
ಬಂಟ್ವಾಳ: ಬಂಟ್ವಾಳದ ಭಂಡಾರಿಬೆಟ್ಟುವಿನಲ್ಲಿ ಶ್ರೀ ಕೃಷ್ಣ ಮಂದಿರ ಸೇವಾ ಟ್ರಸ್ಟ್, ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ, ಶ್ರೀ ಕೃಷ್ಣ ಮಾತೃ ಬಳಗಗಳ ಆಶ್ರಯದಲ್ಲಿ ನಡೆಯುವ 75 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಟ್ರಸ್ಟ್ ನ ಅಧ್ಯಕ್ಷ ನಾರಾಯಣ ಮೂಲ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಮುಖರಾದ ಕಿಶೋರ್ ಕುಮಾರ್, ಸುನೀಲ್ ಬಿ, ಯುವರಾಜ್ ಆಚಾರ್ಯ, ಬಿ.ಜಗದೀಶ ಕುಂದರ್, ಕೊಗ್ಗಣ್ಣ ಆಚಾರ್ , ಚಂದ್ರಶೇಖರ ಶೆಟ್ಟಿ ಕನ್ನಡಿಗುತ್ತು ಉಪಸ್ಥಿತರಿದ್ದು ಶುಭ ಹಾರೈಸಿದರು. ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ದಯಾನಂದ ಗೌಡ, ಮಾತೃ ಬಳಗದ ಪ್ರಧಾನ ಕಾರ್ಯದರ್ಶಿ ಶೋಭಾ ಲಕ್ಷ್ಮಣ, ಹಿರಿಯರಾದ ಪುರಂದರ ಆಚಾರ್ಯ, ರಾಜೇಶ್ ಗೌಡ ಮುರಳಿಧರ ಆಚಾರ್, ಸ್ಥಳೀಯ ಸಂಘ ಸಂಸ್ಥೆ ಪ್ರಮುಖರಾದ ಭಾಸ್ಕರ್ ಟೈಲರ್ ಕಾಮಾಜೆ, ಬಾಲಕೃಷ್ಣ ಕಲಾಯಿ, ಜಯಪ್ರಕಾಶ್, ಅನಿಲ್ ಮಂಡಾಡಿ, ವಿನೀತ್ ಮಯ್ಯರಬೈಲು, ಸಮಿತಿಯ ಹರೀಶ್ ಬಿ, ಜಯ ಕುಲಾಲ್, ಲಕ್ಷ್ಮಣ, ರಘುನಾಥ ಸಾಲ್ಯಾನ್, ಸತೀಶ ಗೌಡ ಹಾಜರಿದ್ದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಭಂಡಾರಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ಉತ್ಸವದ ಕಾರ್ಯಕ್ರಮಗಳು ಸೆಪ್ಟೆಂಬರ್ ತಿಂಗಳ 4, 5 ಹಾಗೂ 6ರಂದು ನಡೆಯಲಿದೆ.



Be the first to comment on "ಮೊಸರು ಕುಡಿಕೆ ಉತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ"