ಸುದ್ದಿಗಳು

ಕಲ್ಲೆಸೆದು ಹಾನಿ, ಐವರ ದಸ್ತಗಿರಿ

ಫೆ.25ರಂದು ನಡೆದ ಬಂದ್ ವೇಳೆ ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ಕಲ್ಲೆಸೆದು ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಪೊಲೀಸರು ನಾಲ್ವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅದೇ ರೀತಿ…


ನೋಟಿನ ಮೇಲೆ ಅನುಮಾನ, ಬ್ಯಾಂಕಿನಲ್ಲಿ ಗೊಂದಲ

ಪಕ್ಕದಲ್ಲೇ ಇದ್ದ ಎಟಿಎಂನಿಂದ ಡ್ರಾ ಮಾಡಿದ ನೋಟನ್ನು ಚಿಲ್ಲರೆ ಮಾಡಲೆಂದು ಬ್ಯಾಂಕಿಗೆ ಹೋದಾಗ ಆ ನೋಟಿನ ಮೇಲೆ ಅನುಮಾನಪಟ್ಟ ಬ್ಯಾಂಕಿ ಸಿಬ್ಬಂದಿ ಚಿಲ್ಲರೆ ನೀಡಲು ನಿರಾಕರಿಸಿದ ಘಟನೆ ಬಿ.ಸಿ.ರೋಡಿನಲ್ಲಿ ಸೋಮವಾರ ಗೊಂದಲಕ್ಕೆ ಕಾರಣವಾಯಿತು. ಬೆಳಗ್ಗೆ ಶಿಕ್ಷಕಿಯೊಬ್ಬರು ಎಟಿಎಂನಿಂದ…


ನಾಳೆ ಅರಸು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ

ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಬಿ.ಸುಬ್ಬಯ್ಯ ಶೆಟ್ಟಿ, ಬಿ.ಎ.ಮೊಯ್ದಿನ್ ಮತ್ತು ದಿನೇಶ್ ಅಮೀನ್ ಮಟ್ಟು ಅವರಿಗೆ ಅಭಿನಂದನಾ ಸಮಾರಂಭ, ಮದರ್ ತೆರೆಸಾ ಸಂತ…


ಬಾಲ್ಯ ವಿವಾಹ ನಿಷೇಧ ಜಾಗೃತಿ ಶಿಬಿರ

ಬಾಲ್ಯ ವಿವಾಹ ನಿಷೇಧ ಜಾಗೃತಿ ಶಿಬಿರ ಅಮ್ಟಾಡಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಅಮ್ಟಾಡಿ ಗ್ರಾ.ಪಂ.ಉಪಾಧ್ಯಕ್ಷೆ ಯಶೋಧಾ ವಹಿಸಿದ್ದರು. ಮಂಜು ವಿಟ್ಲ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾ.ಪಂ.ಸದಸ್ಯೆ ಮಲ್ಲಿಕಾ ವಿ.ಶೆಟ್ಟಿ, ಹಿರಿಯ ಮೇಲ್ವಿಚಾರಕಿ ಗಾಯತ್ರಿ…


ಮಿತ್ತಬೈಲ್‌ನಲ್ಲಿ ಅಭಿನಂದನಾ-ಸನ್ಮಾನ ಕಾರ್ಯಕ್ರಮ

ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಹಾಗೂ ಅಧೀನ ಮದರಸ ಕಮಿಟಿ ಹಾಗೂ ಮಿತ್ತಬೈಲ್ ಜಮಾಅತ್ ವ್ಯಾಪ್ತಿಗೆ ಒಳಪಟ್ಟ 18 ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಉಪಾಧ್ಯಕ್ಷರಾಗಿ ಆಯ್ಕೆಯಾದ…


ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ಕ್ಯಾನ್ಸರ್ ಅರಿವು

ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿ ಕಾಲೇಜಿನಲ್ಲಿ ಗರ್ಭಕೋಶ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಬಗೆಗಿನ ಅರಿವು ಕಾರ್ಯಕ್ರಮವನ್ನು ಮಂಗಳೂರಿನ ವೈದ್ಯ ಡಾ.ರೋಹನ್ ಗಟ್ಟಿ ಉದ್ಘಾಟಿಸಿದರು. ರೋಗ ಬಾರದ ರೀತಿಯಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳುವುದು ಇಂದಿನ ತುರ್ತು ಅವಶ್ಯಕತೆ…


ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಗುರೂಜಿ ಗೋಳ್ವಲ್ಕರ್ ಜನ್ಮದಿನಾಚರಣೆ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘ ಚಾಲಕ ಗುರೂಜಿ ಮಾಧವ ಸದಾಶಿವ ರಾವ್ ಗೋಳ್ವಲ್ಕರ್ ಜನ್ಮದಿನಾಚರಣೆ ನಡೆಯಿತು. ಈ ಸಂದರ್ಭ ಸಭಾ ಕಾರ್ಯಕ್ರಮ ಬಳಿಕ ಸಾಮರಸ್ಯ ಭೋಜನ ನಡೆಯಿತು.  ಮುಖ್ಯ ಅತಿಥಿಗಾಗಿ ಅಂತಾರಾಷ್ಟ್ರೀಯ…


ಫರಂಗಿಪೇಟೆ ನಮ್ಮ ಆಯುರ್ವೇದದಲ್ಲಿ ಉಚಿತ ಶಿಬಿರ

ಫರಂಗಿಪೇಟೆಯಲ್ಲಿರುವ “ನಮ್ಮ ಆಯುರ್ವೇದ ಚಿಕಿತ್ಸಾಲಯ ಮತ್ತು ಔಷಧಾಲಯ’ದಲ್ಲಿ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಉಚಿತ ಶಿಬಿರ ಭಾನುವಾರ ನಡೆಯಿತು. ಪರಿಸರದ ಹಲವಾರು ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದರು. ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆತಿಕಾ ಶಿಬಿರವನ್ನು ಉದ್ಘಾಟಿಸಿದರು….


ಫರಂಗಿಪೇಟೆಯಲ್ಲಿ ಸರಳ ಸಾಮೂಹಿಕ ವಿವಾಹ

ಮುಹಿಯ್ಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ ಸಹಕಾರದೊಂದಿಗೆ ಖಿದ್‌ಮತುಲ್ ಇಸ್ಲಾಮ್ ಅಸೋಸಿಯೇಶನ್ ಫರಂಗಿಪೇಟೆ ವತಿಯಿಂದ ಫರಂಗಿಪೇಟೆ ನೇತ್ರಾವತಿ ನದಿ ಕಿನಾರೆಯಲ್ಲಿ ಹತ್ತು ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಭಾನುವಾರ ನಡೆಯಿತು. ಈ ಸಂದರ್ಭ ಮಾತನಾಡಿದ ಫರಂಗಿಪೇಟೆ ಜುಮಾ…


ಅಜ್ಜಿನಡ್ಕದಲ್ಲಿ ಮಾರ್ಚ್ 12ರಂದು ಗ್ರೀನ್ ಟ್ರೋಫಿ ಕ್ರಿಕೆಟ್

ಅಜ್ಜಿಡ್ಕ ಶಾಲಾ ಮೈದಾನದಲ್ಲಿ ಗ್ರೀನ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಮತ್ತು ಎಂಡೋಸಲ್ಫಾನ್ ಪೀಡಿತರಿಗೆ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮ ಮಾರ್ಚ್ 12ರಂದು ನಡೆಯಲಿದೆ. ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಂಜೆ ನಡೆಯುವ ಸಮಾರೋಪದಲ್ಲಿ ಶ್ರೀ ಬಾಳೆಕೋಡಿ…