ವಿಟ್ಲ

ಆರ್ ಟಿಒ ಅಧಿಕಾರಿಗಳ ಕಾರ್ಯಾಚರಣೆ: ಬಸ್, ಟೆಂಪೋ, ಸಿಸಿ ಬಸ್ ಗೆ ದಂಡ

ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ವಿಟ್ಲಕ್ಕೆ ಆಗಮಿಸಿದ ಮಂಗಳೂರು ಸಾರಿಗೆ ಇಲಾಖೆಯ ಉಪ ಸಾರಿಗೆ ಆಯುಕ್ತ ಆರ್. ಎಂ. ವರ್ಣೆಕರ್ ಅವರನ್ನೊಳಗೊಂಡ ತಂಡ ಅವಧಿ ಮೀರಿದ ಬಸ್ ವಶಕ್ಕೆ ಪಡೆಯುವ ಜತೆಗೆ ತೆರಿಗೆ ವಂಚಿಸಿ ಓಡಾಡುತ್ತಿದ್ದ ಕೇರಳದ ಟೆಂಪೋ…


ಬಾಲಕಿಗೆ ಕಿರುಕುಳ: ಆರೋಪಿ ವಶಕ್ಕೆ

ಅಳಿಕೆಯ ದಿನಸಿ ಅಂಗಡಿ ಮಾಲಕನೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣವೀಗ ವಿಟ್ಲ ಠಾಣೆಯಲ್ಲಿ ದಾಖಲಾಗಿದ್ದು, ಹಮೀದ್ (50) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರು ವರ್ಷದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣ ಈತನ ಮೇಲಿದೆ.


ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿಉತ್ತಮ ಗುಣಮಟ್ಟದ ಶಿಕ್ಷಣ

ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳು ನೀಡುತ್ತಿದೆ. ಸಾಧನೆಗೆ ಶಿಕ್ಷಣ ಪ್ರಮುಖ ಅಂಗವಾಗಿದ್ದು, ಸರ್ಕಾರಿ ಶಾಲೆಯೂ ಆತ್ಮಸ್ಥೈರ್ಯ ತುಂಬುತ್ತದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಅವರು…


ಶಾರ್ಟ್ ಸರ್ಕ್ಯೂಟ್ ನಿಂದ ಗುಡ್ಡಕ್ಕೆ ಬೆಂಕಿ

ಕಲ್ಲಡ್ಕ-ಕಾಂಞಂಗಾಡ್ ಅಂತರಾಜ್ಯ ಹೆದ್ದಾರಿಯ ಕುದ್ದುಪದವು ಮರಕ್ಕಿನಿ ಎಂಬಲ್ಲಿ ಗುಡ್ಡಯೊಂದಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ ಪರಿಣಾಮ ಗುಡ್ಡ ಸಂಪೂರ್ಣವಾಗಿ ಹೊತ್ತಿ ಉರಿದು ಬೆಲೆಬಾಳುವ ಮರಗಳು ಗುರುವಾರ ಭಸ್ಮಗೊಂಡವು. ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ಬೆಂಕಿಯ ಚೂರು ನೆಲಕ್ಕೆ ಉರುಳಿ…


ಒಡಿಯೂರು: ಸಾರ್ವಜನಿಕ ಶ್ರೀ ಅಶ್ವತ್ಥನಾರಾಯಣ ಪೂಜೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪೂಜ್ಯ ಶ್ರೀಗಳವರ ಮಾರ್ಗದರ್ಶನದಂತೆ ವೇ.ಮೂ. ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ನಾಗಶಿಲಾ ಬಿಂಬ ಪುನರ್‌ಪ್ರತಿಷ್ಠೆ ಹಾಗೂ ಸಾರ್ವಜನಿಕ ಶ್ರೀ ಅಶ್ವತ್ಥನಾರಾಯಣ ಪೂಜೆ ಯು ಗುರುವಾರ ನೆರವೇರಿತು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ…


ವಿಠಲ ಪ್ರೌಢಶಾಲೆಯಲ್ಲಿ ದತ್ತಿ ಉಪನ್ಯಾಸ

ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಟ್ಲದ ವಿಠಲ ಪ್ರೌಢಶಾಲೆಯಲ್ಲಿ ಕೂಡೂರು ಕೃಷ್ಣ ಭಟ್ ದತ್ತಿ ಕಾರ್ಯಕ್ರಮದ ಪ್ರಯುಕ್ತ ಸಾಮಾಜಿಕ ಪ್ರಗತಿಯಲ್ಲಿ ಸಾಹಿತ್ಯ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ಮಂಗಳವಾರ ನಡೆಯಿತು. ತುಂಬೆ ಕಾಲೇಜಿನ ಉಪನ್ಯಾಸಕ ಅಬ್ದುಲ್…


ಹಿರಿಯ ಸಾಮಾಜಿಕ ಮುಂದಾಳು ಕೊಲ್ಯ ಸೀತಾರಾಮ ಶೆಟ್ಟಿ ನಿಧನ

  ವಿಟ್ಲದ ಸಾಮಾಜಿಕ ಮುಂದಾಳು, ರಾಜಕೀಯ ಮುಖಂಡ ಕೊಲ್ಯ ಸೀತಾರಾಮ ಶೆಟ್ಟಿ (63) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫೆ.13ರಂದು ನಿಧನ ಹೊಂದಿದರು. ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ಅವರು ಪಕ್ಷದ…


ಯೂತ್ ಬಿಲ್ಲವ ಎಸೋಸಿಯೇಶನ್ ವಾರ್ಷಿಕೋತ್ಸವ

ಯುವಶಕ್ತಿ ಸಮಾಜದ ಸದುದ್ದೇಶಕ್ಕಾಗಿ ಸಕಾಲಿಕವಾಗಿ ಸದ್ವಿನಿಯೋಗವಾದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣವಾಗುವುದು ಎಂದು ಉದ್ಯಮಿ ರವಿ ಪೂಜಾರಿ ಚಿಲಿಂಬಿ ತಿಳಿಸಿದರು. ವಿಟ್ಲ ಶಿವಗಿರಿಯಲ್ಲಿ ಭಾನುವಾರ ವಿಟ್ಲ ಯೂತ್ ಬಿಲ್ಲವ ಅಸೋಸಿಯೇಶನ್ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ ನಡೆದ…


ಅನಿಲಕಟ್ಟೆಯಲ್ಲಿ ಗೇರುತೋಟಕ್ಕೆ ಬೆಂಕಿ

ಸೋಮವಾರ ವಿಟ್ಲ ಕಸಬಾ ಗ್ರಾಮದ ಅನಿಲಕಟ್ಟೆಯಲ್ಲಿರುವ ಗೇರು ತೋಟವೊಂದಕ್ಕೆ ಬೆಂಕಿ ತಗಲಿ ಹಲವು ಗೇರು ಗಿಡಗಳು ನಾಶಗೊಂಡಿವೆ. ವಿಟ್ಲ ಕಸಬಾ ಗ್ರಾಮದ ಡಾ. ಸುರೇಶ್ ಕೂಡೂರು ಎಂಬವರಿಗೆ ಸೇರಿದ ಗೇರುಬೀಜ ತೋಟಕ್ಕೆ ವಿದ್ಯುತ್ ತಂತಿಯ ಶಾರ್ಟ್ ಸರ್ಕ್ಯೂಟ್‌ನಿಂದ…


ಭಗವಂತನ ಸೇವೆಯಲ್ಲಿ ಭಕ್ತರ ಭಾಗಿ: ಒಡಿಯೂರು ಸ್ವಾಮೀಜಿ

ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಫೆ.5, 6ರಂದು ನಡೆದ ತುಳುವೆರೆ ತುಲಿಪು ಮತ್ತು ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ ಕಾರ್ಯಕ್ರಮಕ್ಕೆ ಸಂಬಂಧಿಸಿ ಕಾರ್ಯಕರ್ತರ ಅಭಿನಂದನಾ ಸಭೆ ಒಡಿಯೂರಿನಲ್ಲಿ ನಡೆಯಿತು. www.bantwalnews.com report ಈ ಸಂದರ್ಭ ಆಶೀರ್ವಚನ…