Articles by Harish Mambady

ನಾಳೆ ಮಾರಿಪಳ್ಳದಲ್ಲಿ ರಕ್ತದಾನ ಶಿಬಿರ

ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಪುದುಪೇಟೆ ಮಾರಿಪಳ್ಳ ಇದರ ವತಿಯಿಂದ ಹಾಗೂ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಮಾರ್ಚ್ 19ರಂದು ಬೆಳಗ್ಗೆ 9.30 ಕ್ಕೆ ಮಾರಿಪಳ್ಳ ಸುಜೀರು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ….



ಮಸೀದಿಗೆ ಕಲ್ಲು, ಆರೋಪಿಯ ಹಿಡಿದೊಪ್ಪಿಸಿದ ಸ್ಥಳೀಯರು

ತೊಕ್ಕೊಟ್ಟು ರೈಲ್ವೆ ಹಳಿ ಸಮೀಪದಲ್ಲಿರುವ ಮಸ್ಜಿದುಲ್ ಹುದಾ ಮಸೀದಿಗೆ ಶುಕ್ರವಾರ ರಾತ್ರಿ ಕಲ್ಲೆಸೆದ ವ್ಯಕ್ತಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 10.45ರ ವೇಳೆಗೆ ಮಸೀದಿಗೆ ಕಲ್ಲು ಬಿದ್ದುದನ್ನು ಗಮನಿಸಿ ಖತೀಬರು ಗಾಬರಿಯಿಂದ ಹೊರಬಂದ ಸಂದರ್ಭ…


ಸುರತ್ಕಲ್ ವಲಯ ಆಯುಕ್ತರಾಗಿ ರೇಖಾ ಶೆಟ್ಟಿ

ಮಂಗಳೂರು ಮಹಾನಗರ ಪಾಲಿಕೆ ಸುರತ್ಕಲ್ ವಲಯ ಆಯುಕ್ತರಾಗಿ ರೇಖಾ ಜೆ.ಶೆಟ್ಟಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಪುತ್ತೂರು ನಗರಸಭೆ ಮತ್ತು ಉಳ್ಳಾಲ ನಗರಸಭೆಯಲ್ಲಿ ಪೌರಾಯುಕ್ತರಾಗಿ ಅವರು ಕರ್ತವ್ಯ ನಿರ್ವಹಿಸಿದ್ದರು.


ಅಕ್ರಮ ಮರಳು ಅಡ್ಡೆಗೆ ದಾಳಿ

  ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆಯಲ್ಲಿ ತೊಡಗಿದ್ದ ಕುರಿತು ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿ, ಸುಮಾರು 10 ಲಕ್ಷ ರೂ ಮೌಲ್ಯದ ಮರಳು ಹಾಗೂ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಸ್ಪಿ…


ಮೇಲ್ಕಾರನಲ್ಲಿ ಶ್ರದ್ಧಾಂಜಲಿ ಸಭೆ

ಮೇಲ್ಕಾರಿನ ಯುವ ಸಂಗಮ ವತಿಯಿಂದ ಪದಾಧಿಕಾರಿಯಾಗಿದ್ದ ಕಲ್ಲಡ್ಕ ಕರಿಂಗಾಣದ ಸೋಮಶೇಖರ್ ಅವರ ಶ್ರದ್ಧಾಂಜಲಿ ಸಭೆ ಮೇಲ್ಕಾರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭ ಯುವ ಸಂಗಮದ ಅಧ್ಯಕ್ಷರಾದ ವಿಠ್ಠಲ ಶೆಣೈ, ಗೌರವಾಧ್ಯಕ್ಷರಾದ ಯಂ.ಯನ್.ಕುಮಾರ್, ಕೃಷ್ಣ…


ದೂರುಗಳ ನಿವಾರಣೆಗಾಗಿ ಜನಹಿತ ಆಂಡ್ರಾಯ್ಡ್ ಮೊಬೈಲ್ ಆಪ್ಲಿಕೇಶನ್

ನಾಗರೀಕರು ದೂರುಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಪಟ್ಟ ದೂರುಗಳನ್ನು ದಾಖಲಿಸಲು ಅನುಕೂಲವಾಗುವಂತೆ ಜನಹಿತ ವೆಬ್ ತಂತ್ರಾಂಶವನ್ನು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಟಾನಗೊಳಿಸಲಾಗಿದ್ದು, ಬಂಟ್ವಾಳ ಪುರಸಭಾ ವ್ಯಾಪ್ತಿಯ ನಾಗರೀಕರು ಇದರ ಸದುಪಯೋಗ ಪಡೆಯಬಹುದಾಗಿದೆ.


ಕುಲಾಲ ಸುಧಾರಕ ಸಂಘ ವಾರ್ಷಿಕೋತ್ಸವದಲ್ಲಿ ಯಕ್ಷಗಾನ

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ (ರಿ.) ಇದರ 37ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಮಾರ್ಚ್ 19ರಂದು ಬಿ.ಸಿ.ರೋಡು ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸತೀಶ್ ಕುಲಾಲ್…


ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರ ಬಿಡುಗಡೆ

  ಸುಮಾರು ೭೫ ಲ.ರೂ. ವೆಚ್ಚದಲ್ಲಿ ಪುನರ್‌ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕಿನ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರದಲ್ಲಿ ಎ.೨೯ ರಿಂದ ಮೇ.೩ರವರೆಗೆ ನಡೆಯಲಿರುವ ಅಷ್ಠಬಂಧ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ,ಶ್ರೀ ಗುರುಗಳ ಬೆಳ್ಳಿಪಾದ ಪ್ರತಿಷ್ಠೆ,ಶ್ರೀ ಆಂಜನೇಯ ಮತ್ತು ಪರಿವಾರ…


ನರಹರಿ ಜೀರ್ಣೋದ್ಧಾರ: 19ರಂದು ಸಮಾಲೋಚನಾ ಸಭೆ

ನರಹರಿ ಪರ್ವತ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಮಹಾಕಾರ್ಯಕ್ಕೆ ಸಂಬಂಧಿಸಿ ಭಕ್ತರ ಸಮಾಲೋಚನಾ ಸಭೆ ಮಾರ್ಚ್ 19ರಂದು ಸಂಜೆ 3 ಗಂಟೆಗೆ ನರಹರಿ ಪರ್ವತ ಸದಾಶಿವ ದೇವಸ್ಥಾನದ ಸಾನಿಧ್ಯದಲ್ಲಿ ನಡೆಯಲಿದೆ. ಪ್ರಕೃತಿ ರಮಣೀಯ ತಾಣವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುವ…