ಒಣದ್ರಾಕ್ಷಿಯ ನೂರೆಂಟು ಲಾಭ

 • ಡಾ.ಎ.ಜಿ.ರವಿಶಂಕರ್
 • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ನಮ್ಮಲ್ಲಿ ಹೆಚ್ಚಿನ  ಪಾಯಸ ಹಾಗು ಭಕ್ಷ್ಯಗಳಿಗೆ ಸಾಧಾರಣವಾಗಿ ಒಣ  ದ್ರಾಕ್ಷಿ ಹಾಕದೆ ಇರುವುದಿಲ್ಲ. ಹೆಚ್ಚು ಸಿಹಿ ಮತ್ತು ಸ್ವಲ್ಪ ಹುಳಿ ರಸವನ್ನು ಹೊಂದಿರುವ ದ್ರಾಕ್ಷಿಯನ್ನು ಎಲ್ಲರೂ ಇಷ್ಟ ಪಡುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲೂ ಸಹ ದ್ರಾಕ್ಷಿಯು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ.

 1. ಹಿಂದಿನ ರಾತ್ರಿ 8 ರಿಂದ 10 ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ ಮರುದಿನ ಅದನ್ನು ಹಿಸುಕಿ ನೀರು ಸಮೇತ ಸೇವಿಸುವುದರಿಂದ ರಕ್ತಹೀನತೆ ಕಡಿಮೆಯಾಗುತ್ತದೆ.
 2. ಒಣ ದ್ರಾಕ್ಷಿಯನ್ನು ಕಲ್ಲುಸಕ್ಕರೆಯೊಂದಿಗೆ ಸೇವಿಸುವುದರಿಂದ ಮೂಗಿನಲ್ಲಿ ಕಾಣುವ ರಕ್ತಸ್ರಾವ ಕಡಿಮೆಯಾಗುತ್ತದೆ.
 3. ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಸೇವಿಸುವುದರಿಂದ ಶರೀರದ ಉಷ್ಣತೆ ಕಡಿಮೆಯಾಗುತ್ತದೆ. ಹಾಗೆಯೇ ಜ್ವರದ ತಾಪವು ಸಹ ಕಡಿಮೆಯಾಗುತ್ತದೆ.
 4. ದ್ರಾಕ್ಷಿಯನ್ನು ನೆನೆಹಾಕಿದ ನೀರು ಮತ್ತು ದ್ರಾಕ್ಷಿ ಸಮೇತ ಸೇವಿಸುವುದರಿಂದ ಅತಿಯಾದ ಬಾಯಾರಿಕೆ ಕಡಿಮೆಯಾಗುತ್ತದೆ ಮತ್ತು ಮನಸ್ಸಿಗೆ ಮುದವನ್ನು ನೀಡುತ್ತದೆ.
 5. ಮಧ್ಯಪಾನಿಗಳಿಗೆ ಇದನ್ನು ಕೊಡುವುದರಿಂದ ಮದ್ಯದ ಅಮಲು ಕಡಿಮೆಯಾಗುತ್ತದೆ ಮತ್ತು ಮಧ್ಯಪಾನಿಗಳ ಜೀರ್ಣ ಶಕ್ತಿಯು ವೃದ್ಧಿಯಾಗುತ್ತದೆ.
 6. ನಿಯಮಿತವಾಗಿ ದ್ರಾಕ್ಷಿಯನ್ನು ಸೇವಿಸುವುದರಿಂದ ಮೆದುಳಿನ ಶಕ್ತಿಯು ವೃದ್ಧಿಯಾಗುತ್ತದೆ.
 7. ನಿದ್ರಾ ಹೀನತೆಯ ಸಮಸ್ಯೆ ಇದ್ದವರು ಪ್ರತಿದಿನ 8 ರಿಂದ 10 ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಹಾಕಿ ಸೇವಿಸುವುದು ಉತ್ತಮ.
 8. ಪಿತ್ತ ಅಥವಾ ಉಷ್ಣತೆಯಿಂದ ತಲೆ ಸುತ್ತುವಿಕೆ ಹಾಗು ವಾಕರಿಕೆ ಇದ್ದಲ್ಲಿ ದ್ರಾಕ್ಷಿಯ ನೀರನ್ನು ಕುಡಿಯಬೇಕು.
 9. ಮೂತ್ರ ಪ್ರವೃತ್ತಿಯು ಸರಿಯಾಗಿ ಆಗದಿದ್ದರೆ ಮತ್ತು ಉರಿಯಿಂದ ಕೂಡಿದ್ದರೆ ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಹಾಕಿ ಸೇವಿಸಬೇಕು.
 10. ಎಳೆ ಮಕ್ಕಳಲ್ಲಿ ಮಲಬದ್ಧತೆಯ ಸಮಸ್ಯೆ ಇದ್ದಲ್ಲಿ ಒಣದ್ರಾಕ್ಷಿಯನ್ನು ನೀರಿನಲ್ಲಿ ಹಿಚುಕಿ ಆ ನೀರನ್ನು ಕುಡಿಸಬೇಕು. ಇದರಿಂದ ಮಕ್ಕಳ ಜೀರ್ಣಶಕ್ತಿಯೂ ಸಹ ವ್ರುದ್ಧಿಯಾಗುತ್ತದೆ.
 11. ಇದು ಪಿತ್ತ ಜನಕಾಂಗಕ್ಕೆ ಬಲದಾಯಕವಾದ ಕಾರಣ ಕಾಮಾಲೆ ರೋಗಿಗಳಿಗೆ ಉತ್ತಮ ಪಥ್ಯಾಹಾರವಾಗಿದೆ
 12. ಇದು ಪುರುಷರಲ್ಲಿ ವೀರ್ಯವರ್ಧಕವಾಗಿದೆ ಮತ್ತು ಸ್ತ್ರೀಯರಲ್ಲಿ ಗರ್ಭಧರಿಸಲು ಉತ್ತಮ ಪೋಷಕ ಆಹಾರವಾಗಿದೆ.
 13. ದ್ರಾಕ್ಷಿಯು ಹೃದಯ ಹಾಗು ಶ್ವಾಸಕೋಶಗಳಿಗೆ ಉತ್ತಮ ಬಲದಾಯಕವಾಗಿದ್ದು ಕೆಮ್ಮು, ದಮ್ಮು, ಬಲಕ್ಷಯ, ಕೃಶತ್ವ ಇತ್ಯಾದಿಗಳಲ್ಲಿ ಸರಾಗವಾಗಿ ಬಳಸಬಹುದಾಗಿದೆ.
 14. ಯಾವುದೇ ತರನಾದ ರಕ್ತವಿಕಾರಗಳಲ್ಲಿ/ರಕ್ತಸಂಬಧಿತ ಚರ್ಮವ್ಯಾಧಿಗಳಲ್ಲಿ ದ್ರಾಕ್ಷಿಯನ್ನು ಸೇವಿಸುವುದರಿಂದ ಉತ್ತಮ ಪರಿಣಾಮವನ್ನು ನೀಡುತ್ತದೆ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ravishankar A G
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Be the first to comment on "ಒಣದ್ರಾಕ್ಷಿಯ ನೂರೆಂಟು ಲಾಭ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*