ಇಲ್ಲಿವೆ ತುಪ್ಪದ ಹಲವು ಉಪಯೋಗ
- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಆಭ್ಯಂತರ ಉಪಯೋಗಗಳು:
ಸಾಧಾರಣವಾಗಿ ಊಟವನ್ನು ತುಪ್ಪ ಹಾಕಿದ ಅನ್ನದೊಂದಿಗೆ ಪ್ರಾರಂಭಿಸುವುದು ರೂಢಿ. ಇದರ ಹಿಂದೆ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುವ ವೈಜ್ಞಾನಿಕ ವಿಷಯ ಒಳಗೊಂಡಿದೆ. ಯುಕ್ತಿ ಯುಕ್ತವಾಗಿ ತುಪ್ಪವನ್ನು ಸೇವಿಸುವುದರಿಂದ ನಮ್ಮ ದೇಹದ ವ್ಯಾಧಿಕ್ಷಮತೆ, ಬಲ,ಕಾಂತಿ ಅಧಿಕವಾಗುವುದರ ಜೊತೆಗೆ ಹಲವಾರು ತೊಂದರೆಗಳನ್ನು ಸಹ ನಿವಾರಿಸುತ್ತದೆ.
- ತುಪ್ಪವು ಶರೀರದಲ್ಲಿನ ವಾತ ಮತ್ತು ಪಿತ್ತ ದೋಷಗಳನ್ನು ಶಮನ ಗೊಳಿಸುತ್ತದೆ. ಆದುದರಿಂದ ಇದು ವಾತ ಮತ್ತು ಪಿತ್ತ ಪ್ರಕೃತಿಯ ಜನರಿಗೆ ಬಹು ಪ್ರಯೋಜನಕಾರಿಯಾಗಿದೆ.
- ತುಪ್ಪವು ನಮ್ಮ ಜಠರಾಗ್ನಿಯ ಬಲವನ್ನು ಹೆಚ್ಚಿಸುತ್ತದೆ. ಹಾಗಾಗಿ ಜೀರ್ಣ ಶಕ್ತಿಯ ಕೊರತೆ ಇದ್ದಲ್ಲಿ ಪ್ರತಿದಿನ ಬೆಳಗ್ಗೆ 10 ಮಿ.ಲೀ ಯಷ್ಟು ತುಪ್ಪವನ್ನು ಬಿಸಿನೀರಿನ ಜೊತೆ ಸೇವಿಸುವುದು ಉತ್ತಮ.
- ಒಣ ಕೆಮ್ಮು ಹಾಗು ಸ್ವರದ ಸಮಸ್ಯೆ ಇದ್ದಾಗ 1 ಚಮಚದಷ್ಟು ತುಪ್ಪವನ್ನು ಗಂಟಲಿನಲ್ಲಿ ಸಾಧಾರಣ 1 ನಿಮಿಷದ ಕಾಲ ಇಟ್ಟು ನಂತರ ನುಂಗಬೇಕು.
- ಕಫದ ಸಮಸ್ಯೆ ಬಾಧಿಸದಿದ್ದರೆ ದಿನಾ 1 ಚಮಚದಷ್ಟು ತುಪ್ಪವನ್ನು ಸೇವಿಸುವುದರಿಂದ ಚರ್ಮದ ಕಾಂತಿ ಅಧಿಕವಾಗುತ್ತದೆ.
- ನಿಯಮಿತವಾಗಿ ತುಪ್ಪದ ಸೇವನೆಯಿಂದ ಕಣ್ಣಿನ ಗೋಚರ ಸಾಮರ್ಥ್ಯವು ಅಧಿಕವಾಗುತ್ತದೆ.
- ಕ್ಷೀಣ ಹಾಗು ಬಲಹೀನ ವ್ಯಕ್ತಿಗಳಲ್ಲಿ ದೇಹದ ತೂಕ ಮತ್ತು ಬಲವನ್ನು ಹೆಚ್ಚಿಸುತ್ತದೆ.
- ಮಧ್ಯಪಾನಿಗಳಿಗೆ ಇದು ಉತ್ತಮ ಪಥ್ಯ ಆಹಾರವಾಗಿದ್ದು ಶರೀರದ ಅಂಗಾಂಗಗಳನ್ನು ರಕ್ಷಿಸಲು ಸಹಕರಿಸುತ್ತದೆ
- ಪುರುಷರಲ್ಲಿ ವೀರ್ಯದ ಬಲ ಹಾಗು ಪ್ರಮಾಣವನ್ನು ಹೆಚ್ಚಿಸುತ್ತದೆ
- ಜ್ವರದ ಸಂದರ್ಭದಲ್ಲಿ ಅಲ್ಪ ಪ್ರಮಾಣದ ತುಪ್ಪವನ್ನು ಸೇವಿಸುವುದರಿಂದ ದೇಹದ ಉರಿ ಕಡಿಮೆಯಾಗುತ್ತದೆ.
- ಗರ್ಭಿಣಿಯರಿಗೆ ತುಪ್ಪವು ಪ್ರತಿ ಹಂತದಲ್ಲೂ ಉತ್ತಮ ಪಥ್ಯ ಆಹಾರವಾಗಿದೆ.
- ಹೆರಿಗೆ ನೋವು ಆರಂಭ ಆದ ತಕ್ಷಣ ಬಿಸಿ ಗಂಜಿಗೆ ತುಪ್ಪ ಹಾಕಿ ಸೇವಿಸಿದರೆ ಸುಖ ಪ್ರಸವಕ್ಕೆ ಸಹಕಾರಿಯಾಗುತ್ತದೆ.
- ಬಾಣಂತಿಯರು ನಿಯಮಿತವಾಗಿ ತುಪ್ಪವನ್ನು ಸೇವಿಸುವುದರಿಂದ ಮೊಲೆ ಹಾಲಿನ ಗುಣ ವೃದ್ಧಿಯಾಗುತ್ತದೆ.
- ಎಳೆ ಮಕ್ಕಳಿಗೆ 2 ರಿಂದ 4 ಬಿಂದು ತುಪ್ಪವನ್ನು ಕೊಡುವುದರಿಂದ ಜೀರ್ಣ ಶಕ್ತಿ ಅಧಿಕವಾಗುತ್ತದೆ,ಮಲವಿಸರ್ಜನೆ ಸರಿಯಾಗಿ ಆಗುತ್ತದೆ ಮತ್ತು ಚರ್ಮದ ಕಾಂತಿ ಅಧಿಕವಾಗುತ್ತದೆ.
- ಹೊಟ್ಟೆಯಲ್ಲಿ ಶಬ್ದ, ನೋವು ಹಾಗು ವಾಂತಿ ಇದ್ದರೆ 1 ಚಮಚ ತುಪ್ಪವನ್ನು ಸೇವಿಸಬೇಕು
- ಮಲಬದ್ಧತೆ ಇದ್ದಾಗ 1 ಗ್ಲಾಸು ಬಿಸಿಹಾಲಿಗೆ 1 ಚಮಚ ತುಪ್ಪ ಹಾಕಿ ಸೇವಿಸಿದರೆ ಮಲಪ್ರವೃತ್ತಿ ಸರಿಯಾಗಿ ಆಗುತ್ತದೆ.
- ಬೆಳಗ್ಗೆ 1 ಗ್ಲಾಸು ಬಿಸಿನೀರಿಗೆ 1 ಚಮಚ ತುಪ್ಪ ಸೇರಿಸಿ ಕುಡಿದರೆ ಮೂತ್ರ ಪ್ರವೃತ್ತಿ ಸರಿಯಾಗಿ ಆಗುತ್ತದೆ.
- ಬೆಳ್ಳುಳ್ಳಿ ಮತ್ತು ತುಪ್ಪದ ಮಿಶ್ರಣವು ಜ್ವರದ ಬಾಧೆಯನ್ನು ನಿವಾರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
ಹೆಚ್ಚಿನ ಓದಿಗೆ ಕ್ಲಿಕ್ ಮಾಡಿರಿ:
Be the first to comment on "ಜಠರಾಗ್ನಿ ಬಲವರ್ಧಕ ತುಪ್ಪ"