ರಾಮಕೃಷ್ಣ ಮಿಷನ್ ನಿಂದ ಸ್ವಚ್ಛ ಬಂಟ್ವಾಳ ಅಭಿಯಾನ ಆರಂಭ

Bantwal News

ಸ್ವಚ್ಛ ಭಾರತ ರಾಷ್ಟ್ರಪಿತ ಗಾಂಧೀಜಿಯವರ ಕಲ್ಪನೆ ಈ ಕಲ್ಪನೆಯನ್ನು ಸಾಕಾರಗೊಳಿಸಲು  ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ರಾಷ್ಟ್ರಕ್ಕೆ ಕರೆ ಕೊಟ್ಟರು. ಈ ಬೃಹತ್ ಅಭಿಯಾನವನ್ನು ಯಶಸ್ವಿಯಾಗಿಸಲು ಕೇಂದ್ರ ಸರಕಾರದ ವಿಶೇಷ ಮನವಿಯ ಮೇರೆಗೆ ರಾಮಕೃಷ್ಣ ಮಿಷನ್ ಈ ಅಭಿಯಾನಕ್ಕೆ ಕೈ ಜೋಡಿಸಿತು. ಈ ನಿಟ್ಟಿನಲ್ಲಿ ಮಂಗಳೂರಿನ ಮಿಷನ್ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಎಂಬ ಬೃಹತ್ ಅಭಿಯಾನವನ್ನು ಆರಂಭಿಸಿತು. ಈ ಅಭಿಯಾನವು ಮಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿರದೆ ಪುತ್ತೂರಿನಲ್ಲಿ ಸ್ವಚ್ಛ ಪುತ್ತೂರು ಹಾಗೂ ಕಲ್ಲಡ್ಕದಲ್ಲಿ ಸ್ವಚ್ಛ ಕಲ್ಲಡ್ಕ ಎಂಬ ಮತ್ತೆರಡು ಯಶಸ್ವಿ ಅಭಿಯಾನಗಳು ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಆರಂಭವಾಯಿತು.

ಈ ಅಭಿಯಾನಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಎಂಬಂತೆ ದಕ್ಷಿಣ ಕನ್ನಡದ ಜೀವನದಿಯಾದ ನೇತ್ರಾವತಿಯ ತಟದಲ್ಲಿರುವ ಬಂಟ್ವಾಳದಲ್ಲಿ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛ ಬಂಟ್ವಾಳ ಎಂಬ ಅಭಿಯಾನವನ್ನು ಆರಂಭಿಸಲಾಯಿತು.

ಈ ಅಭಿಯಾನವನ್ನು ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹರಾಜ್ ಹಾಗೂ ಬಂಟ್ವಾಳ ಪುರಸಭೆ ಅಧ್ಯಕ್ಷರಾದ ರಾಮಕೃಷ್ಣ ಆಳ್ವ ಅವರು ಬಿ. ಸಿ ರೋಡ್ ನ ರಕ್ತೇಶ್ವರಿ ಗುಡಿಯ ಮುಂಭಾಗದಲ್ಲಿ ನಿಶಾನೆ ತೋರುವುದರ ಮೂಲಕ ಉದ್ಘಾಟಿಸಿದರು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

 

 

Be the first to comment on "ರಾಮಕೃಷ್ಣ ಮಿಷನ್ ನಿಂದ ಸ್ವಚ್ಛ ಬಂಟ್ವಾಳ ಅಭಿಯಾನ ಆರಂಭ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*