ಬಂಟ್ವಾಳ ವಕೀಲರ ಸಂಘದ ಪದಗ್ರಹಣ ಸಮಾರಂಭ ಗುರುವಾರ ನಡೆಯಿತು. ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ಅನಿಲ್ ಪ್ರಕಾಶ್ ಎಂ.ಪಿ. ಉದ್ಘಾಟಿಸಿ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ರಿಚರ್ಡ್ ಕೋಸ್ತಾ ಅವರಿಗೆ ಶುಭ ಹಾರೈಸಿದರು.
ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಕೃಷ್ಣಮೂರ್ತಿ ಎನ್,, ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ಕೆ.ಎಸ್, ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಎನ್. ನಾಯಕ್ ಹಾಗೂ ಗೌರವ ಅತಿಥಿಗಳಾಗಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ,ಶುಭ ಹಾರೈಸಿದರು.
ಜೊತೆ ಕಾರ್ಯದರ್ಶಿಯಾದ ಅಕ್ಷತಾ ಶೆಟ್ಟಿ, ಕೋಶಾಧಿಕಾರಿಯಾಗಿ ಜೆಸಿಂತಾ ಕ್ರಾಸ್ತಾ ಉಪಸ್ಥಿತರಿದ್ದರು.,ಪ್ರದಾನ ಕಾರ್ಯದರ್ಶಿ ಕೆ ನರೇಂದ್ರನಾಥ ಭಂಢಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ದಯಾನಂದ ರೈ, ವಂದಿಸಿದರು. ಅಭಿನಯ ಚಿದಾನಂದ ಹಾಗೂ ವೀರೇಂದ್ರ ಎಂ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
Be the first to comment on "Bantwal: ಬಂಟ್ವಾಳ ವಕೀಲರ ಸಂಘದ ಪದಗ್ರಹಣ"