ರೋಟರಿ ಕ್ಲಬ್ ಬಂಟ್ವಾಳ ಟೌನ್ ನ 2024-25 ನೇ ಸಾಲಿನಲ್ಲಿ ಸಲ್ಲಿಸಿದ ಸಮಾಜಮುಖಿ ಸೇವಾ ಕಾರ್ಯಗಳನ್ನು ಗುರುತಿಸಿ ಜಿಲ್ಲಾ ಮಟ್ಟದ ಅತ್ಯುನ್ನತ ಸೇವಾ ಪ್ರಶಸ್ತಿಯಾದ ಡೈಮಂಡ್ ಪ್ಲಸ್ ಪ್ರಶಸ್ತಿ ದೊರಕಿರುವುದು ಖುಷಿ ತಂದಿದೆ ಎಂದು ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ಕಿಶೋರ್ ಎಸ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚಿಗೆ ಮಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಂಸ್ಥೆಗೆ ಡೈಮಂಡ್ ಪ್ಲಸ್ ಅವಾರ್ಡ್ ಸ್ವೀಕರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಸಂಸ್ಥೆಯಲ್ಲಿ ಸದಸ್ಯರಾಗುವುದಷ್ಟೇ ಸಾಲದು ಅದರಲ್ಲಿ ಸೇವಾ ಮನೋಭಾವದಿಂದ ದುಡಿಯುವುದು ಅಷ್ಟೇ ಮುಖ್ಯ. ರೋಟರಿ ಕ್ಲಬ್ ಬಂಟ್ವಾಳ ಟೌನ್ ಈ ಬಾರಿ ಭಂಡಾರಿಬೆಟ್ಟು ನಿವಾಸಿ ರಾಜೀವಿ ಆಚಾರ್ಯ ಅವರ ದುಸ್ಥಿತಿಯಲ್ಲಿದ್ದ ಮನೆಯನ್ನು ಪುನರ್ನಿರ್ಮಾಣ ಮಾಡಿ ವಾಸಿಸಲು ಅನುಕೂಲ ಮಾಡಿಕೊಟ್ಟಿದೆ,. ಅಂಗನವಾಡಿ ಕೇಂದ್ರಕ್ಕೆ ಬಿಸಿಯೂಟದ ಅಡುಗೆ ಕೋಣೆ ನಿರ್ಮಾಣ ಕೆಲಸ ಮಾಡಿದೆ ಎಂದರು.
ಜಿಲ್ಲಾ ಗವರ್ನರ್ ವಿಕ್ರಂ ದತ್ತ, ಕಾರ್ಯದರ್ಶಿ ರಿತೇಶ್ ಬಾಳಿಗಾ, ಸಹಾಯಕ ಗವರ್ನರ್ ಮೊಹಮ್ಮದ್ ವಳವೂರ್, ವಲಯ ಸೇನಾನಿ ಪುಷ್ಪರಾಜ್ ಹೆಗ್ಡೆ, ಕಾರ್ಯದರ್ಶಿ ನಾರಾಯಣ್ ಸಿ ಪೆರ್ಣೆ, ಚುನಾಯಿತ ಅಧ್ಯಕ್ಷರಾದ ವಚನ್ ಶೆಟ್ಟಿ, ನಾಗೇಶ್ ಕುಲಾಲ್, ಉಮೇಶ್ ಶೆಟ್ಟಿ, ರಾಜೇಶ್, ಜಯರಾಜ್ ಎಸ್ ಬಂಗೇರ, ಸುರೇಶ ಸಾಲಿಯಾನ್, ಸುರೇಶ ಬಂಟ್ವಾಳ, ಹಂಝ ಬಸ್ತಿ ಕೊಡಿ, ಕಿಶೋರ್ ಕುಲಾಲ್, ಕಿಶೋರ್ ಅಜೆಕಾಲ, ಸದಾಶಿವ ಪುತ್ರನ್, ಭಾಸ್ಕರ್ ಕೊಲ್ನಾಡು, ಕ್ಳಬ್ಬಿನ ಪ್ರಥಮ ಮಹಿಳೆ ಜಶ್ಮಿ ಕಿಶೋರ್, ಸವಿತಾ ನಾರಾಯಣ್, ರಶ್ಮಿ ವಚನ್ ಹಾಜರಿದ್ದರು.
Be the first to comment on "Rotary Club Bantwal Town: ರೋಟರಿ ಕ್ಲಬ್ ಬಂಟ್ವಾಳ ಟೌನ್ ಗೆ ಡೈಮಂಡ್ ಪ್ಲಸ್ ಪ್ರಶಸ್ತಿ"