- ಯಾದವ ಕುಲಾಲ್ ಅಗ್ರಬೈಲು
ಬ್ರಹ್ಮರಕೂಟ್ಲು ಸುಂಕ ವಸೂಲಿ ಕೇಂದ್ರದಲ್ಲಿ ಕತ್ತಲಿನ ನಡುವೆಯೂ ಪ್ರಕಾಶಮಾನವಾಗಿ ಬರುತ್ತಿರುವ ವಾಹನಗಳನ್ನು ತಡೆದು ನಿಲ್ಲಿಸುವುದೇ ಒಂದು ಸಾಹಸ. ಮೂರು ಬೃಹತ್ ಮರ್ಕ್ಯುರಿ ಕಂಬ ಹಾಗೂ 14 ಸ್ಟ್ರೀಟ್ ಲೈಟ್ ಕಂಬಗಳಿದ್ದು ಆಗಾಗ ಉರಿದು ನಂದುತ್ತವೆ. ನೂತನ ಬೃಹತ್ ವಿದ್ಯುತ್ ಕಂಬ ಅಳವಡಿಸಲು ತೋಡಿದ ಹೊಂಡದಲ್ಲಿ ನೀರು ತುಂಬಿದೆ. ಲೈಟ್ ಉರಿಯದೇ ಕಾರ್ಮಿಕರು, ಪ್ರಯಾಣಿಕರು ಕತ್ತಲ್ಲಿ ಪರದಾಡುವಂತಾಗಿದೆ.

ರಾತ್ರಿಯಾಗುತ್ತಿದ್ದಂತೆ ಸುಂಕ ವಸೂಲಿ ಮಾಡುತ್ತಿರುವ ಕಾರ್ಮಿಕರ ಸಮಸ್ಯೆ ಬಿಗಡಾಯಿಸುತ್ತದೆ. ಅತೀ ವೇಗದಿಂದ ಬರುವ ವಾಹನಗಳನ್ನು ತಡೆದು ವಸೂಲಿ ಮಾಡಬೇಕು, ಮತ್ತೊಂದೆಡೆ ಸುಂಕ ನೀಡುವುದನ್ನು ತಪ್ಪಿಸಿಕೊಳ್ಳಲು ವಿರುದ್ಧ ದಿಕ್ಕಿನಿಂದಲೂ ವಾಹನಗಳು ಸಂಚರಿಸುತ್ತಿದ್ದು, ಅದನ್ನೂ ಗಮನಿಸಬೇಕು, ಸುಂಕ ವಸೂಲಿ ಮಾಡುವ ಜಾಗ ಮೊದಲೇ ಇಕ್ಕಟ್ಟಾಗಿದ್ದು, ಕತ್ತಲೆಯಲ್ಲಿ ವಾಹನ ಚಾಲಕರಿಂದ ಜೀವ ಪಣಕ್ಕಿಟ್ಟು ಸುಂಕ ವಸೂಲಿ ಮಾಡುವಂತಾಗಿದೆ.

ಅಫಘಾತ ತಡೆಯಲು ತಂದಿರಿಸಿದ ಕಾಂಕ್ರೀಟ್ ಬ್ಲಾಕ್‌ಗಳನ್ನು ಅಳವಡಿಸದಿರುವುದು ಬ್ರಹ್ಮರಕೂಟ್ಲು ಸರ್ವೀಸ್ ರಸ್ತೆಯಿಂದ ಟೋಲ್ ಪ್ಲಾಜಾ ಬಳಿ ಬರುವಲ್ಲಿ ವಾಹನಗಳು ಎರ್ರಾಬಿರ್ರಿಯಾಗಿ ಸಂಚರಿಸುತ್ತಿದ್ದು, ಇದರಿಂದಾಗಿ ನಿರಂತರವಾಗಿ ಅಪಘಾತವಾಗುತ್ತಿದ್ದು, ಇದಕ್ಕಾಗಿ ಸುಮಾರು 25 ಕಾಂಕ್ರೀಟ್ ರಸ್ತೆ ವಿಭಜಕ ಬ್ಲಾಕ್‌ಗಳನ್ನು ತಂದಿರಿಸಲಾಗಿತ್ತು. ಆದರೆ ಅದನ್ನು ರಾಷ್ಟ್ರೀಯ ಹೆದ್ದಾರಿಯಲ್ಲೇ ರಾಶಿ ಹಾಕಲಾಗಿದೆ.

CHESS TRAINING AT RAKTHESHWARI TEMPLE BCROAD
ಹೆದ್ದಾರಿ ಬದಿಯಲ್ಲಿ ಪ್ರವಾಸಿಗರಿಗೆ ಯೋಗ್ಯವಾದ ಶೌಚಾಲಯ ವ್ಯವಸ್ಥೆ ಇಲ್ಲ. ಈಗ ಸರ್ವೀಸ್ ರಸ್ತೆಯ ಬಳಿ ನಿರ್ಮಾಣವಾಗಿರುವ ಶೌಚಾಲಯ ಹೆದ್ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ಪ್ರಯೋಜನಕ್ಕಿಲ್ಲದಂತಾಗಿದೆ.

OPTIC WORLD
ಪ್ರತಿ ವರ್ಷವೂ ಸುಂಕದ ದರ ಏರಿಕೆಯಾಗುತ್ತಲೇ ಇದೆ. ಆದರೆ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಯಾವುದೇ ಮೂಲಭೂತ ಸೌಕರ್ಯ ಇಲ್ಲ, ಸುಂಕ ವಸೂಲಿ ಕೇಂದ್ರದ ಬಳಿಯಿಂದ ಒಂದು ಕಿಲೋ ಮೀಟರ್ ದೂರದಿಂದಲೇ ವಿದ್ಯುತ್ ಲೈಟ್‌ನ ವ್ಯವಸ್ಥೆ ಬೇಕಾಗುತ್ತದೆ. ಆದರೆ ಇಲ್ಲಿ ಟೋಲ್‌ಗೇಟ್ ಬಳಿಯೇ ಕತ್ತಲು ಆವರಿಸಿದೆ ಎಂದು ಜಿಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹೇಳುತ್ತಾರೆ.
ಬ್ರಹ್ಮರಕೂಟ್ಲು ಸುಂಕ ವಸೂಲಿ ಕೇಂದ್ರವು ಆರಂಭದಿಂದಲೂ ಅವ್ಯವಸ್ಥೆಯಿಂದ ಕೂಡಿದೆ. ವಸೂಲಿ ಕೇಂದ್ರದ ಬಳಿ ಒಂದು ರಸ್ತೆ ಮಾತ್ರ ಕಾಂಕ್ರಿಟೀಕರಣವಾಗಿದ್ದು, ಮತ್ತೆರಡು ಕಡೆ ಹೊಂಡಗಳಿಂದು ಕೂಡಿರುತ್ತದೆ. ರಸ್ತೆಯೂ ಹೊಂಡಗಳಿಂದ ಕೂಡಿರುತ್ತದೆ. ಸರ್ವೀಸ್ ರಸ್ತೆಯಿಂದ ವಾಹನಗಳು ಬರುವಲ್ಲಿ ಡಿವೈಡರ್ ಅಳವಡಿಸದೇ ಎಲ್ಲಾ ವಾಹನಗಳು ಒಮ್ಮೆಲೇ ಬರುತ್ತಿದ್ದು, ನಿರಂತರ ಅಪಘಾತಗಳಾಗುತ್ತಾ ಇದೆ ಎಂದು ಸುಜೀರ್ ದತ್ತನಗರದ ಗಣೇಶ್ ಅಭಿಪ್ರಾಯಪಡುತ್ತಾರೆ.


Our Brahmarakotlu toll gate is collecting tolls without providing any basic facilities—not even proper roads, which are in a completely damaged condition. This amounts to daylight robbery. I would like to ask the concerned officials one clear question: Do vehicles registered in Mangalore and Bantwal have to pay toll here? There is still no clarity on this. Some people say that local vehicles are exempt, but the toll is still being collected regularly. As a media person, I kindly request an official response to my concerns. Thank you.
ನಮ್ಮ ಬ್ರಹ್ಮರಕೋಟಲು ಟೋಲ್ ಗೇಟು ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದೇ, ಕೇವಲ ಟೋಲ್ ಸಂಗ್ರಹಿಸುತ್ತಿದೆ—ರಸ್ತೆಗಳು ಕೂಡ ಸಂಪೂರ್ಣವಾಗಿ ಹಾನಿಗೊಂಡಿವೆ. ನಾನು concerned ಅಧಿಕಾರಿಗಳಿಗೆ ಒಂದು ಸ್ಪಷ್ಟ ಪ್ರಶ್ನೆ ಕೇಳಲು ಬಯಸುತ್ತೇನೆ: ಮಂಗಳೂರು ಮತ್ತು ಬಂಟ್ವಾಳ ನೋಂದಣಿ ಹೊಂದಿದ ವಾಹನಗಳು ಇಲ್ಲಿ ಟೋಲ್ ಪಾವತಿಸಬೇಕೇ? ಇದರಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಕೆಲವರು ಸ್ಥಳೀಯ ವಾಹನಗಳಿಗೆ ಟೋಲ್ ಇಲ್ಲ ಎಂದು ಹೇಳುತ್ತಿದ್ದಾರೆ, ಆದರೆ ಈವರು ನಿರಂತರವಾಗಿ ಟೋಲ್ ಸಂಗ್ರಹಿಸುತ್ತಿದ್ದಾರೆ. ದಯವಿಟ್ಟು ನನ್ನ ಅನುಮಾನಗಳಿಗೆ ಅಧಿಕಾರಿಗಳಿಂದ ಉತ್ತರವನ್ನು ಕೇಳುತ್ತೇನೆ. ಧನ್ಯವಾದಗಳು.