
ಬಂಟ್ವಾಳ : ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ, ದಿ.ವಸಂತಿ ವಿಠ್ಠಲ ಶೆಟ್ಟಿ ಮುಂಡಾಜೆಗುತ್ತು ಸ್ಮರಣಾರ್ಥ ಅವರ ಮಕ್ಕಳು ಕೊಡುಗೆಯಾಗಿ ನೀಡುವ ನೂತನ ನಾಲ್ಕು ಕೊಠಡಿ ನಿರ್ಮಾಣಕ್ಕೆ ಕುಟುಂಬಸ್ಥರ ಪರವಾಗಿ ಪ್ರಗತಿಪರ ಕೃಷಿಕ ಜ್ಯೋತಿಂದ್ರ ಶೆಟ್ಟಿ ಮುಂಡಾಜೆಗುತ್ತು ಶಿಲಾನ್ಯಾಸ ನೆರವೇರಿಸಿದರು.
ವೇದಮೂರ್ತಿ ಗಣೇಶ ಭಟ್ ಸುಜೀರು ಅವರು ಭೂಮಿ ಪೂಜೆಯ ವೈದಿಕ ವಿಧಿ ವಿದಾನ ನೆರವೇರಿಸಿದರು, ಪುದು ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ಪ್ರಭುಜೀ ಉಪಸ್ಥಿತರಿದ್ದರು.
ಈ ಸಂದರ್ಭ ದೇವಂದಬೆಟ್ಟು ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಆಡಳಿತ ಮುಕ್ತೇಸರ ನವೀನಚಂದ್ರ ಶೆಟ್ಟಿ ಮುಂಡಾಜೆಗುತ್ತು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ನೆತ್ತರಕೆರೆ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಬಿ ಸುರೇಶ ಭಂಡಾರಿ ಅರ್ಬಿ, ಭಾಸ್ಕರ ಕುಲಾಲ್, ಚಂದ್ರಹಾಸ ನೆತ್ತರಕೆರೆ, ಪುದು ಗ್ರಾ ಪಂ ಸದಸ್ಯರಾದ ಪಿ ಸುಬ್ರಮಣ್ಯ ರಾವ್, ಪದ್ಮನಾಭ ಶೆಟ್ಟಿ ಪುಂಚಮೆ, ಕಟ್ಟಡದ ಇಂಜಿನಿಯರ್ ಸುಧೀರ್ ಕುಮಾರ್ ಶೆಟ್ಟಿ,, ಪುದು ಗ್ರಾ ಪಂ ಮಾಜಿ ಸದಸ್ಯ ಸಂತೋಷ್ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಸಿಲ್ವಿಯಾ ಬ್ರೇಗ್ಸ್ , ಸಹ ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಇದ್ದರು.


Be the first to comment on "ನೆತ್ತರಕೆರೆ :ಸರಕಾರಿ ಶಾಲಾ ನೂತನ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ"