ಪುರುಷಾಧಿಕಾರ ಸಾಧಿಸಲು ದಾಳಗಳಾಗಿ ಬಳಕೆಯಾಗುವವರು ಸ್ತ್ರೀಯರು ಎಂದು ಕನ್ನಡ ಸಂಶೋಧನಾರ್ಥಿ ದೇವಿಕಾ ಪಿ. ಹೇಳಿದರು.
ಕೇರಳ ಕೇಂದ್ರೀಯ ವಿವಿಯ ಕನ್ನಡ ವಿಭಾಗ ಆಯೋಜಿಸಿದ್ದ ಸಂಶೋಧನ ತರಂಗ ಉಪನ್ಯಾಸ ಮಾಲಿಕೆಯ ನಾಲ್ಕನೇ ಉಪನ್ಯಾಸದಲ್ಲಿ ವಿಮುಕ್ತೆ: ರಾಮಾಯಣದ ಹೆಣ್ಣು ಪಾತ್ರಗಳ ಮರುನಿರೂಪಿತ ಕಥನ ಎಂಬ ವಿಷಯದ ಬಗ್ಗೆ ಅವರು ಮಾತನಾಡುತ್ತಾ, ಹೆಣ್ಣು ಸ್ವತಂತ್ರಳಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಪುರಾಣದ ಪಾತ್ರಗಳನ್ನು ಸಾಮಾನ್ಯ ಜನರಂತೆ ಚಿತ್ರಿಸಲಾಗಿದೆ ಆ ನಿಟ್ಟಿನಲ್ಲಿಯೇ ಪುರಾಣದ ಪಾತ್ರಗಳನ್ನು ಮರುನಿರೂಪಣೆಗೆ ಒಳಪಡಿಸಿಕೊಳ್ಳಲಾಗಿದ್ದು ಪಾತ್ರಗಳು ಎದುರಿಸುವ ಸಂಕಷ್ಟಗಳು ಈ ಕಾಲಕ್ಕೂ ಪ್ರಸ್ತುತ. ಈ ರೀತಿಯ ಮರುನಿರೂಪಣೆಯು ಹಳೆಯ ಮತ್ತು ಹೊಸ ವಿಷಯಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲಾ ‘ಮೂಲ ಪಠ್ಯ’ ಮತ್ತು ‘ಏಕೈಕ ಸತ್ಯ’ ಎಂಬ ವಾದಗಳನ್ನು ಪ್ರಶ್ನಾರ್ಹಗೊಳಿಸುತ್ತದೆ ಎಂದವರು ಹೇಳಿದರು.

ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥ, ಮಾಲಿಕೆಯ ಸಂಯೋಜಕ ಡಾ. ಪ್ರವೀಣ ಪದ್ಯಾಣ ಉಪಸ್ಥಿತರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕರು ಡಾ. ಸೌಮ್ಯಾ ಹೆಚ್, ಡಾ. ಗೋವಿಂದರಾಜು ಎಂ ಕಲ್ಲೂರು ಹಾಗೂ ಚೇತನ್ ಮುಂಡಾಜೆ, ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗಿಯಾದರು. ಸ್ನಾತಕೋತ್ತರ ವಿದ್ಯಾರ್ಥಿನಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು. ಶೃತಿ ಸ್ವಾಗತಿಸಿ, ಚೇತನಾ ಕೆ ವಂದಿಸಿದರು.


Be the first to comment on "ಕೇರಳ ಕೇಂದ್ರೀಯ ವಿವಿಯಲ್ಲಿ ಸಂಶೋಧನ ತರಂಗದ ನಾಲ್ಕನೇ ಆವೃತ್ತಿ"