
ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್, ಅಪಾಯದ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದು ಸಂಭವನೀಯ ಅನಾಹುತವನ್ನು ತಪ್ಪಿಸಿದ ಹಿನ್ನೆಲೆಯಲ್ಲಿ ಬಂಟ್ವಾಳ ಬಿಜೆಪಿ ಯುವಮೋರ್ಚಾ ವತಿಯಿಂದ ಆತನ ಮನೆಗೆ ತೆರಳಿ ಅಭಿನಂದಿಸಿ ಗೌರವಿಸಲಾಯಿತು.

ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುರೇಶ್ ಕೋಟ್ಯಾನ್ ನೇತೃತ್ವದಲ್ಲಿ ಬಾಲಕನ ಮನೆಗೆ ಭೇಟಿ ನೀಡಲಾಯಿತು. ಮನ್ವಿತ್‌ನ ಧೈರ್ಯ, ಸಾಹಸ ಹಾಗೂ ಸಮಯಪ್ರಜ್ಞೆಯನ್ನು ಶ್ಲಾಘಿಸಿದ ಮುಖಂಡರು, ಇಂತಹ ಸಮಾಜಮುಖಿ ಹಾಗೂ ಸಾಹಸಮಯ ಕಾರ್ಯಗಳಿಗೆ ಮುಂದೆಯೂ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ಬಂಟ್ವಾಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದಿನೇಶ್ ದಂಬೆದಾರು, ಪ್ರಧಾನ ಕಾರ್ಯದರ್ಶಿ ಸಂಪತ್ ಕೋಟ್ಯಾನ್, ಯುವಮೋರ್ಚಾ ಉಪಾಧ್ಯಕ್ಷರಾದ ಸಂದೀಪ್ ಪೂಜಾರಿ ಕೆಲಿಂಜ ಹಾಗೂ ಕಾರ್ತಿಕ್ ಬಲ್ಲಾಳ್, ಕಾರ್ಯದರ್ಶಿ ಹೇಮಂತ್ ಶಂಬೂರ್, ನರಿಕೊಂಬು ನಿಕಟಪೂರ್ವ ಪಂಚಾಯಿತಿ ಸದಸ್ಯರಾದ ಕಿಶೋರ್ ಶೆಟ್ಟಿ, ಪ್ರೇಮನಂದ ಶೆಟ್ಟಿ, ವಿಜಯ್ ರೈ ಆಲದಪದವು, ಎಸ್‌ಡಿಎಂಸಿ ಅಧ್ಯಕ್ಷ ರವಿ ಅಂಚನ್, ಶ್ರೀಶ ರಾಯಸ, ಮೋಹನ್ ದರ್ಕಸ್ ಹಾಗೂ ರಂಜಿತ್ ಕೆದ್ಧೆಲು, ಮನ್ವಿತ್ ತಂದೆ, ತಾಯಿಯರಾದ ಸುರೇಶ್ ಮತ್ತು ಜಯಂತಿ ಉಪಸ್ಥಿತರಿದ್ದರು.







Be the first to comment on "ಸಮಯಪ್ರಜ್ಞೆ ಮೆರೆದ ಬಾಲಕನಿಗೆ ಬಿಜೆಪಿ ಯುವಮೋರ್ಚಾ ಗೌರವ"