ಬಂಟ್ವಾಳ

ಹಳ್ಳಿಗೊಬ್ಬ ಪೊಲೀಸ್ ವ್ಯವಸ್ಥೆಗೆ ಚಾಲನೆ ನೀಡಿದ ಎಸ್ಪಿ ಬೊರಸೆ

ರಾಜ್ಯ ಪೊಲೀಸ್ ಇಲಾಖೆ ನೂತನವಾಗಿ ಜಾರಿಗೆ ತಂದಿರುವ ಹಳ್ಳಿಗೊಬ್ಬ ಪೊಲೀಸ್ ಕಾರ್ಯಕ್ರಮದ ಬೀಟ್ ವ್ಯವಸ್ಥೆ ಶನಿವಾರ ದ.ಕ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನಬಳಿಯಲ್ಲಿರುವ ರೋಟರಿ ಬಾಲಭವನದಲ್ಲಿ ಜಾರಿಗೊಂಡಿತು.


ವಸ್ತುಸಂಗ್ರಹಾಲಯಗಳು ಹೊಸಪೀಳಿಗೆಗೆ ದಾರಿದೀಪ: ಡಾ. ಹೆಗ್ಗಡೆ

ತುಳು ಸಂಸ್ಕೃತಿ, ಬದುಕನ್ನು ಪರಿಚಯಿಸುವ ರಾಣಿ ಅಬ್ಬಕ್ಕ ಸ್ಮಾರಕ ವಸ್ತುಸಂಗ್ರಹಾಲಯ ವಿಶ್ವಕ್ಕೆ ಮಾದರಿಯಾಗಿದ್ದು, ಹೊಸಪೀಳಿಗೆಗೆ ದಾರಿದೀಪವಾಗಬೇಕು ಎಂದು ಧರ್ಮಸ್ಥಳ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಶನಿವಾರ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು…


ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೋಫೋನ್‌ವಾದಕ ಬಿ.ಜಿ.ರವೀಂದ್ರ ಬಂಟ್ವಾಳ್ ನಿಧನ

ಬಂಟ್ವಾಳ  ಭಂಡಾರಿಬೆಟ್ಟು ನಿವಾಸಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸ್ಯಾಕ್ಸೋಫೋನ್‌ವಾದಕ ಬಿ.ಜಿ.ರವೀಂದ್ರ ಬಂಟ್ವಾಳ್ (71) ಹೃದಯಾಘಾತದಿಂದ ಮೂಡುಬಿದ್ರೆ ಸ್ವಗೃಹದಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು.


ಪಕ್ಷ ಸಂಘಟನೆ ಬಲಪಡಿಸಲು ಕರೆ

ಪಕ್ಷದ ಸಂಘಟನೆ ಬಲಪಡಿಸಲು ಎಲ್ಲರೂ ಸಕ್ರಿಯವಾಗಿ ಶ್ರಮಿಸಬೇಕು ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಕರೆ ನೀಡಿದರು. ಬಂಟ್ವಾಳ ನಿತ್ಯಾನಂದ ಭಜನಾ ಮಂದಿರದಲ್ಲಿ ನಡೆದ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು….


ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ

ಧಾರವಾಡದ ಹುರಕಡ್ಲಿ ಕಾನೂನು ಮಹಾವಿದ್ಯಾಲಯದಲ್ಲಿ “ಉಚಿತ ಅಂತರ್ಜಾಲ ಪೂರೈಕೆ ಯುವ ಜನತೆಗೆ ಹಾನಿಕಾರಕವೇ” ಎಂಬ ವಿಷಯದಲ್ಲಿ  ನಡೆದ ಅಂತರ್ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಮೊಹಮ್ಮದ್ ಗಝಾಲಿ…


ಭಾನುವಾರ ರಕ್ತದಾನ, ನೇತ್ರ ತಪಾಸಣೆ

ಬಿಜೆಪಿಯ ಸಜೀಪಮುನ್ನೂರು ಗ್ರಾಮ ಸಮಿತಿ ಆಶ್ರಯದಲ್ಲಿ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ ಮತ್ತು ಶ್ರೀಗುರು ಮಾಚಿದೇವ ಸಮುದಾಯ ಭವನ, ಕಂದೂರು ಸಹಭಾಗಿತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ಕಣ್ಣು ತಪಾಸಣಾ ಶಿಬಿರ ಏ.೨ರ…


ಮೋದಿ ಸರಕಾರದಿಂದ ಜನರಿಗೆ ತೊಂದರೆ

ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ಜನಸಾಮಾನ್ಯರ ಕಷ್ಟಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ ಎಂದು ಕಾಂಗ್ರೆಸ್ ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ ಆರೋಪಿಸಿದ್ದಾರೆ. ಹಿಂದೆ ಮನಮೋಹನ ಸಿಂಗ್ ಅಧಿಕಾರದಲ್ಲಿದ್ದಾಗ ಗ್ಯಾಸ್ ಬೆಲೆ ೪೪೦ ರೂ…


ಇರಾ ಕಿಂಡಿ ಅಣೆಕಟ್ಟು ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮ

ಆಹಾರ ಸಚಿವ ಯು.ಟಿ.ಖಾದರ್ ಅವರ ಶಿಫಾರಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆ ಮೂಲಕ ಮಂಜೂರುಗೊಂಡ 40 ಲಕ್ಷ ರೂ ವೆಚ್ಚದ ಕಿಂಡಿ ಅಣೆಕಟ್ಟಿಗೆ ಇರಾ ಗ್ರಾಮ ಸಂಪಿಲ ಕೊಡಂಗೆ ಎಂಬಲ್ಲಿ ಗ್ರಾಪಂ ಅಧ್ಯಕ್ಷ ಅಬ್ದುಲ್ ರಜಾಕ್ ಕುಕ್ಕಾಜೆ ಮಂಗಳವಾರ…


ಆತ್ಮಹತ್ಯೆ ಮಾಡಲು ಯತ್ನಿಸುತ್ತಿದ್ದ ಮಹಿಳೆಯ ರಕ್ಷಿಸಿದ ಪೊಲೀಸರು

ಮಗುವಿನೊಂದಿಗೆ ಮಹಿಳೆಯೋರ್ವರು ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ವೇಳೆ ಟ್ರಾಫಿಕ್ ಪೊಲೀಸರು ರಕ್ಷಿಸಿದ್ದಾರೆ. ಸೋಮವಾರ ಸಂಜೆ ವೇಳೆಗೆ ಮಹಿಳೆಯೊಬ್ಬರು ತನ್ನ ನಾಲ್ಕು ವರ್ಷದ ಪುತ್ರನೊಂದಿಗೆ ಪಾಣೆಮಂಗಳೂರು ಸೇತುವೆಯಲ್ಲಿ ನದಿಗೆ ಹಾರಲು ಯತ್ನಿಸುತ್ತಿದ್ದುದನ್ನು ಕಂಡ ಬಂಟ್ವಾಳ ಟ್ರಾಫಿಕ್ ಪೊಲೀಸರಾದ…