳದಲ್ಲಿ ಹತ್ತಾರು ಬಗೆಯ ‘ವಿ..ಪಿ.’ ಸೌಕರ್ಯಗಳನ್ನು ಬಯಸಿದ್ದ ಇಂದಿರಾಗಾಂಧಿಅವುಗಳನ್ನು ಕೂಡಲೇ ಪೂರೈಸುವಂತೆಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಹೆಗಡೆಯವರಿಗೆ ಎಡೆಬಿಡದೆ ಆದೇಶಗಳನ್ನು ಕಳುಹಿಸಿದರುಒಮ್ಮೆಯಂತೂ,ಆದೇಶ ಹೊತ್ತು ತಂದ ವ್ಯಕ್ತಿಯೊಡನೆ
 
ಏನಂತ ಅವರಿಗೆ ಬೇಕಾಗಿರೋದು ? She is not the Prime Minister to demand all these!” ಎಂದು (ನನ್ನೆದುರಿಗೆಗುಡುಗಿದ್ದ ಹೆಗಡೆ ‘ಧ್ವನಿಯೂ ಆ ಕಾಲದ್ದು.
 
(ಮುಂದಿನ ಭಾಗದಲ್ಲಿ)
(ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಲೇಖಕ ಪ.ಗೋ. ಅವರದ್ದು.. ಇದು ಹೊಸ ದಿಗಂತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಬಳಿಕ 2005ರಲ್ಲಿ ಪುಸ್ತಕರೂಪದಲ್ಲಿ ಹೊರಬಂದ ಲೇಖನಮಾಲೆಯ ಮರುಪ್ರಕಟಣೆ. ಇದನ್ನು ಬಂಟ್ವಾಳನ್ಯೂಸ್ ಗೆ ಒದಗಿಸಿಕೊಟ್ಟವರು ಲೇಖಕ ಪ.ಗೋ. ಅವರ ಪುತ್ರ ಪ. ರಾಮಚಂದ್ರ)

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 13: ಬಹುಶಃ ನೀವು ಪ್ರೆಸಿಡೆಂಟರನ್ನು ಹೋಗಿ ನೋಡುವುದಿಲ್ಲ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*