ವಿಕಾಸಂ ಸೇವಾ ಫೌಂಡೇಶನ್ ನಲ್ಲಿ ಶಿಕ್ಷಕರ ದಿನಾಚರಣೆ

ಬಂಟ್ವಾಳ: ಬಿ.ಸಿ.ರೋಡಿನ ವಿಕಾಸಂ ಸೇವಾ ಫೌಂಡೇಶನ್ ನಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಕಾಕುಂಜೆ ಸಾಫ್ಟ್ವೇರ್ ಕಂಪೆನಿ ಪ್ರೈವೇಟ್ ಲಿಮಿಟೆಡ್  ಸ್ಥಾಪಕರು ಹಾಗೂ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಕಾಕುಂಜೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ ಆಟಿಸಂ ನಂತಹ ಸಂಕೀರ್ಣವಾದ ದಿವ್ಯಾಂಗತೆಯುಳ್ಳ ವ್ಯಕ್ತಿಗಳಿಗೆ ಏಐಯನ್ನು ಬಳಸಿ ರೋಬೋಟ್ ಗಳ ಮೂಲಕ  ಥೆರಪಿಗಳನ್ನು ಕೊಡುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯು ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ವಿಕಾಸಂ ಸೇವಾ ಫೌಂಡೇಶನ್ ಜೊತೆಗೆ ಸಹಭಾಗಿತ್ವದಲ್ಲಿ ಈ ಸಂಶೋಧನೆಗಳನ್ನು ಮುಂದುವರಿಸುವ ಆಸಕ್ತಿಯನ್ನು ಹೊಂದಿದೆ ಎಂದರು.

ಇನ್ನೋರ್ವ ಅತಿಥಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಮಾಜಿ ಅಧ್ಯಕ್ಷ ನಾರಾಯಣ ಸಿ. ಪೆರ್ನೆ ಮಾತನಾಡಿ ವಿಕಾಸಂ ಸಂಸ್ಥೆಯ ಶಿಕ್ಷಕರು  ದಿವ್ಯಾಂಗರಿಗೆ ಸಲ್ಲಿಸುತ್ತಿದ್ದ ಸೇವೆಯನ್ನು ಶ್ಲಾಘಿಸಿದರು.

ಶಿಕ್ಷಣ ಇಲಾಖೆಯ ಬಿ ಆರ್ ಟಿ ಸುರೇಖಾ ಯಳವರ ಮಾತನಾಡಿ, ಮೊಬೈಲ್ ಯುಗದಲ್ಲಿ ದಿವ್ಯಾಂಗರು ಮಾತ್ರವಲ್ಲದೆ ಸಾಮಾನ್ಯ ಮಕ್ಕಳ  ವರ್ತನೆಯನ್ನು ತಿದ್ದಲು ಆಕ್ಯುಪೇಶನ್ ಥೆರಪಿಯ ಅವಶ್ಯಕತೆ ಇದೆ ಎಂದರು.

ಜಾಹೀರಾತು

ಪತ್ರಕರ್ತ ಹರೀಶ್  ಮಾಂಬಾಡಿ ಮಾತನಾಡಿ, ದಿವ್ಯಾಂಗ ಮಕ್ಕಳು ವಿಶೇಷ ಶಿಕ್ಷಕರ ಜೊತೆಗೆ ಆಪ್ತ ಭಾವವನ್ನು ಹೊಂದಿರುತ್ತಾರೆ. ಇಂತಹ ಆಪ್ತ ಭಾವವನ್ನು ಮೂಡಿಸುವ,  ಉಳಿಸಿಕೊಳ್ಳುವ ವಿಶೇಷ ಶಿಕ್ಷಕರ ಕೆಲಸ ಅತ್ಯಂತ ಪವಿತ್ರವಾದದ್ದು ಎಂದರು.  ಕೆನರಾ ಸ್ಕೂಲ್ ಬುಕ್ಸ್ ಮಾಲೀಕ ಅನೀಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ವಿಕಾಸಂ ಸೇವಾ ಫೌಂಡೇಶನ್  ಸಹ ಸಂಸ್ಥಾಪಕರಾದ ಗೋಪಾಲ್ ಗೋವಿಂತೋಟ ವಹಿಸಿದ್ದರು.

VNR GOLD

ಈ ಸಂದರ್ಭ ವಿಕಾಸಂ ಸೇವಾ ಫೌಂಡೇಶನ್ ನಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಶಿಕ್ಷಕಿ ರೇಣುಕಾ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಇತರ ಎಲ್ಲಾ ಶಿಕ್ಷಕರನ್ನು ಗೌರವಿಸಲಾಯಿತು.

ವಿಕಾಸಂ ಸೇವಾ ಫೌಂಡೇಶನ್ ನ ಸಹಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ಸ್ವಾಗತಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸಂಸ್ಥೆಯ ಹಿರಿಯ ವಾಕ್ ಶ್ರವಣ ತಜ್ಞರಾದ ಶೀಲಾ ತಿಲಕ್ ಹೆತ್ತವರಿಗಾಗಿ ದಿವ್ಯಾಂಗ ಮಕ್ಕಳಲ್ಲಿ ಸಂವಹನಾ ಕೌಶಲ್ಯವನ್ನು ಸುಧಾರಿಸುವ ತಂತ್ರಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಿದರು  ಎಂಎಸ್ ಡಬ್ಲ್ಯು ವಿದ್ಯಾರ್ಥಿ ಮೊಹಮ್ಮದ್ ಅಲಿ ವಂದಿಸಿದರು.  ಇನ್ನೋರ್ವ ಎಂಎಸ್ ಡಬ್ಲ್ಯು ವಿದ್ಯಾರ್ಥಿ ವಿತೇಶ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ವಿಕಾಸಂ ಸೇವಾ ಫೌಂಡೇಶನ್ ನಲ್ಲಿ ಶಿಕ್ಷಕರ ದಿನಾಚರಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*