
ಕಳ್ಳಿಗೆ ಗ್ರಾಮದ ಯುವಕರ ಸಂಘ ಮತ್ತು ಕಳ್ಳಿಗೆ ಗ್ರಾಮದ ಮಹಿಳಾ ಸಂಘದ 42ನೇ ವಾರ್ಷಿಕೋತ್ಸಶನಿವಾರ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ನಪಾಡಿ ಕನಪಾಡಿತ್ತಾಯ ದೈವದ ಪಾತ್ರಿ ಧೂಮ ಮೂಲ್ಯ ದೀಪಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಆಧುನಿಕ ಸಮಾಜ ವೇಗವಾಗಿ ಬೆಳೆಯುತ್ತಿದ್ದು ನಾವು ಪರಿವರ್ತನ ಕಾಲಘಟ್ಟದಲ್ಲಿ ಬದುಕುತಿದ್ದೇವೆ, ಸಂಘ ಸಂಸ್ಥೆಗಳು ಬಡವರಿಗೆ ದುರ್ಬಲರಿಗೆ ಸಹಕಾರ ನೀಡುವುದರೊಂದಿಗೆ ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು, ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು, ಸಮಾಜದಲ್ಲಿ ಎಲ್ಲಾ ವರ್ಗದ ಜನರು ಬಲಿಷ್ಠರಾದರೆ ಮಾತ್ರ ದೇಶ ಸದೃಢವಾಗುತ್ತದೆ. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸೇವೆ ಮಾಡುತ್ತಿರುವ ಯುವಕ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾದ ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಉದ್ಯಮಿ ಭುವನೇಶ್ ಪಚ್ಚಿನಡ್ಕ, ಕರಿಯಂಗಳ ಗ್ರಾ ಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಜ್ಯೋತಿಷಿ ಅನಿಲ್ ಪಂಡಿತ್, ನಿವೃತ್ತ ಸೈನಿಕ ಹರೀಶ್ ಡಿ.ಬಂಟ್ವಾಳ ಮಾತನಾಡಿದರು.
ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಪ್ರದಾನ ಅರ್ಚಕ ಕೆ ಶಿವರಾಮ ಶಿಬಿರಾಯ, ವ್ಯವಸ್ಥಾಪನಾ ಸಮಿತಿ ಕೋಶಾಧಿಕಾರಿ ಗಣೇಶ ಜಿ ಕರ್ಕೇರ, ಸಮಾಜ ಸೇವಕಿ ಪ್ರಿಯದರ್ಶಿನಿ ದರಿಬಾಗಿಲು, ವಿನೋದ ಗಿರಿಯಪ್ಪ ಬದ್ಯಾರು, ಯುವಕ ಸಂಘದ ಅಧ್ಯಕ್ಷ ಶಶಿಧರ ಕನಪಾಡಿ, ಮಹಿಳಾ ಮಂಡಲದ ಅಧ್ಯಕ್ಷೆ ಸುಜಿತಾ ದೇವಂದಬೆಟ್ಟು ಉಪಸ್ಥಿತರಿದ್ದರು.
ಸಾಧಕರಾದ ಮನೋಜ್ ಕನಪಾಡಿ, ಸುಧೀರ್ ಕುಮಾರ್ ಜಾರಂದಗುಡ್ಡೆ, ಮಲ್ಲಿಕಾ ಜ್ಯೋತಿಗುಡ್ಡೆ, ದಕ್ಷಿಣ್ ದೇವಂದಬೆಟ್ಟು, ಯಶ್ವಿನಿ ಜಾರಂದಗುಡ್ಡೆ, ಸಾನಿಕಾ ಕಂಜತ್ತೂರು ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಕ್ರೀಡಾ ಸಾಧನೆಗಾಗಿ ಇಶಾ ಅನ್ವಿ ಅವರನ್ನು ಅಭಿನಂದಿಸಲಾಯಿತು. ಯುವಕ ಸಂಘದ ಮಾಜಿ ಅಧ್ಯಕ್ಷ ಜಗದೀಶ ಕಂಜತ್ತೂರು ಪ್ರಾಸ್ತಾವಿಕ ಮಾತನಾಡಿದರು. ಚಂದ್ರಹಾಸ ದೇವಂದಬೆಟ್ಟು ಸ್ವಾಗತಿಸಿದರು. ಪ್ರಶಾಂತ್ ಕನಪಾಡಿ ವಂದಿಸಿದರು. ಮನೋಜ್ ಕನಪಾಡಿ ಹಾಗೂ ಸೌಮ್ಯ ಮನೋಜ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ, ಜಾದೂ ಪ್ರದರ್ಶನ, ಚೈತನ್ಯ ಕಲಾವಿದರು ಬೈಲೂರು ಅವರಿಂದ ‘ರಾಘು ಮಾಸ್ಟ್ರು’ ಹಾಸ್ಯಮಯ ನಾಟಕ ಜರುಗಿತು.


Be the first to comment on "ಸಮಾಜದಲ್ಲಿ ಎಲ್ಲಾ ವರ್ಗದ ಜನರು ಬಲಿಷ್ಠರಾದರೆ ದೇಶ ಸದೃಢ: ಬಿ ರಮಾನಾಥ ರೈ"