
ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾ ಪ್ರೌಢಶಾಲೆಗೆ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ದಾನಿಗಳು ಕೊಡಮಾಡಿದ ಸಮವಸ್ತ್ರ ಮತ್ತು ಲೇಖನ ಸಾಮಾಗ್ರಿವಿತರಣೆ ಮತ್ತು ಎಸೆಸ್ಸೆಲ್ಸಿ ಸಾಧಕರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಗುರುವಾಯನಕೆರೆ ಎಕ್ಸೆಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಹೇಳಿದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಸತ್ಯಶಂಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣದ ಸರ್ವ ಸೌಲಭ್ಯಗಳನ್ನು ಒದಗಿಸಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ನಡತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಶಾಲಾ ಸಂಚಾಲಕ ಉಳಿ ದಾಮೋದರ ನಾಯಕ್ ಅವರು ಮಾತನಾಡಿ, ದಿ.ಜಾರಪ್ಪ ಶೆಟ್ಟಿ ಅವರ ದೂರದೃಷ್ಠಿಯಿಂದ ಸ್ಥಾಪಿತವಾದ ಕಕ್ಯಬೀಡು ಪ್ರೌಢಶಾಲೆಯಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕುವಂತಾಗಿದೆ. ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲು ಸಾಧಕರನ್ನು ಗೌರವಿಸಲಾಗುತ್ತಿದೆ ಎಂದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷ ಭುಜಬಲಿ ಕಂಬಳಿ, ಬಾಚಕೆರೆ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕೆ.ರಾಜೇಂದ್ರ ಕಕ್ಯಪದವು, ಉಳಿ ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಸುರೇಶ್ ಮೈರ, ಉಳಿ ಯುವಕ ಮಂಡಲ ಅಧ್ಯಕ್ಷ ವಸಂತ ಸಾಲ್ಯಾನ್ ರಾಮನಗರ, ಉಳಿಬಲು ಸ.ಹಿ.ಪ್ರಾ.ಶಾಲಾ ಶಿಕ್ಷಕ ಅಕ್ಬರ್ ಆಲಿ, ಉಳಿ ಕಕ್ಯಪದವು ಸ.ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ಪ್ರಶಾಂತ್ ಅವರು ಶುಭ ಹಾರೈಸಿದರು.
ಕಕ್ಯಪದವು ಗರೊಡಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ನಿವೃತ್ತ ಕೋರ್ಟ್ ಸಿಬಂದಿ ರಘು ಶೆಟ್ಟಿ ನಡುವಲಚ್ಚಿಲ್, ಕಕ್ಯಪದವು ಹಾ.ಉ.ಸಂಘದ ಅಧ್ಯಕ್ಷ ಚೇತನ್ ಹೂರ್ದೊಟ್ಟು, ಕಜೆಕಾರು ಪ್ರಾ.ಕೃ.ಸ.ಸಂಘದ ಮುಖ್ಯ ಕಾರ್ಯ ನಿರ್ವಹಣಾಽಕಾರಿ ಸುಧಾಕರ ಎಚ್., ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ವಿಶ್ವನಾಥ ಸಾಲ್ಯಾನ್ ಬಿತ್ತ, ಉಪನ್ಯಾಸಕಿ ವಿಂದ್ಯಾಶ್ರೀ, ಪ್ರಮುಖರಾದ ಮುತ್ತಪ್ಪ ಗೌಡ ಅಗಲ, ವೀರೇಂದ್ರ ಕುಮಾರ್ ಜೈನ್, ಜಗನ್ನಾಥ ಶೆಟ್ಟಿ, ಯತೀಂದ್ರ ಚೌಟ, ಬಾಲಕೃಷ್ಣ ಮಡಿವಾಳ, ವೃಷಭರಾಜ್ ಜೈನ್, ಶಾಲಾಭಿವೃದ್ಧಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಸತ್ಯ ಸಾಯಿ ಸೇವಾ ಸಮಿತಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರತ್ನದೇವ್ ಪುಂಜಾಲಕಟ್ಟೆ(ರಂಗಭೂಮಿ, ಪತ್ರಿಕೆ)ಲಕ್ಷ್ಮಣ ಭಂಡಾರಿ ಪುಣ್ಕೆದಡಿ(ಬೀಡಿ ಉದ್ಯಮ), ಸದಾಶಿವ ಆಚಾರ್ಯ ಕುರುವರಗೋಳಿ(ಕಾಷ್ಠ ಶಿಲ್ಪ)ಡಿ. ಚಂದ್ರ ಯಾನೆ ಕೊರಗಪ್ಪ ಪೂಜಾರಿ(ಕೃಷಿ)ರಾಜೀವಿ(ಅಡುಗೆ ಸಿಬಂದಿ) ಅವರಿಗೆ ಪಂಚದುರ್ಗಾ ಪ್ರಶಸ್ತಿ ಪ್ರದಾನ ಮಾಡಲಾಯಿತು.ಎಸ್ಸೆಸ್ಸೆಲ್ಸಿ ಸಾಧಕರನ್ನು ಹಾಗೂ ದಾನಿಗಳನ್ನು ಸಮ್ಮಾನಿಸಲಾಯಿತು. ಎಲ್ಲ ವಿದ್ಯಾರ್ಥಿಗಳಿಗೆ ಲೇಖನ ಪುಸ್ತಕ, ಲೇಖನ ಸಾಮಾಗ್ರಿ, ಕೊಡೆ, ಬ್ಯಾಗ್ ಮತ್ತು ಸಮವಸ್ತ್ರ ವಿತರಿಸಲಾಯಿತು.
ಶಾಲಾ ಸಂಚಾಲಕ ಉಳಿ ದಾಮೋದರ ನಾಯಕ್ ಸ್ವಾಗತಿಸಿ, ಪ್ರಸ್ತಾವಿಸಿದರು. ಶ್ರೀ ಸತ್ಯಸಾಯಿ ಸೇವಾ ಸಮಿತಿ ಸಂಚಾಲಕ ಯೋಗೀಶ್ ಕುಮಾರ್ ವಂದಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಪುರುಷೋತ್ತಮ ಸಮ್ಮಾನ ಪತ್ರ ವಾಚಿಸಿದರು. ಶಿಕ್ಷಕ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Be the first to comment on "ಕಕ್ಯಪದವು ಶ್ರೀ ಪಂಚದುರ್ಗಾ ಪ್ರೌಢಶಾಲೆ: ಸಮವಸ್ತ್ರ , ಕಲಿಕಾ ಸಾಮಗ್ರಿ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸಮ್ಮಾನ"