- ಇದು ಆಮಂತ್ರಣ ಪತ್ರಿಕೆಗಳ ಎಕ್ಸ್ ಕ್ಲುಸಿವ್ ಮಳಿಗೆ
- ಬಿ.ಸಿ.ರೋಡಿನ ಹೃದಯಭಾಗದ ಕೃಷ್ಣಾನಂದ ಟವರ್ಸ್ ನಲ್ಲಿದೆ
ಸಾಮಾನ್ಯವಾಗಿ ನಾವು ಬರ್ತ್ ಡೇ, ವಿವಾಹ, ಶುಭ ಸಮಾರಂಭಗಳಿದ್ದಾಗ ಸ್ನೇಹಿತರನ್ನು ಹೇಗೆ ಆಹ್ವಾನಿಸುತ್ತೇವೆ?
ಸಾಮಾನ್ಯವಾಗಿ ನಾವು ಬರ್ತ್ ಡೇ, ವಿವಾಹ, ಶುಭ ಸಮಾರಂಭಗಳಿದ್ದಾಗ ಸ್ನೇಹಿತರನ್ನು ಹೇಗೆ ಆಹ್ವಾನಿಸುತ್ತೇವೆ?
ಇಂದಿನ ಇಂಟರ್ ನೆಟ್ ಜಮಾನಾದಲ್ಲೂ ಇನ್ವಿಟೇಶನ್ ಕಾರ್ಡ್ ಇಲ್ಲದಿದ್ದರೆ ಅದೇನೋ ಅಪೂರ್ಣ ಎನಿಸುವುದು ಹೌದು. ಅತ್ಯಾಕರ್ಷಕ ಕಾರ್ಡುಗಳಲ್ಲಿ ನಮ್ಮ ಹೆಸರು ಮುದ್ರಿಸಿ ಕೊಡುವ ಖುಷಿಯೇ ಬೇರೆ. ಅದೆಲ್ಲ ಕಾಸ್ಟ್ಲಿ, ಬೆಂಗಳೂರಿನಲ್ಲಾದರೆ ಕಡಿಮೆಗೆ ದೊರಕುತ್ತದೆ, ಅಲ್ಲಿಂದಲೇ ತರಿಸೋಣ ಎನ್ನುವವರೂ ಇದ್ದಾರೆ. ಆದರೆ ಸ್ಪರ್ಧಾತ್ಮಕ ದರ, ಉತ್ತಮ ಗುಣಮಟ್ಟದ ಇನ್ವಿಟೇಶನ್ ಕಾರ್ಡ್ ನಮ್ಮೂರಲ್ಲೇ ಸಿಕ್ಕರೆ? ಅದೂ ಬಿ.ಸಿ.ರೋಡಿನಲ್ಲಿ!!!
ಎಲ್ಲಿ ಅಂದಿರಾ? ಹೆಚ್ಚು ದೂರವೇನೂ ಇಲ್ಲ. ನೇರವಾಗಿ ಬಿ.ಸಿ.ರೋಡಿನ ಫ್ಲೈ ಓವರ್ ಪಕ್ಕ ಸರ್ವೀಸ್ ರೋಡ್ ಸನಿಹವೇ ಇರುವ ಕೃಷ್ಣಾನಂದ ಟವರ್ಸ್ ನಲ್ಲಿದೆ ಇನ್ವಿಟೇಶನ್ ಗಳ ಗ್ಯಾಲರಿ. ಮದುವೆ, ಎಂಗೇಜ್ ಮೆಂಟ್, ಗೃಹಪ್ರವೇಶ, ಹೋಲಿ ಕಮ್ಯೂನಿಯನ್, ವಾರ್ಷಿಕೋತ್ಸವ, ವಿಸಿಟಿಂಗ್ ಕಾರ್ಡುಗಳು….ಹೀಗೆ ಒಂದಲ್ಲ, ಎರಡಲ್ಲ, 200ಕ್ಕೂ ಅಧಿಕ ವೈವಿಧ್ಯದ ವಿನ್ಯಾಸವುಳ್ಳ ಕಾರ್ಡುಗಳು ಇಲ್ಲಿ ಆಯ್ಕೆಗೆ ಲಭ್ಯ. ಜೊತೆಗೆ ಡಿಜಿಟಲ್ ಪ್ರಿಂಟ್, ಸ್ಕ್ರೀನ್ ಪ್ರಿಂಟಿಂಗ್, ಆಫ್ ಸೆಟ್ ಪ್ರಿಂಟಿಂಗ್ ವ್ಯವಸ್ಥೆಯೂ ಇದೆ. ಎಲ್ಲ ವರ್ಗದ ಜನರಿಗೆ, ಎಲ್ಲರ ಅಭಿರುಚಿಗೆ ಒಪ್ಪುವ ಆಮಂತ್ರಣ ಪತ್ರಿಕೆಗಳ ಎಕ್ಲುಸಿವ್ ಶೋರೂಮ್ ಇದು ಎನ್ನುತ್ತಾರೆ ಇದರ ಮಾಲೀಕ ಆಲ್ವಿನ್. ಅವರ ದೂರವಾಣಿ ಸಂಖ್ಯೆ 9880921097 ಮತ್ತು 9743521097.
https://www.facebook.com/ingallerymangalore/
Be the first to comment on "ಬಿ.ಸಿ.ರೋಡಿನಲ್ಲಿ ತೆರೆದಿದೆ ಇನ್ವಿಟೇಶನ್ ಗಳ “ಗ್ಯಾಲರಿ’’"