ಡಿಜಿಟಲ್ ಅರೆಸ್ಟ್ ಪ್ರಕರಣ: ಭೀತಿ ಹುಟ್ಟಿಸಿ ₹1.31 ಕೋಟಿ ಕಸಿದ ಸೈಬರ್ ವಂಚಕರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಸೈಬರ್ ವಂಚನೆ ಪ್ರಕರಣ ದಾಖಲಾಗಿದೆ. ಪುತ್ತೂರು ಮೂಲದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 1.31 ಕೋಟಿ ರೂ ಗಳನ್ನು ಡಿಜಿಟಲ್ ಅರೆಸ್ಟ್ ಮೂಲಕ ವಂಚಿಸಲಾಗಿದೆ. ಮಂಗಳೂರಿನ ಸಿಸಿಪಿಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬೈ ಪೊಲೀಸ್ ಹಾಗೂ ಎಟಿಎಸ್  ಅಧಿಕಾರಿಗಳೆಂದು ಸುಳ್ಳು ಗುರುತು ಹೇಳಿಕೊಂಡು, ‘ಡಿಜಿಟಲ್ ಅರೆಸ್ಟ್’  ನೆಪದಲ್ಲಿ ಪುತ್ತೂರು ತಾಲೂಕಿನ ನಿವಾಸಿಯೊಬ್ಬರಿಗೆ1.31 ಕೋಟಿ ರೂಗೂ ಅಧಿಕ ಹಣ ವಂಚಿಸಿರುವ ಕೃತ್ಯವಿದು.

ಘಟನೆಯ ವಿವರ:

ಅಪರಿಚಿತ ದುಷ್ಕರ್ಮಿಗಳು ದೂರುದಾರರನ್ನು ಸಂಪರ್ಕಿಸಿ, ತಾವು ಮುಂಬೈ ಪೊಲೀಸ್ ಮತ್ತು ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. “ನಿಮ್ಮ ಬ್ಯಾಂಕ್ ಖಾತೆಯಿಂದ ಪೆಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆಯಾಗಿದೆ” ಎಂದು ಗಂಭೀರ ಸುಳ್ಳು ಆರೋಪ ಹೊರಿಸಿ, ತಕ್ಷಣ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಜಾಹೀರಾತು

ನಂತರ ಆರೋಪಿಗಳು ವಾಟ್ಸಾಪ್ ವೀಡಿಯೋ ಕರೆಗಳ ಮೂಲಕ ದೂರುದಾರರನ್ನು ನಿರಂತರವಾಗಿ ಸಂಪರ್ಕದಲ್ಲಿದ್ದು, ಸುಳ್ಳು ತನಿಖೆಯ ನಾಟಕವಾಡಿದ್ದಾರೆ. ಬ್ಯಾಂಕ್ ಖಾತೆಗಳ ಪರಿಶೀಲನೆ ಹಾಗೂ ಹಣದ ದೃಢೀಕರಣದ ನೆಪದಲ್ಲಿ, ಪ್ರಕರಣದಿಂದ ಪಾರಾಗಬೇಕಾದರೆ ತಮ್ಮ ಸೂಚಿತ ಖಾತೆಗಳಿಗೆ ಹಣ ವರ್ಗಾಯಿಸಬೇಕೆಂದು ಭೀತಿ ಹುಟ್ಟಿಸಿದ್ದಾರೆ.

ಇದನ್ನು ನಿಜವೆಂದು ನಂಬಿದ ದೂರುದಾರರು ಸೆ.2ರಿಂದ ಅಕ್ಟೋಬರ್ 6 ರವರೆಗೆ ಹಂತ-ಹಂತವಾಗಿ ಆರ್.ಟಿ.ಜಿ.ಎಸ್. ಮೂಲಕ ಒಟ್ಟು 1,31,50,000 ಹಣವನ್ನು ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.

ಕಾನೂನು ಕ್ರಮ:

ನಂತರ ತಾನು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತರು ತಕ್ಷಣವೇ ಸೈಬರ್ ಸಹಾಯವಾಣಿ 1930 ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ. ಈ ದೂರಿನನ್ವಯ ದಕ್ಷಿಣ ಕನ್ನಡ ಸಿ.ಸಿ.ಪಿ.ಎಸ್ (CCPS) ಠಾಣೆಯಲ್ಲಿ ಐಟಿ ಕಾಯ್ದೆ ಹಾಗೂ ಬಿ.ಎನ್.ಎಸ್ (BNS) ವಿವಿಧ ತೀವ್ರ ಸ್ವರೂಪದ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

 ಸೈಬರ್ ಜಾಗೃತಿ: ‘ಡಿಜಿಟಲ್ ಅರೆಸ್ಟ್’ ಕುರಿತು ಸಾರ್ವಜನಿಕ ಗಮನಕ್ಕೆ

ಸೈಬರ್ ಅಪರಾಧಿಗಳು ಇತ್ತೀಚೆಗೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಹಣ ದೋಚಲು ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ತಂತ್ರವನ್ನು ಬಳಸುತ್ತಿದ್ದಾರೆ. ನಾಗರಿಕರು ಈ ಕೆಳಗಿನ ಪ್ರಮುಖ ಅಂಶಗಳನ್ನು ಕಡ್ಡಾಯವಾಗಿ ಗಮನಿಸಬೇಕು:

  1. ಡಿಜಿಟಲ್ ಅರೆಸ್ಟ್ ಎಂಬ ಕಾನೂನು ಜಾರಿಯಲ್ಲೇ ಇಲ್ಲ:

ಕಾನೂನು ಜಾರಿ ಸಂಸ್ಥೆಗಳಾದ ಪೊಲೀಸ್, ಸಿಬಿಐ (CBI), ಇಡಿ (ED), ಐಟಿ (Income Tax) ಅಥವಾ ಎಟಿಎಸ್ (ATS) ಯಾವುದೇ ವ್ಯಕ್ತಿಯನ್ನು ವೀಡಿಯೋ ಕರೆಗಳ (WhatsApp, Skype, Call) ಮೂಲಕ ತನಿಖೆ ನಡೆಸುವುದಿಲ್ಲ ಅಥವಾ ‘ಡಿಜಿಟಲ್ ಅರೆಸ್ಟ್’ ಮಾಡುವುದಿಲ್ಲ.

  • ವೀಡಿಯೋ ಕರೆ ಬೆದರಿಕೆಗೆ ಹೆದರಬೇಡಿ:

ಸಿಬಿಐ, ಮುಂಬೈ ಪೊಲೀಸ್ ಅಥವಾ ಕಸ್ಟಮ್ಸ್ ಅಧಿಕಾರಿಗಳ ಹೆಸರು ಹೇಳಿ ವೀಡಿಯೋ ಕರೆ ಮಾಡಿ ಬೆದರಿಕೆ ಹಾಕಿದರೆ ತಕ್ಷಣ ಕರೆ ಕಟ್ ಮಾಡಿ.

  • ಯಾವುದೇ ಖಾತೆಗೆ ಹಣ ವರ್ಗಾಯಿಸಬೇಡಿ:

ಸರ್ಕಾರಿ ಅಧಿಕಾರಿಗಳು ಯಾರೂ ತಮ್ಮ ಖಾತೆಗೆ ಅಥವಾ ಯಾವುದೇ ಖಾಸಗಿ ಬ್ಯಾಂಕ್ ಖಾತೆಗೆ “ಪರಿಶೀಲನೆಗಾಗಿ” ಹಣ ಹಾಕಿ ಎಂದು ಎಂದಿಗೂ ಕೇಳುವುದಿಲ್ಲ.

ತ್ವರಿತ ಸಹಾಯಕ್ಕಾಗಿ ಸಂಕಷ್ಟ ಸಂಖ್ಯೆಗೆ ಕರೆ ಮಾಡಿ:

ನೀವು ಅಥವಾ ನಿಮ್ಮವರು ಸೈಬರ್ ವಂಚನೆಗೆ ಒಳಗಾದರೆ, ತಕ್ಷಣವೇ 1930 ಸೈಬರ್ ಕ್ರೈಮ್ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ಸೈಬರ್ ಅಪರಾಧ ನಡೆದ ಮೊದಲ 1 ಗಂಟೆಯೊಳಗೆ (Golden Hour) ದೂರು ನೀಡಿದರೆ ಹಣವನ್ನು ತಡೆಯುವ (Freeze) ಸಾಧ್ಯತೆ ಹೆಚ್ಚಿರುತ್ತದೆ.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಡಿಜಿಟಲ್ ಅರೆಸ್ಟ್ ಪ್ರಕರಣ: ಭೀತಿ ಹುಟ್ಟಿಸಿ ₹1.31 ಕೋಟಿ ಕಸಿದ ಸೈಬರ್ ವಂಚಕರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*