
ಬಂಟ್ವಾಳ: ಎಕ್ಸ್ ಟ್ರೀಮ್ ಡ್ಯಾನ್ಸ್ ಕ್ರೂವ್ ಬಿ.ಸಿ. ರೋಡ್ ಮತ್ತು ಬಂಟ್ವಾಳ ವತಿಯಿಂದ ಏಪ್ರಿಲ್ 18ರಂದು ಬಂಟ್ವಾಳ ನೈಟ್ಸ್ 2ಕೆ26 ಎಂಬ ಸ್ಟಾರ್ ನೈಟ್ ಮತ್ತು ಸಾಧಕರಿಗೆ ಗೌರವಾರ್ಪಣೆ ಸಮಾರಂಭ ಬಂಟ್ವಾಳದ ದೇವರಕಟ್ಟೆ ಶೆಟ್ಟಿ ಗ್ರೌಂಡ್ ನಲ್ಲಿ ನಡೆಯಲಿದೆ ಎಂದು ಕೊರಿಯೋಗ್ರಾಫರ್ ಮತ್ತು ಸಂಸ್ಥೆಯ ಮುಖ್ಯಸ್ಥ ವಿನೋದ್ ರಾಜ್ ತಿಳಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ಕಾರ್ಯಕ್ರಮವನ್ನು ಬೆಂಜನಪದವು ಕೊರಗಜ್ಜ ಕ್ಷೇತ್ರ ಧರ್ಮದರ್ಶಿ ವಿಜಯ ಕುಮಾರ್ ಉದ್ಘಾಟಿಸುವರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಆರ್., ಉದ್ಯಮಿಗಳಾದ ಭುವನೇಶ್ ಪಚ್ಚಿನಡ್ಕ, ಪಿಯೂಸ್ ಎಲ್. ರೋಡ್ರಿಗಸ್, ನಾಗೇಂದ್ರ ಬಾಳಿಗಾ ಮತ್ತಿತರರು ಭಾಗವಹಿಸುವರು. ಕನ್ನಡ, ತುಳು ಸಿನಿಮಾ ರಂಗದಲ್ಲಿ ಹೆಸರು ಮಾಡಿದ ಜೆ.ಪಿ.ತೂಮಿನಾಡು, ಶನಿಲ್ ಗುರು, ಸ್ವರಾಜ್ ಶೆಟ್ಟಿ, ನಿತ್ಯಪ್ರಕಾಶ್ ಬಂಟ್ವಾಳ, ಕಿಶೋರ್ ಅಮನ್ ಶೆಟ್ಟಿ, ಎಲ್ಟನ್ ಜೆಫ್ ಮೊದಲಾದವರು ಭಾಗವಹಿಸುವರು. ಕೌಶಿಕ್ ಆಚಾರ್ಯ, ರಿತ್ವಿಕ್ ಬಂಟ್ವಾಳ, ಸಾನ್ವಿ ಕೆ, ಮನೀಶ್ ಗಾಣಿಗ ಅವರನ್ನು ಸನ್ಮಾನಿಸಲಾಗುವುದು ಎಂದವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪೂರ್ಣಿಮಾ ಶೆಟ್ಟಿ, ದಿವ್ಯಾ, ತೇಜಾಕ್ಷ, ಅರ್ಚನಾ ಇರಾ ಉಪಸ್ಥಿತರಿದ್ದರು.


Be the first to comment on "ಬಂಟ್ವಾಳದಲ್ಲಿ ಸ್ಟಾರ್ ನೈಟ್, ಸನ್ಮಾನ ಕಾರ್ಯಕ್ರಮ"