ಮಕ್ಕಳ ಮಾತು

ಆಶಾ ಟೀಚರ್ ಹಾಗೆ ನಮ್ಗೆ ಯಾರು ಡ್ಯಾನ್ಸ್ ಕಲಿಸ್ತಾರಮ್ಮಾ..?

ಮಗುವಿನ ಕನಸುಗಳಿಗೆ ರೆಕ್ಕೆ ಕಟ್ಟಿ ವಾಸ್ತವ ಬದುಕಿನ ಚಿತ್ರಣದ ಜೊತೆಗೆ ಬದುಕುವ ಶಿಕ್ಷಣದ ಪಾಠ ಮಾಡಿದಾಗ ಮಕ್ಕಳು ಶಿಕ್ಷಕರಿಗೆ ತುಂಬಾ ನಿಕಟರಾಗುತ್ತಾರೆ.  ಮಗು ಬಯಸ್ಸಿದ್ದನ್ನು  ಕೊಡಲು ಸಾಧ್ಯವಾಗುವ ಶಿಕ್ಷಕರು ತಮ್ಮ ಕಾರ್ಯದಲ್ಲಿ ಸಂತೃಪ್ತಿ ಕಾಣುತ್ತಾರೆ.   ಮೌನೇಶ…


ಸಾಮರ್ಥ್ಯ ನಮ್ಮಲ್ಲೇ ಇದೆ..

ಪ್ರ॒ತಿಯೊಬ್ಬರಲ್ಲೂ ಪ್ರತಿಭೆ ಅಡಗಿರುತ್ತದೆ. ಅದಕ್ಕೆ ಸೂಕ್ತ ಅವಕಾಶಗಳನ್ನು ಒದಗಿಸುವುದು ಹಾಗೂ ಪ್ರತಿಭಾ ವಿಕಸನಕ್ಕೆ ಅಗತ್ಯವಿರುವ ಪ್ರೇರಣೆಯನ್ನು ಒದಗಿಸುವ ಕೆಲಸ ದೊಡ್ಡವರಾದಾಗಬೇಕೇ ವಿನಃ ಮಕ್ಕಳ ಪ್ರತಿಭೆಗಳನ್ನೇ ತಮ್ಮ ವ್ಯಾಪಾರದ ಸರಕ್ಕಾನ್ನಾಗಿಸುವ ಶಿಕ್ಷಣೋದ್ಯಮಿಗಳ ನಿಲುವನ್ನು ನಾವು ಖಂಡಿಸಬೇಕಾಗಿದೆ.ನಾನು ಸ್ವಾತಂತ್ರ್ಯಹೋರಾಟಗಾರ ಆಗ್ತೇನೆ..!

ಮಕ್ಕಳಿಗೆ ಸ್ವಾತಂತ್ರ್ಯದ ನಿಜವಾದ ಪರಿಕಲ್ಪನೆ ಕೇವಲ ಪಾಠದಿಂದ ಸಿಗಲು ಸಾಧ್ಯವಿಲ್ಲ. ಅದು ಸ್ವತಃ ಅನುಭವಕ್ಕೆ ಬರಬೇಕು. ನಮ್ಮದು ಸ್ವತಂತ್ರಭಾರತವಾಗಿದ್ದರೂ ವಿವಿಧ ವಿಚಾರಗಳಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಸಾಕಾರಗೊಂಡಿಲ್ಲ. ಹಾಗಾಗಿಯೇ ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ..? ಎಂಬ…


ಇಲ್ಲಾ ಸಾರ್, ನಮ್ಗೆ ಗೊತ್ತಿಲ್ಲ.

www.bantwalnews.com 2 ದಿನದಿಂದ ನಿಮ್ಮ ಜೊತೆಗೆ ಅವಳಿದ್ದಾಳೆ, ಅವಳೂ ನಿಮ್ಮ ಜೊತೆ ಮಾತನಾಡುತ್ತಿದ್ದಾಳೆ, ಆದರೆ ಅವಳ ಒಡನಾಟ ನಿಮಗೆ ಸಿಕ್ಕಿದೆ, ಆದರೆ ಅವಳ ಭಾಷೆ ನಿಮ್ಮ ಒಡನಾಟಕ್ಕೆ ಅಡ್ಡವಾಗಲೇ ಇಲ್ವಲ್ಲಾ ಇದೇ ನೋಡಿ ಅಭಿನಯಕ್ಕೆ ಇರುವ ಶಕ್ತಿ. ಮೌನೇಶ…


ಇಡೀ ದಿನ ಇಲ್ಲವಾದ್ರೆ ನನ್ನನ್ನು ಕಳುಹಿಸುವುದಿಲ್ಲ..

ಕೆಲವೆಡೆಗಳಲ್ಲಿ ಶಿಬಿರ ನಡೆಸುವವರೂ ಹಾಗೆ ಮಾಡುತ್ತಾರೆ. ನಿಮ್ಮ ಮಕ್ಕಳಿಗೆ ರಜಾ ಸಮಯವನ್ನು ಕ್ಯಾಂಪಿನಲ್ಲೇ ಕಳೆಯಿರಿ-  ಐನೂರು- ಒಂದುಸಾವಿರ ರೂ. ಪಾವತಿಸಿ – ಊಟ – ತಿಂಡಿ – ಎಲ್ಲಾ ಕೊಡುತ್ತೇವೆ – ದಿನವಿಡೀ ಚಟುವಟಿಕೆ ಎಂದೆಲ್ಲಾ ಜಾಹಿರಾತು…


ಹೌದು..ಇದು ದುಃಖದ ವಿಚಾರ

ವಿಜ್ಞಾನದ ಬಗೆಗೆ ಮಾಹಿತಿ ಕೊಡುತ್ತಾರೆ ಎಂದು ನಿರೀಕ್ಷೆಯಲ್ಲಿದ್ದ ಮಕ್ಕಳಿಗೆ ಒಮ್ಮಿಂದೊಮ್ಮೆಲೇ ಆಘಾತ. ಅಪ್ಪ-ಅಮ್ಮನ ಪ್ರೀತಿ ಸಿಗುತ್ತಿದ್ದ ಮಕ್ಕಳು, ಈ ಋಣಾತ್ಮಕ ಪ್ರಶ್ನೆಯಿಂದ ಕಂಗಾಲಾದರೆ, ಅಪ್ಪ-ಅಮ್ಮನ ಆಸರೆಯೇ ಇಲ್ಲದ ಕೆಲಮಕ್ಕಳ ಕಣ್ಣಿಗೆ ಕೈಹಾಕಿದಂತಿತ್ತು ಆ ಪ್ರಶ್ನೆ. ಮೌನೇಶ ವಿಶ್ವಕರ್ಮ…


ಶಾಲೆಯಲ್ಲಿ ಆಟ ಆಡ್ಲಿಕ್ಕೆ ಬಿಡುದಿಲ್ಲ..!

www.bantwalnews.com ಮೌನೇಶ ವಿಶ್ವಕರ್ಮ ಅಂಕಣ: ಮಕ್ಕಳ ಮಾತು ಮಕ್ಕಳು ತಮ್ಮ  ಬಾಲ್ಯವನ್ನು ಖಷಿಯಲ್ಲಿ ಅನುಭವಿಸುವ ಶಿಕ್ಷಣ ಪದ್ದತಿ ಬೇಕು. ಮಕ್ಕಳನ್ನು ಆಟಕ್ಕೂ ಬಿಡದೆ, ಬರಿಯ ಪಾಠಮಾತ್ರವೇ ಮುಖ್ಯವಾದರೆ ಮಕ್ಕಳು ಮಕ್ಕಳಾಗಿರುವುದಿಲ್ಲ. ಮಕ್ಕಳು ಮಕ್ಕಳಾಗಿರಬೇಕಾದರೆ ಆಟವೂ -ಪಾಠವೂ ಅವರ…


ಅವಳಿಗೆ ಮುಖ್ಯಪಾತ್ರ ಕೊಟ್ಟು, ನಿನಗೆ ಸಣ್ಣಪಾತ್ರ ಕೊಟ್ಟರೋ..?

ನಿನ್ನ ಫ್ರೆಂಡ್‌ನ ಪಾತ್ರಕ್ಕೆ ಜೀವ ತುಂಬಿದ್ದು ನಿನ್ನ ಹಾಡು, ನಿನ್ನ ಹಾಡಿನ ಶಕ್ತಿ ಹೆಚ್ಚಿಸಿದ್ದು ನಿನ್ನ ಫ್ರೆಂಡ್‌ನ ಅಭಿನಯ- ನಾಟಕದಲ್ಲಿ ಯಾವ ಪಾತ್ರವೂ ಮುಖ್ಯವಲ್ಲ.. ಆದರೆ ಎಲ್ಲಾ ಪಾತ್ರವೂ ಮುಖ್ಯವೇ. ನಾಟಕವೆಂದರೆ ಪರಸ್ಪರ ಸಹಕರಿಸುವ ಆಟ.. ॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒…


ಅಮ್ಮ ಸಟ್ಟುಗ ಬಿಸಿಮಾಡಿ ಇಟ್ಟದ್ದು..

 ಬೋರ್ಡ್ ನಲ್ಲಿ ಉತ್ತರ ಬರೆಯಲೆಂದು ಶಿಕ್ಷಕಿ ಚಾಕ್ ಕೊಟ್ಟಾಗ, ಸಪ್ಪೆ ಮೋರೆ ಹಾಕಿಕೊಂಡೇ ಅದನ್ನು ತೆಗೆದುಕೊಂಡ ಹುಡುಗ ಬೋರ್ಡ್ ಮೇಲೆ ಬರೆಯುತ್ತಲೇ ಕಣ್ಣಂಚಿನಿಂದ ನೀರು ಹರಿಯತೊಡಗಿತು. ಶಿಕ್ಷಕಿಗೂ ಯಾಕೋ ಮನಸ್ಸು ತಡೆಯಲಿಲ್ಲ. ಹುಡುಗನನ್ನು ಹತ್ತಿರ ಕರೆದು ಕೇಳಿದರು,…