ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕುಜ್ಲುಬೆಟ್ಟುವಿನ ಶ್ರೀ ನಾಗಬ್ರಹ್ಮ,ಶ್ರೀ ಅಣ್ಣಪ್ಪ ಪಂಜುರ್ಲಿ,ಶ್ರೀ ಕೊಡಮಣಿತ್ತಾಯ,ವ್ಯಾಘ್ರ ಚಾಮುಂಡಿ,ರಕ್ತೇಶ್ವರಿ,ಸಪರಿವಾರ ದೈವಗಳ ಗ್ರಾಮ ದೈವಸ್ಥಾನದಲ್ಲಿ ವರ್ಷಾವಧಿ ಆಶ್ಲೇಷ ಬಲಿ ಮತ್ತು ನೇಮೋತ್ಸವವು 17 ಶುಕ್ರವಾರ ಮತ್ತು 18 ಶನಿವಾರ ನಡೆಯಲಿದೆ. ಶುಕ್ರವಾರ ಪರನೀರು ನಾಗಬನದಲ್ಲಿ ಕಲಶಾಭಿಷೇಕ,ಆಶ್ಲೇಷ ಬಲಿ,ತಂಬಿಲ ಸೇವೆ ಮತ್ತು ರಕ್ತೇಶ್ವರಿ ಮೈಸಂದಾಯ ದೈವಗಳಿಗೆ ಪರ್ವಪೂಜೆ ನಡೆದು ಮದ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ,ದಿನಾಂಕ ಶನಿವಾರ ಬೆಳಿಗ್ಗೆ 10 ಗಂಟೆಗೆ ನಡ್ಯೋಡಿಗುತ್ತುವಿನಿಂದ ದೈವಗಳ ಭಂಡಾರವು ಕುಜ್ಲುಬೆಟ್ಟುವಿನ ಗ್ರಾಮ ದೈವಸ್ಥಾನಕ್ಕೆ ಬಂದು ಕಲಶಾಭಿಷೇಕ,ಪರ್ವಪೂಜೆ ನಡೆದು ಮದ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ,ಅಪರಾಹ್ನ 1 ಗಂಟೆಗೆ ರಕ್ತೇಶ್ವರಿ ಮೈಸಂದಾಯ ದೈವಗಳಿಗೆ ನೇಮೋತ್ಸವ ರಾತ್ರಿ ಗಂಟೆ 8ರಿಂದ ಕೊಡಮಣಿತ್ತಾಯ, ವ್ಯಾಘ್ರಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಕಲ್ಕುಡ-ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಭಗವತ್ಭಕ್ತರು ಕಾರ್‍ಯಕ್ರಮಕ್ಕೆ ಆಗಮಿಸಿ ಶ್ರೀ ದೈವ, ದೇವರುಗಳ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಗ್ರಾಮ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಎಂದು ಕ್ಷೇತ್ರದ ಆಡಳಿತ ಸಮಿತಿ ಮತ್ತು ನೇಮೋತ್ಸವ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಮೂಡನಡುಗೋಡು ಗ್ರಾಮದ ಕುಜ್ಲುಬೆಟ್ಟುವಿನ ಗ್ರಾಮ ದೈವಗಳಿಗೆ ನೇಮೋತ್ಸವ
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮೂಡನಡುಗೋಡು ಗ್ರಾಮದ ಕುಜ್ಲುಬೆಟ್ಟುವಿನ ಗ್ರಾಮ ದೈವಗಳಿಗೆ ನೇಮೋತ್ಸವ"