ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಣೆಮಂಗಳೂರು ನಾಯಿಲದ ಓಂ ಶ್ರೀ ಗೆಳೆಯರ ಬಳಗ 20ನೇ ವಾರ್ಷಿಕೋತ್ಸವ ಶನಿವಾರ ಸಂಜೆ ಸಂಘದ ವಠಾರದಲ್ಲಿ ನಡೆಯಿತು
ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿ ಮಾತನಾಡಿ, ಉತ್ತಮ ರೀತಿಯಲ್ಲಿ ಸೇವೆಯನ್ನು ಮಾಡುತ್ತಾ ಬಂದಿರುವ ಸಂಘ ಓಂ ಶ್ರೀ ಗೆಳೆಯರ ಬಳಗಕ್ಕೆ ಅರ್ಹವಾಗಿಯೇ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದರು.

ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು ಮಾತನಾಡಿ ಸಮಾಜದೊಂದಿಗೆ ಸಂಘ ಜೀವಿಯಾಗಿ ಸಾಧನೆ ಮಾಡಿದರೆ, ಯಶಸ್ಸು ಸಾಧ್ಯವಾಗುತ್ತದೆ. ಸಂಸ್ಕೃತಿ, ಸಂಸ್ಕಾರ, ಸಮಾಜ ಮುಖಿ ಕಾರ್ಯಗಳಿಗೆ ಪ್ರೇರಣೆ ನೀಡುವ ಕಾರ್ಯಕ್ಕಾಗಿ ಹಿರಿಯರು ಸಂಘಗಳನ್ನು ರಚನೆ ಮಾಡಿದ್ದಾರೆ. ಸೈದ್ದಾಂತಿಕ ವಿಚಾರಗಳಲ್ಲಿ ರಾಜಿಯಾಗದೆ ಸಾಮಾಜಿಕ ಸೇವೆಯನ್ನು ಮುಂದುವರಿಸಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಯುವ ಉದ್ಯಮಿ ಸತೀಶ್ ಕುಮಾರ್ ಕೆ. ವಹಿಸಿದ್ದರು. ಹಿರಿಯ ವಕೀಲರಾದ ಅಶ್ವನಿ ಕುಮಾರ್ ರೈ, ಬೂಡ ಅಧ್ಯಕ್ಷ ಬೇಬಿ ಕುಂದರ್, ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಉದ್ಯಮಿಗಳಾದ ಉಮೇಶ್ ಬೋಳಂತೂರು, ಶೈಲೇಶ್ ಕುಚ್ಚಿಗುಡ್ಡೆ, ಸುಧೀರ್ ರೈ, ಉಮೇಶ್ ನೆಲ್ಲಿಗುಡ್ಡೆ, ಚೈತ್ರೇಶ್ ಶೆಣೈ, ಕರುಣಾಕರ, ವಕೀಲರಾದ ಉಮೇಶ್ ಕುಮಾರ್ ವೈ, ಪ್ರದೀಪ್ ಎನ್.ಕೆ., ಸಂಘದ ಅಧ್ಯಕ್ಷ ದಿನೇಶ್ ನೆಲ್ಲಿಗುಡ್ಡೆ, ಗೌರವಾಧ್ಯಕ್ಷ ನಾಗೇಶ್ ಕುಲಾಲ್, ಮಹಿಳಾ ಮಂಡಲದ ಅಧ್ಯಕ್ಷೆ ನಳಿನಿ ಶುಭಕರ, ಮಾಜಿ ಅಧ್ಯಕ್ಷ ಕಿರಣ್ ಅಟ್ಲೂರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

ಪ್ರತಿ ವರ್ಷದಂತೆ ವಾರ್ಷಿಕ ಸಂಭ್ರಮದ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಗೌರವ ನೀಡಿದ್ದು, ಸೇವಾ ಕ್ಷೇತ್ರದಲ್ಲಿ ಅನಿಲ್ ದಾಸ್, ಕಲಾ ಕ್ಷೇತ್ರದಲ್ಲಿ ಮಹಮ್ಮದ್ ಯಾಸೀರ್ ಕಲ್ಲಡ್ಕ, ಸಾಮಾಜಿಕ ಕ್ಷೇತ್ರದಲ್ಲಿ ಜನಾರ್ದನ ಪೂಜಾರಿ ಬೋಳಂಗಡಿ, ಮಾಧ್ಯಮ ಕ್ಷೇತ್ರದಲ್ಲಿ ಪ್ರಶಾಂತ್ ಪುಂಜಾಲಕಟ್ಟೆ ಅವರನ್ನು ಗೌರವಿಸಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಕಿರಣ್ ಕುಮಾರ್ ಅಟ್ಲೂರು ಸ್ವಾಗತಿಸಿದರು. ಮಹಿಳಾ ಸಂಘದ ಕಾರ್ಯದರ್ಶಿ ಮೋಹಲತಾ ಹರೀಶ್ ವಂದಿಸಿದರು.ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.


Be the first to comment on "ಓಂ ಶ್ರೀ ಗೆಳೆಯರ ಬಳಗ 20ನೇ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ"