- ಸಹಸ್ರಾರು ಭಕ್ತರ ಸಮ್ಮುಖ ಧ್ವಜಸ್ತಂಭಕ್ಕೆ ಸ್ವಾಗತ, ಆಕರ್ಷಕ ಶೋಭಾಯಾತ್ರೆ
ಸ್ವಾಮೀಜಿಗಳು, ಜನಪ್ರತಿನಿಧಿಗಳು, ಎಲ್ಲ ಸಮುದಾಯಗಳ ಜನರು ಭಾಗಿ
ಬಿ.ಸಿ.ರೋಡಿನಿಂದ ಕೈಕಂಬ ಮಾರ್ಗವಾಗಿ ಪೊಳಲಿ ಕ್ಷೇತ್ರಕ್ಕೆ ಸಾಗಿದ ಧ್ವಜಸ್ತಂಭ - REPORT AND PHOTOS with VIDEO
VIDEO:

SR
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬಿಲ್ಲವ ಸಮಾಜದ ಸೇವಾರೂಪವಾಗಿ ಸಮರ್ಪಿಸುವ ನೂತನ ಧ್ವಜಸ್ತಂಭವನ್ನು ಮೆರವಣಿಗೆ ಮೂಲಕ ಬಿ.ಸಿ.ರೋಡಿನಲ್ಲಿ ಭಾನುವಾರ ಪೊಳಲಿಗೆ ಸಾಗಿಸಲಾಯಿತು.

Photo Courtesy: Kishore Peraje
ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಧ್ವಜ ಸ್ತಂಭಕ್ಕೆ ಧಾರ್ಮಿಕ ವಿಧಿ ವಿಧಾನದ ಬಳಿಕ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು.

Pic: Kishore Peraje
ಈ ಸಂದರ್ಭ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ , ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ರಾಮದಾಸ್ ಕೋಟ್ಯಾನ್ ಮಜಿಲಗುತ್ತು, ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿ ಪುರುಷ ಎನ್.ಸಾಲಿಯಾನ್ ನೆತ್ರಕೆರೆ, ಕೋಶಾಧಿಕಾರಿ ಬಳ್ಳಿ ಚಂದ್ರಶೇಖರ ಕೈಕಂಬ, ಉಪಾಧ್ಯಕ್ಷರಾದ ಗೋಪಾಲಕೃಷ್ಣ ಕೈಕಂಬ, ಶಂಕರ ಪೂಜಾರಿ ಬಡಕಬೈಲು, ಚಿದಾನಂದ ಗುರಿಕಾರ ನಂದ್ಯ, ಉಮೇಶ್ ಪೂಜಾರಿ ಬಾರಿಂಜ, ಜಯಾನಂದ ಅಂಚನ್ ಪಲ್ಲಿಪಾಡಿ, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಅಮ್ಮುಂಜೆ, ರಾಜು ಕೋಟ್ಯಾನ್ ಪಲ್ಲಿಪಾಡಿ, ಜೊತೆ ಕೋಶಾಧಿಕಾರಿ ಯಶವಂತ ಕೋಟ್ಯಾನ್ ಪೊಳಲಿ, ಸಂಚಾಲಕರಾದ ಭುವನೇಶ್ ಪಚ್ಚಿನಡ್ಕ, ದೊಗು ಪೂಜಾರಿ ಮಟ್ಟಿ, ಚಂದಪ್ಪ ಅಂಚನ್ ಮಜಿಲಗುತ್ತು, ಪ್ರಮುಖರಾದ ಮೋಹನ್ ಸಾಲಿಯಾನ್ ಬೆಂಜನಪದವು, ಈ ಸಂದರ್ಭ ಪ್ರಮುಖರಾದ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಜಿಪಂ ಸದಸ್ಯ ರವೀಂದ್ರ ಕಂಬಳಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬೇಬಿ ಕುಂದರ್, ಬಿಜೆಪಿ ಪ್ರಮುಖರಾದ ಜಿ.ಆನಂದ, ಬಿ. ದೇವದಾಸ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಸೋಮಪ್ಪ ಕೋಟ್ಯಾನ್, ಪ್ರಕಾಶ್ ಅಂಚನ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ತಾಪಂ ಸದಸ್ಯ ಸಂಜೀವ ಪೂಜಾರಿ, ಸಹಿತ ಹಲವು ಗಣ್ಯರು ಭಾಗವಹಿಸಿದ್ದರು.
ಬಿಲ್ಲವ ಸಮಾಜ ಸೇವಾರೂಪದಲ್ಲಿ ಧ್ವಜಸ್ತಂಭವನ್ನು ನೀಡಲಾಗುತ್ತಿದೆಯಾದರೂ ಸಮಸ್ತ ಹಿಂದೂ ಸಮಾಜ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಚೆಂಡೆ, ಬ್ಯಾಂಡ್, ನಾಸಿಕ್ ಬ್ಯಾಂಡ್, ಸ್ಯಾಕ್ಸೋಫೋನ್, ಚಿಲಿಪಿಲಿ ಗೊಂಬೆ, ಭಜನೆ ಸುಡುಮದ್ದು, ಹುಲಿವೇಷ ಇನ್ನಿತರ ವಾದ್ಯ ಘೋಷಗಗಳು ಇದ್ದವು.
ಮೆರವಣಿಗೆ ಹಿಂದಿನಿಂದ ಸಾಗಿ ಬರುತ್ತಿದ್ದ ಎಸ್.ಆರ್. ಹಿಂದೂ ಫ್ರಂಡ್ಸ್ ಪೊಳಲಿ ಸಂಘಟನೆ ಯುವಕರ ತಂಡ ಸ್ವಚ್ಚ ಭಾರತ ಪರಿಕಲ್ಪನೆಯಡಿ ತಾವೇ ಶುಚಿತ್ವದ ಕಾರ್ಯವನ್ನು ನಡೆಸಿದರು. ರಸ್ತೆಯದ್ದಕ್ಕೂ ಪಟಾಕಿ ಸಿಡಿಸಿದ ಕಸ,ನೀರಿನ ಬಾಟ್ಲಿಗಳನ್ನು ಹೆಕ್ಕಿ ಶುಚಿತ್ವಕ್ಕೆ ಮಾದರಿಯಾದರು.
Be the first to comment on "ಬಿಲ್ಲವ ಸಮಾಜ ಸೇವಾರೂಪವಾಗಿ ಪೊಳಲಿಗೆ ಧ್ವಜಸ್ತಂಭ ಭವ್ಯ ಮೆರವಣಿಗೆ"