ಶಂಕರಾಚಾರ್ಯರು ಜ್ಞಾನದ ದಾರಿ ತೋರಿದ ದಾರ್ಶನಿಕರು: ರಾಧಾಕೃಷ್ಣ ಕಲ್ಚಾರ್

ಶಂಕರ ಭಗವತ್ಪಾದರು ಜ್ಞಾನಕ್ಕೆ ಒತ್ತು ನೀಡಿ ಜಗತ್ತಿಗೆ ಹೊಸ ದರ್ಶನವನ್ನು ನೀಡಿದ ದಾರ್ಶನಿಕರು ಎಂದು ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ಹೇಳಿದರು.

ಸಿದ್ಧಕಟ್ಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಡೆದ ಪುತ್ತೂರು ಕೊಯಿಲ ಶ್ರೀನಿವಾಸ ರಾವ್ ತಾರಾ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

 “ತಮ್ಮ ಕಾಲದಲ್ಲಿ ಕರ್ಮಕಾಂಡಕ್ಕೆ ಇದ್ದ ಒತ್ತನ್ನು ಕಂಡು ಜ್ಞಾನಕಾಂಡದ ಮಹತ್ವವನ್ನು ತಿಳಿಹೇಳಿದವರು ಶಂಕರ ಭಗವತ್ಪಾದರು. ಸಾವಿರಾರು ವರ್ಷಗಳ ಹಿಂದಿನ ಉಪನಿಷತ್ತುಗಳಲ್ಲಿ ಇರುವ ತತ್ವವನ್ನೇ ಅದ್ವೆöÊತ ದರ್ಶನವಾಗಿ ಪ್ರಚುರಪಡಿಸಿದ ಶಂಕರರು ತಾವು ಹೇಳಿದ ತತ್ವದಂತೆಯೇ ಬದುಕಿದವರು. ಜೀವಾತ್ಮ- ಪರಮಾತ್ಮರ ನಡುವೆ ಭೇದವನ್ನು ಕಾಣದೆ ಸಕಲಜೀವಿಗಳಲ್ಲೂ ‘ಬ್ರಹ್ಮ’ವನ್ನು ಕಾಣುವ ತತ್ವದೊಂದಿಗೆ ಅವರು ಭಾರತಾದ್ಯಂತ ಸಂಚರಿಸಿ ಪೀಠಗಳನ್ನು ಸ್ಥಾಪಿಸಿದರು. ಕೇವಲ ಮೂವತ್ತೆರಡು ವರ್ಷಗಳ ಕಾಲ ಬದುಕಿದ ಅವರು ಪವಾಡಸದೃಶವೆಂಬಂತೆ ಅಧ್ಯಾತ್ಮದ ಸಾಧನೆಯನ್ನು ಮಾಡಿ ಜಗತ್ತಿಗೆ ಹೊಸ ಬೆಳಕನ್ನು ನೀಡಿದರು” ಎಂದು ಅವರು ಹೇಳಿದರು.

ಜಾಹೀರಾತು

ಆಶಯ ಭಾಷಣ ಮಾಡಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಮಾತನಾಡಿ “ಸಾಹಿತ್ಯವು ನಮ್ಮ ಸಂವೇದನೆಯನ್ನು ಸೂಕ್ಷ್ಮಗೊಳಿಸುತ್ತದೆ. ದತ್ತಿ ಉಪನ್ಯಾಸಗಳ ಮೂಲಕ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬಗೆಗೆ ಯುವ ಮನಸ್ಸುಗಳಲ್ಲಿ ಪ್ರೀತಿಯನ್ನು ಮೂಡಿಸುವ ಕೆಲಸವನ್ನು ಸಾಹಿತ್ಯ ಪರಿಷತ್ತು ಮಾಡುತ್ತಿದೆ. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ರೂಢಿಸಿಕೊಂಡು ಬರೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಿನ್ಸಿಪಾಲ್ ಡಾ. ಗಿರೀಶ ಭಟ್ ಅಜಕ್ಕಳ  “ಶಂಕರಾಚಾರ್ಯರು ಕಲ್ಪನೆಯನ್ನಾಧರಿಸಿದ ಕಾವ್ಯ, ಸ್ತೋತ್ರಗಳನ್ನು ರಚಿಸಿದರು. ಹಾಗೆಯೇ ಚಿಂತನೆ, ವೈಚಾರಿಕ ತರ್ಕ ಮತ್ತು ಆಧ್ಯಾತ್ಮಿಕ ಅನುಭವದ ಹಿನ್ನೆಲೆಯಲ್ಲಿ ದಾರ್ಶನಿಕ ಸಾಹಿತ್ಯವನ್ನೂ ರಚಿಸಿದರು. ವೇದೋಪನಿಷತ್ತುಗಳಲ್ಲಿರುವ ಮೌಲ್ಯಗಳನ್ನು ಜನರಿಗೆ ಅರ್ಥ ಮಾಡಿಸಲು ಭಾಷ್ಯಗಳನ್ನು ಬರೆದರು. ಸಂಸ್ಕೃತ ಸಾಹಿತ್ಯ ಜಗತ್ತಿನಲ್ಲಿ ಶಂಕರ ಭಗವತ್ಪಾದರ ರಚನೆಗಳು ನಿತ್ಯ ನೂತನವಾಗಿವೆ” ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರಿಪ್ರಸಾದ್ ಬಿ ಶೆಟ್ಟಿ, ಕನ್ನಡ ಬಳಗದ ಸಂಚಾಲಕಿ ಸಂಧ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೀಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಶಂಕರಾಚಾರ್ಯರು ಜ್ಞಾನದ ದಾರಿ ತೋರಿದ ದಾರ್ಶನಿಕರು: ರಾಧಾಕೃಷ್ಣ ಕಲ್ಚಾರ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*