ಸುದ್ದಿಗಳು

ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಣೆ

ಶಿವಾಜಿ ಮಹಾರಾಜರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಕರೆ ನೀಡಿದರು. ಬಿ.ಸಿ.ರೋಡಿನ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಭಾನುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೌಲ್ಯವನ್ನು ನಮ್ಮ…


ಬಾಲಕಿಗೆ ಕಿರುಕುಳ: ಆರೋಪಿ ವಶಕ್ಕೆ

ಅಳಿಕೆಯ ದಿನಸಿ ಅಂಗಡಿ ಮಾಲಕನೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣವೀಗ ವಿಟ್ಲ ಠಾಣೆಯಲ್ಲಿ ದಾಖಲಾಗಿದ್ದು, ಹಮೀದ್ (50) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರು ವರ್ಷದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣ ಈತನ ಮೇಲಿದೆ.


ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿಉತ್ತಮ ಗುಣಮಟ್ಟದ ಶಿಕ್ಷಣ

ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳು ನೀಡುತ್ತಿದೆ. ಸಾಧನೆಗೆ ಶಿಕ್ಷಣ ಪ್ರಮುಖ ಅಂಗವಾಗಿದ್ದು, ಸರ್ಕಾರಿ ಶಾಲೆಯೂ ಆತ್ಮಸ್ಥೈರ್ಯ ತುಂಬುತ್ತದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಅವರು…


61.36 ಲಕ್ಷ ರೂ ಮಿಗತೆ ಆಯವ್ಯಯ: ಇದು ಬಂಟ್ವಾಳ ಪುರಸಭೆ ಬಜೆಟ್

ಒಟ್ಟು 61.36 ಲಕ್ಷ ರೂ ಮಿಗತೆ ಬಜೆಟ್ ಅನ್ನು 2017-18ನೇ ಸಾಲಿಗೆ ಬಂಟ್ವಾಳ ಪುರಸಭೆಯಲ್ಲಿ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಶನಿವಾರ ಮಂಡಿಸಿದರು. ಇಲ್ಲಿನ ಅಂಕಿ, ಅಂಶಕ್ಕೂ ಆಯವ್ಯಯಕ್ಕೂ ವ್ಯತ್ಯಾಸ ಇರುವುದನ್ನು ಬಿಜೆಪಿ ಸದಸ್ಯ ದೇವದಾಸ ಶೆಟ್ಟಿ ಲಿಖಿತವಾಗಿಯೇ…


ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ನಿಯಮಿತ ಶಾಖೆ ಉದ್ಘಾಟನೆ

ಶನಿವಾರ ಬಿ.ಸಿ.ರೋಡು ಕೈಕಂಬದ ವಿಶಾಲ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ನಿಯಮಿತ ಮೂರನೆ ಶಾಖೆಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ದೀಪ ಬೆಳಗಿಸಿ ಮಾತನಾಡಿದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು…


ಶಾರ್ಟ್ ಸರ್ಕ್ಯೂಟ್ ನಿಂದ ಗುಡ್ಡಕ್ಕೆ ಬೆಂಕಿ

ಕಲ್ಲಡ್ಕ-ಕಾಂಞಂಗಾಡ್ ಅಂತರಾಜ್ಯ ಹೆದ್ದಾರಿಯ ಕುದ್ದುಪದವು ಮರಕ್ಕಿನಿ ಎಂಬಲ್ಲಿ ಗುಡ್ಡಯೊಂದಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ ಪರಿಣಾಮ ಗುಡ್ಡ ಸಂಪೂರ್ಣವಾಗಿ ಹೊತ್ತಿ ಉರಿದು ಬೆಲೆಬಾಳುವ ಮರಗಳು ಗುರುವಾರ ಭಸ್ಮಗೊಂಡವು. ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ಬೆಂಕಿಯ ಚೂರು ನೆಲಕ್ಕೆ ಉರುಳಿ…


ಒಡಿಯೂರು: ಸಾರ್ವಜನಿಕ ಶ್ರೀ ಅಶ್ವತ್ಥನಾರಾಯಣ ಪೂಜೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪೂಜ್ಯ ಶ್ರೀಗಳವರ ಮಾರ್ಗದರ್ಶನದಂತೆ ವೇ.ಮೂ. ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ನಾಗಶಿಲಾ ಬಿಂಬ ಪುನರ್‌ಪ್ರತಿಷ್ಠೆ ಹಾಗೂ ಸಾರ್ವಜನಿಕ ಶ್ರೀ ಅಶ್ವತ್ಥನಾರಾಯಣ ಪೂಜೆ ಯು ಗುರುವಾರ ನೆರವೇರಿತು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ…


ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಪದವಿ ಕಾಲೇಜು ವಾರ್ಷಿಕೋತ್ಸವ

ಭಾರತದಲ್ಲಿ ಸ್ವೋದ್ಯೋಗಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ಮೂಡುಬಿದರೆ ಬನ್ನಡ್ಕದ ಎಸ್.ಕೆ.ಎಫ್. ಗ್ರೂಪ್ ಆಫ್ ಕಂಪನಿಯ ಮುಖ್ಯಸ್ಥ ರಾಮಕೃಷ್ಣ ಆಚಾರ್ ಹೇಳಿದರು.ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪದವಿ ಕಾಲೇಜಿನ ವಾರ್ಷಿಕೋತ್ಸವ ಸಂದರ್ಭ ಶ್ರೀರಾಮ ಉದ್ಯೋಗ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಅವರು…


ಶಂಸುಲ್ ಉಲಮಾ ಅನುಸ್ಮರಣೆ, ಧಾರ್ಮಿಕ ಪ್ರವಚನ

ಎಸ್ಕೆಎಸ್ಸೆಸ್ಸೆಫ್ ಸೂರಿಕುಮೇರು-ಮಾಣಿ ಶಾಖೆ ಆಶ್ರಯದಲ್ಲಿ ಸಂಶುಲ್ ಉಲಮಾ ಹಾಗೂ ಅಗಲಿದ ಸಮಸ್ತ ನಾಯಕರ ಅನುಸ್ಮರಣೆ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಸೂರಿಕುಮೇರು ಎಚ್.ಪಿ. ಪೆಟ್ರೋಲ್ ಪಂಪ್ ಬಳಿಯ ಸಂಶುಲ್ ಉಲಮಾ ವೇದಿಕೆಯಲ್ಲಿ ನಡೆಯಿತು. ಸಯ್ಯಿದ್ ಮುಝಮ್ಮಿಲ್ ಅಲಿ…


ಪೆರಾಜೆ ನೇರಳಕಟ್ಟೆಯಲ್ಲಿ ವಾಲಿಬಾಲ್ ಪಂದ್ಯಾಟ

ಪೆರಾಜೆ-ನೇರಳಕಟ್ಟೆಯ ಯುವ ಕೇಸರಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ನೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಮಾಣಿ ಯುವಕ ಮಂಡಲ ತಂಡವು ಕೇಸರಿ ಟ್ರೋಫಿ-2017ನ್ನು ಪಡೆದುಕೊಂಡಿತು. ಕಡೇಶ್ವಾಲ್ಯದ ಶ್ರೀ ಲಕ್ಷ್ಮೀ ನರಸಿಂಹ ಗೆಳೆಯರ ಬಳಗ ತಂಡ ದ್ವಿತೀಯ ಹಾಗೂ…