ಮಂಗಳೂರು: ‘ಭ್ರಾಮರಿ ಯಕ್ಷಮಿತ್ರರು ಮಂಗಳೂರು ಟ್ರಸ್ಟ್’ ಆಯೋಜಿಸುತ್ತಿರುವ 9ನೇ ವರ್ಷದ ‘ಭ್ರಾಮರಿ ಯಕ್ಷವೈಭವ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉದ್ಯಮಿ ಅಗರಿ ರಾಘವೇಂದ್ರ ರಾವ್ ಅವರು ಶುಕ್ರವಾರ ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಭ್ರಾಮರಿ ಯಕ್ಷಮಿತ್ರರು ಟ್ರಸ್ಟ್ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಆತ್ಮೀಯವಾಗಿ ಯಕ್ಷಗಾನ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ. ಯಕ್ಷಗಾನದ ವಿವಿಧ ಶೈಲಿಗಳನ್ನು ಉಳಿಸಿ ಬೆಳೆಸುವಲ್ಲಿ ಈ ಸಂಸ್ಥೆಯ ಪಾತ್ರ ಬಹಳ ದೊಡ್ಡದು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಿನ ಕಲೆಗೆ ಮತ್ತಷ್ಟು ಉತ್ತೇಜನ ನೀಡುತ್ತವೆ ಎಂದು ಶ್ಲಾಘಿಸಿದರು. ಹಿರಿಯ ಕಲಾವಿದರನ್ನು ಗೌರವಿಸುವ, ನೇಪಥ್ಯ ಕಲಾವಿದರನ್ನು, ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಸಂಸ್ಥೆಯನ್ನು ಗುರುತಿಸಿ ಗೌರವಿಸುವ ಸಂಸ್ಥೆಯ ಉದ್ದೇಶ ನಿಜಕ್ಕೂ ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ವೈದ್ಯ ಡಾ| ಪ್ರವೀಣ್ ಆಚಾರ್ಯ, ಟ್ರಸ್ಟ್ ನ ರವಿಶಂಕರ್ ಭಟ್ ಉಪಸ್ಥಿತರಿದ್ದರು. ಟ್ರಸ್ಟ್‌ನ ಸತೀಶ್ ಮಂಜೇಶ್ವರ ಸ್ವಾಗತಿಸಿ, ವಿನಯಕೃಷ್ಣ ಕುರ್ನಾಡು ವಂದಿಸಿದರು. ಆ.1ರಂದು ಭ್ರಾಮರಿ ಯಕ್ಷವೈಭವ — Read more

ಈ ವರ್ಷದ ‘ಭ್ರಾಮರಿ ಯಕ್ಷವೈಭವ‘ ಕಾರ್ಯಕ್ರಮ ಆ.1ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 7ರಿಂದ ಮರುದಿನ ಮುಂಜಾನೆಯವರೆಗೆ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಹಾಗೂ ಕಲಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಹಿರಿಯ ಕಲಾವಿದ ಕೆ.ಎಚ್ .ದಾಸಪ್ಪ ರೈ ಅವರಿಗೆ ‘ಭ್ರಾಮರೀ ಯಕ್ಷಮಣಿ‘ ಪ್ರಶಸ್ತಿ, ನೇಪಥ್ಯಕಲಾವಿದ ಮೋನಪ್ಪ ಗೌಡ ಹಾಗೂ ಮುಡಿಪು ಕುರ್ನಾಡಿನ ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿಗೆ ‘ಭ್ರಾಮರೀ ಯಕ್ಷಸೇವಾ ಪುರಸ್ಕಾರ‘ ನೀಡಿ ಗೌರವಿಸಲಾಗುವುದು. ಸಭಾಕಾರ್ಯಕ್ರಮದ ಬಳಿಕ ತೆಂಕುತ್ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಅಂಭಾಶಪಥ‘,‘ ಲಕ್ಷ್ಮೀ ಸ್ವಯಂವರ‘,‘ತಾಮ್ರದ್ವಜ ಕಾಳಗ‘ ಎಂಬ ಪೌರಾಣಿಕ ಪ್ರಸಂಗ ಉಚಿತವಾಗಿ /ಪ್ರದರ್ಶನಗೊಳ್ಳಲಿದೆ ಎಂದು ಟ್ರಸ್ಟ್‌ನ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್
9ನೇ ವರ್ಷದ
ಭ್ರಾಮರೀ ಯಕ್ಷವೈಭವ -2026 ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ.
ಆಗಸ್ಟ್ 1 ಶನಿವಾರ ಸಂಜೆ 7 ರಿಂದ ಮರುದಿನ ಮುಂಜಾನೆಯವರೆಗೆ
ಸ್ಥಳ- ಕುದ್ಮುಲ್ ರಂಗರಾವ್ ಪುರಭವನ ಮಂಗಳೂರು
ಭ್ರಾಮರೀ ಯಕ್ಷಮಣಿ ಪ್ರಶಸ್ತಿ
▪️ಶ್ರೀ ಕೆ.ಎಚ್ ದಾಸಪ್ಪ ರೈ
ಹಿರಿಯ ಯಕ್ಷಗಾನ ಕಲಾವಿದರು.
ಭ್ರಾಮರೀ ಯಕ್ಷಸೇವಾ ಪುರಸ್ಕಾರ
▪️ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿ ಕುರ್ನಾಡು.
▪️ಶ್ರೀ ಮೋನಪ್ಪ ಗೌಡ
ನೇಪಥ್ಯ ಕಲಾವಿದರು
ಶ್ರೀ ಕಟೀಲು ಮೇಳ.
*ಪೂರ್ತಿ ರಾತ್ರಿಯ ಅಪರೂಪದ ಯಕ್ಷಗಾನ
ಉಚಿತ ಪ್ರವೇಶ
ಕಾರ್ಯಕ್ರಮ ಕ್ಲಪ್ತ ಸಮಯಕ್ಕೆ ಆರಂಭವಾಗುತ್ತದೆ.
ಅಂಬಾ ಶಪಥ
ಹಿಮ್ಮೇಳ
ಭಾಗವತರು: ಸತೀಶ್ ಶೆಟ್ಟಿ ಪಟ್ಲ, ಚಿನ್ಮಯ ಭಟ್ ಕಲ್ಲಡ್ಕ
ಚೆಂಡೆ ಮದ್ದಳೆ: ಕೃಷ್ಣ ಪ್ರಕಾಶ್ ಉಳಿತ್ತಾಯ, ಚೈತನ್ಯ ಕೃಷ್ಣ ಪದ್ಯಾಣ
ಚಕ್ರತಾಳ -ಪೂರ್ಣೇಶ್ ಆಚಾರ್ಯ
ಮುಮ್ಮೇಳ
ಪ್ರತಾಪಸೇನ- ಲಕ್ಷ್ಮಣ ಮರಕಡ
ಸಾಲ್ವ- ರಾಧಾಕೃಷ್ಣ ನಾವಡ ಮಧೂರು
ದೂತ- ಸಂದೇಶ ಮಂದಾರ
ಅಂಬೆ – ಶಶಿಕಾಂತ ಶೆಟ್ಟಿ ಕಾರ್ಕಳ
ಅಂಬಿಕೆ- ಸಂಜಯ ಬಜಾಲ್
ಅಂಬಾಲಿಕೆ- ಸತೀಶ ನೀರ್ಕೆರೆ
ರಾಜರು- ಮೋಹನ ಬೆಳ್ಳಿಪ್ಪಾಡಿ
ಹರಿರಾಜ ಕಿನ್ನಿಗೋಳಿ
ಭೀಷ್ಮ- ಸುಣ್ಣಂಬಳ ವಿಶ್ವೇಶ್ವರ ಭಟ್
ವೃದ್ಧ ಬ್ರಾಹ್ಮಣ- ಮವ್ವಾರು ಬಾಲಕೃಷ್ಣ ಮಣಿಯಾಣಿ
ಪರಶುರಾಮ- ಪೆರ್ಮುದೆ ಜಯಪ್ರಕಾಶ್ ಶೆಟ್ಟಿ.
ಲಕ್ಮೀ ಸ್ವಯಂವರ
ಹಿಮ್ಮೇಳ
ಭಾಗವತರು: ದೇವಿ ಪ್ರಸಾದ್ ಆಳ್ವ ತಲಪಾಡಿ
ಚೆಂಡೆ ಮದ್ದಳೆ: ಲಕ್ಷ್ಮೀ ನಾರಾಯಣ ಅಡೂರು, ಗುರು ಪ್ರಸಾದ್ ಬೊಳಿಂಜಡ್ಕ
ಚಕ್ರತಾಳ: ರಾಜೇಂದ್ರ ಕೃಷ್ಣ ಪಂಜಿಗದ್ದೆ
ಮುಮ್ಮೇಳ-
ದೇವೇಂದ್ರ- ಜಯಾನಂದ ಸಂಪಾಜೆ
ಬಲಗಳು- ಭುವನ್, ಯೋಗೀಶ್
ವಿಷ್ಣು- ಪ್ರಸಾದ್ ಸವಣೂರು
ಬಲಿ- ಮುಖೇಶ್ ದೇವಧರ್
ಬಲಗಳು-ಅಜಿತ್ ಪುತ್ತಿಗೆ, ದಿವಾಕರ
ಮೂಕಾಸುರ- ಮಹೇಶ ಮಣಿಯಾಣಿ ದೊಡ್ಡತೋಟ
ಈಶ್ವರ- ಸಂಜಯ ಬಜಾಲ್
ಪಾರ್ವತಿ- ಸತೀಶ ನೀರ್ಕೆರೆ
ಬ್ರಹ್ಮ – ಹರಿರಾಜ ಕಿನ್ನಿಗೋಳಿ
ಲಕ್ಮೀ- ಅರುಣ್ ಕೋಟ್ಯಾನ್
ಮೋಹಿನಿ- ರಕ್ಷಿತ್ ಪಡ್ರೆ
ತಾಮ್ರಧ್ವಜ ಕಾಳಗ
ಹಿಮ್ಮೇಳ
ಭಾಗವತರು: ಶ್ರೀ ರವಿಚಂದ್ರ ಕನ್ನಡಿಕಟ್ಟೆ
ಚೆಂಡೆ ಮದ್ದಳೆ:ದೇಲಂತಮಜಲು ಸುಬ್ರಹ್ಮಣ್ಯ ಭಟ್ , ನೆಕ್ಕರೆ ಮೂಲೆ ಗಣೇಶ್ ಭಟ್
ಚಕ್ರತಾಳ ರಾಜೇಂದ್ರಕೃಷ್ಣ ಪಂಜಿಗದ್ದೆ.
ಮುಮ್ಮೇಳ
ತಾಮ್ರಧ್ವಜ- ಸುಬ್ರಾಯ ಹೊಳ್ಳ
ನಕುಲಧ್ವಜ- ಮಹೇಶ ಮಣಿಯಾಣಿ
ಅರ್ಜುನ- ಅಮ್ಮುಂಜೆ ಮೋಹನ ಕುಮಾರ್
ಬಲಗಳು- ಶಿವರಾಜ ಬಜಕೂಡ್ಲು,ಲೋಕೇಶ್ ಮುಚ್ಚೂರು
ಕೃಷ್ಣ- ದಿನೇಶ್ ಶೆಟ್ಟಿ ಕಾವಳಕಟ್ಟೆ
ಬ್ರಾಹ್ಮಣರು- ಮವ್ವಾರ್ ಬಾಲಕೃಷ್ಣ ಮಣಿಯಾಣಿ, ಭುವನ್
ಮಯೂರಧ್ವಜ- ಡಿ.ಮಾಧವ ಬಂಗೇರ
ಕುಮುಧ್ವತಿ- ಸಂಜಯ ಬಜಾಲ್
ವೇಷಭೂಷಣ- ಗಣೇಶ ಕಲಾವೃಂದ ಪೈವಳಿಕೆ
ಸಂಯೋಜನೆ-
ಡಿ.ಮಾಧವ ಬಂಗೇರ – ಮೊಬೈಲ್- 9164521588
ಸರ್ವರಿಗೂ ಆದರದ ಸ್ವಾಗತ ಬಯಸುವ
ಅಧ್ಯಕ್ಷರು ಮತ್ತು ಸರ್ವಸದಸ್ಯರು
ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್


Be the first to comment on "ಭ್ರಾಮರಿ ಯಕ್ಷವೈಭವ ಆಮಂತ್ರಣ ಪತ್ರಿಕೆ ಉದ್ಯಮಿ ಅಗರಿ ರಾಘವೇಂದ್ರ ರಾವ್ ಅವರಿಂದ ಬಿಡುಗಡೆ – Details"