
ಪ್ರವಾದಿ ಮಹಮ್ಮದರು ಬದುಕಿನ ಎಲ್ಲರಂಗಗಳಿಗೂ ಆರ್ಥಿಕ ಸಾಮಾಜಿಕ ರಾಜಕೀಯ ಕೌಟುಂಬಿಕ ಹೀಗೆ ಬದುಕಿನ ಎಲ್ಲ ರಂಗಗಳಿಗೂ ಮಾದರಿಯಾಗಿದ್ದಾರೆ ಎಂದು ಜಮಾತೆ ಇಸ್ಲಾಮಿ ಹಿಂದ್ ಕೇರಳ ರಾಜ್ಯ ಕಾರ್ಯದರ್ಶಿಗಳಾದ ಮೌಲಾನಾ ಅಬ್ದುಲ್ ಹಕೀಮ್ ನದ್ವಿ ಹೇಳಿದರು.
ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್(ಸ) ಅಭಿಯಾನದ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್ ಬಂಟ್ವಾಳ ತಾಲೂಕು ಆಯೋಜಿಸಿದ್ದ ಬಂಟ್ವಾಳ ತಾಲೂಕು ಸೀರತ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಇನ್ನೋರ್ವ ಮುಖ್ಯ ಅತಿಥಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಯವರು ಮಾತನಾಡಿದರು. ಶಾಂತಿಪ್ರಕಾಶನ ಹೊರತಂದಂತಹ ಯೋಗೀಶ್ ಮಾಸ್ಟರ್ ಬರೆದ ಮಾನವ ಮನಸ್ಸಿನ ಕ್ರಷಿಕ ಮನದೊಡೆಯ ಪ್ರವಾದಿ ಮಹಮ್ಮದ್ ಹಾಗೂ ಅಬ್ದುಲ್ ಸಲಾಂ ಪುತ್ತಿಗೆ ಬರೆದ ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪ್ರವಾದಿ ಮುಹಮ್ಮದ್ (ಸ) ಎಂಬ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಹವ್ವಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಳ್ ರವರು ಕೃತಿಯನ್ನು ಬಿಡುಗಡೆಗೊಳಿಸಿದರು. ಜಿ.ಇ. ಬಿ ಸಿ ರೋಡ್ ಸ್ಥಾನೀಯ ಅಧ್ಯಕ್ಷ ಅಮಾನುಲ್ಲಾ ಖಾನ್ ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಇಬ್ರಾಹಿಂ ಸ ಈದ್ ವಿ.ಕೆ ಇವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಹಾಫಿಝ್ ಮುಹಮ್ಮದ್ ತನ್ವೀರ್ ಆಲಮ್ ರವರು ನಾಥ್ ಹಾಡಿದರು. ಸಲೀಂ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಖಾದರ್ ಕುಕ್ಕಾಜೆ ಧನ್ಯವಾದವಿತ್ತರು. ಜೆಐಹೆಚ್ ಮಂಗಳೂರು ವಲಯ ಸಂಚಾಲಕ ಸ ಈದ್ ಇಸ್ಮಾಯಿಲ್ ,ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಅಬ್ದುಲ್ ಕರೀಂ ಉಳ್ಳಾಲ, ಸಮಾವೇಶದ ಸಂಚಾಲಕ ಅಬ್ದುಲ್ಲಾ ಚೆಂಡಾಡಿ , ಜೆ ಐ.ಹೆಚ್ ಪಾಣೆ ಮಂಗಳೂರು ಸ್ಥಾನೀಯ ಅಧ್ಯಕ್ಷ ಮುಕ್ತಾರ್ ಅಹಮದ್ ಪಾಣೆಮಂಗಳೂರು ಉಪಸ್ಥಿತರಿದ್ದರು.



Be the first to comment on "ಪಾಣೆಮಂಗಳೂರು: ಬಂಟ್ವಾಳ ತಾಲೂಕು ಸೀರತ್ ಸಮಾವೇಶ"