- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಬಾಹ್ಯ ಉಪಯೋಗಗಳು :
- ಎಳೆ ಮಕ್ಕಳನ್ನು ದಿನಾ ತುಪ್ಪ ಹಚ್ಚಿ ಸ್ನಾನ ಮಾಡಿಸಿದರೆ ಚರ್ಮವು ನುಣ್ಣಗೆ ಮತ್ತು ಕಾಂತಿಯುತ ಆಗುತ್ತದೆ ಮತ್ತು ಶರೀರದ ಸಂಧು ಹಾಗು ಮೂಳೆಗಳು ದೃಢವಾಗುತ್ತದೆ.
- ಬೆಂಕಿ ಅಥವಾ ಬಿಸಿ ವಸ್ತುಗಳು ತಾಗಿ ಗಾಯವಾದಾಗ ತುಪ್ಪವನ್ನು ಹಚ್ಚಿದರೆ ಉರಿ ಬೇಗನೆ ಕಡಿಮೆಯಾಗುತ್ತದೆ ಮತ್ತು ಗಾಯ ಒಣಗಲು ಸಹಕರಿಸುತ್ತದೆ.
- ನಿದ್ರಾಹೀನತೆ ಇದ್ದಾಗ ತಲೆಗೆ ತುಪ್ಪ ಹಚ್ಚಿ 1 ಗಂಟೆ ಬಿಟ್ಟು ಸ್ನಾನ ಮಾಡಬೇಕು .
- ರಕ್ತದ ಒತ್ತಡ ಅಧಿಕವಿದ್ದಾಗ ಮದ್ದಿನ ಜೊತೆಗೆ ತುಪ್ಪವನ್ನು ನೆತ್ತಿಗೆ ಹಾಕಿದರೆ ಬೇಗನೆ ರಕ್ತದೊತ್ತಡವು ಸಮಸ್ಥಿತಿಗೆ ಬರುತ್ತದೆ.
- ಶರೀರದ ಉಷ್ಣತೆಯಿಂದ ಬಾಯಲ್ಲಿ ಹುಣ್ಣು ಆದಾಗ ಬಾಯಿಯೊಳಗೆ ತುಪ್ಪವನ್ನು ಸವರಬೇಕು.
- ಶರೀರದ ಉಷ್ಣತೆ ಅಥವಾ ನಿದ್ರಾಹೀನತೆಯಿಂದ ಕಣ್ಣುಗಳಲ್ಲಿ ಉರಿ ಇದ್ದಾಗ ತೆಳ್ಳಗಿನ ಬಟ್ಟೆಗೆ ತುಪ್ಪವನ್ನು ಸವರಿ ಕಣ್ಣಿನ ರೆಪ್ಪೆಯ ಮೇಲೆ ಇಡಬೇಕು.
- ಶರೀರದಲ್ಲಿ ರೂಕ್ಷತೆಯಿಂದಾಗಿ ಮುಖ ಹಾಗು ಶರೀರದ ಚರ್ಮ ಬಿರಿಯುವಿಕೆ ಹಾಗು ಸುಕ್ಕು ಕಟ್ಟುವುದಿದ್ದರೆ ಶರೀರಕ್ಕೆ ತುಪ್ಪ ಹಚ್ಚಿ 1 ಗಂಟೆ ಬಿಟ್ಟು ಸ್ನಾನ ಮಾಡಬೇಕು.
- ಮೈಯಲ್ಲಿ ಕಜ್ಜಿಗಳು (chicken pox /small pox)) ಮೂಡಿದಾಗ ತುಪ್ಪವನ್ನು ಶರೀರಕ್ಕೆ ಹಚ್ಚಿದರೆ ಉರಿ, ನೋವು ಕಡಿಮೆಯಾಗುತ್ತದೆ ಮತ್ತು ಬೇಗನೆ ಅವು ವಾಸಿಯಾಗುತ್ತದೆ.
- ಮಧುಮೇಹ ಇರುವ ಜನರಲ್ಲಿ ನರಗಳು ಕ್ಷೀಣವಾಗಿ ಕಾಲುಗಳ ಸಿಡಿತ ಇದ್ದರೆ ತುಪ್ಪವನ್ನು ಹಚ್ಚಿ ಸಾಧಾರಣ 2 ಗಂಟೆಗಳ ಕಾಲ ಬಿಡಬೇಕು.
- ಬಿಸಿಲು ಅಥವಾ ಪಿತ್ತದ ಕಾರಣದಿಂದ ತಲೆ ಸುತ್ತುವಿಕೆ ಇದ್ದಾಗ ತುಪ್ಪವನ್ನು ತಲೆಗೆ ಹಾಕಿ ನಂತರ ಸ್ನಾನ ಮಾಡಬೇಕು.
- ಮಲಬದ್ಧತೆಯಿಂದಾಗಿ ಗುದದ್ವಾರದಲ್ಲಿ ನೋವು ಕಾಣಿಸಿಕೊಂಡರೆ ಅಲ್ಲಿಗೆ ತುಪ್ಪವನ್ನು ಹಚ್ಚಬೇಕು ಅಥವಾ ದೀಪದ ಬತ್ತಿಗೆ ತುಪ್ಪವನ್ನು ಸವರಿ ಗುದದ್ವಾರದ ಒಳಗೆ ಇಟ್ಟರೂ ಆದೀತು.
- ಅತಿಯಾದ ಜ್ವರದ ಸಂದರ್ಭದಲ್ಲಿ ತುಪ್ಪವನ್ನು ಅಂಗೈ, ಪಾದ ಹಾಗು ಹಣೆಗೆ ಹಚ್ಚಿದರೆ ಜ್ವರ ಬೇಗನೆ ಶಮನವಾಗುತ್ತದೆ.
- ಜೇನು ನೊಣ , ಇರುವೆ, ಚೇಳು ಇತ್ಯಾದಿಗಳು ಕಡಿದಾಗ ಕೇವಲ ತುಪ್ಪ ಅಥವಾ ಅರಸಿನ ಹುಡಿಯನ್ನು ಮಿಶ್ರ ಮಾಡಿ ಹಚ್ಚಿದರೆ ಊತ, ಉರಿ ನೋವುಗಳು ಕಡಿಮೆಯಾಗುತ್ತದೆ.
- ಎಲ್ಲಿಯಾದರೂ ಬಿದ್ದು ದೇಹದಲ್ಲಿ ರಕ್ತಹೆಪ್ಪುಗಟ್ಟಿದ ಊತ ಹಾಗು ನೋವು ಇದ್ದರೆ ಆ ಜಾಗಕ್ಕೆ ತುಪ್ಪವನ್ನು ಲೇಪಿಸಬೇಕು
- ಕಾಲುಗಳಲ್ಲಿ ರಕ್ತಸಂಚಾರ ಕಡಿಮೆಯಾಗಿ ಅಥವಾ ರಕ್ತನಾಳಗಳ ತಡೆಯಿಂದಾಗಿ ಸಿಡಿತ, ನೋವು, ವೈವರ್ಣ್ಯತೆ ಇದ್ದಾಗ ಕಾಲಿಗೆ ತುಪ್ಪವನ್ನು ಹಚ್ಚಬೇಕು.
ಆಭ್ಯಂತರ ಉಪಯೋಗಗಳು ಮುಂದಿನವಾರ………
ವೈದ್ಯರ ದೂರವಾಣಿ ಸಂಖ್ಯೆ: 9448260242
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಹಸುವಿನ ಹಾಲಿನ ತುಪ್ಪದಿಂದ ನೂರೆಂಟು ಲಾಭ"