ಭವಿಷ್ಯತ್ ಕಾಲದ ಭಾರತದ ಆಡಳಿತ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಪರ್ಯಾಯವಾಗಿ ಬೇರೊಂದು ರಾಜಕೀಯ ಪಕ್ಷದ ಅಗತ್ಯತೆ ಮತ್ತು ಅನಿರ್ವಾಯತೆಯನ್ನು ಮನಗಂಡ ಅಪ್ಪಟ್ಟ ದೇಶ ಪ್ರೇಮಿ, ಸೂಕ್ಷ್ಮ ದೃಷ್ಟಿಕೋನವುಳ್ಳ ,ದೂರದೃಷ್ಟಿಯುಳ್ಳ ರಾಜಕಾರಣಿ ಡಾI ಶ್ಯಾಮ್ ಪ್ರಸಾದ್ ಮುಖರ್ಜಿ ದೇಶದ ಮೇಲಿಟ್ಟಿರುವ ದೇಶ ಭಕ್ತಿಯ ಬಗೆಗಿನ ಹಲವಾರು ಘಟನೆಗಳನ್ನು ನೆನಪಿಸಿಕೊಂಡಾಗ ಅವರಲ್ಲಿರುವ ರಾಷ್ಟ್ರ ಪ್ರೇಮದ ಶಕ್ತಿಯು ರಾಷ್ಟ್ರ ಭಕ್ತರಾದ ನಮಗೆಲ್ಲರಿಗೂ ಪ್ರೇರಣಾ ಶಕ್ತಿಯಾಗಿ ಮೂಡಿ ಬರುತ್ತದೆ ಎಂದು ಬಿ ಜೆ ಪಿ ಪ್ರಮುಖರಾದ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಪಿಲಾತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿ ಜೆ ಪಿ ಶಕ್ತಿ ಕೇಂದ್ರದ ವತಿಯಿಂದ ಪುಂಜಾಲಕಟ್ಟೆಯ ನಂದಗೋಕುಲ ಪ್ರಕಾಶ್ ಭಟ್ ರವರ ಮನೆಯಲ್ಲಿ ಜರಗಿದ ಶ್ಯಾಮ್ ಪ್ರಸಾದ್ ಮುಖರ್ಜಿರವರ , ಪುಣ್ಯ ಸ್ಮರಣೆ ಪ್ರಯುಕ್ತ ನಡೆದ ಸಂಸರಣೆ ಕಾರ್ಯಕ್ರಮದಲ್ಲಿ ಮುಖರ್ಜಿಯವರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಮಾತಾನಾಡಿದರು .
ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂರವರ ಸಂಪುಟದಲ್ಲಿ ಸಂಪುಟ ದರ್ಜೆಯ ಕೈಗಾರಿಕಾ ಮಂತ್ರಿಯಾಗಿದ್ದ ಸಂದರ್ಭದಲ್ಲಿ ನೆಹರುರವರ ಸಂಪುಟವು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370 ನೇ ವಿಧಿಯನ್ನು ಜಾರಿಗೆ ತರುವಾಗ ಸಭೆಯಲ್ಲಿ ಉಪಸ್ಥಿತರಿದ್ದ ಮುಖರ್ಜಿಯವರು ಮಸೂದೆಯನ್ನು ಬಲವಾಗಿ ವಿರೋಧಿಸುತ್ತಾ ಖಂಡನೆ ವ್ಯಕ್ತಪಡಿಸಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದು ಸಂಘದ ಹಿರಿಯರೊಂದಿಗೆ ಸಂಪರ್ಕ ಮಾಡಿಕೊಂಡು ಹೊಸ ರಾಜಕೀಯ ಪಕ್ಷವಾದ ಜನ ಸಂಘದ ಸ್ಥಾಪಕ ರಾಗಿದ್ದುಕೊಂಡು ತ್ಯಾಗ , ಬಲಿದಾನ ಮಾಡಿದವರು . ಅವರ ಅಂದಿನ ಕನಸನ್ನು ನನಸು ಮಾಡಿ ಜಮ್ಮು ಕಾಶ್ಮೀರದ ವಿಶೆಷ ಸ್ಥಾನಮಾನದ 370ನೇ ವಿಧಿಯನ್ನು ರದ್ದು ಮಾಡಿ ಭಾರತದಲ್ಲಿ ಇತಿಹಾಸ ನಿರ್ಮಾಣ ಮಾಡಿದವರು ನರೇಂದ್ರ ಮೋದಿಜಿ ಯವರಾಗಿದ್ದು ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ವ್ಯಕ್ತಿಯನ್ನು ನೋಡದೇ ದೇಶಕ್ಕಾಗಿ ಅಳಿಲ ಸೇವೆ ಮಾಡಲು ಕಟ್ಟಿಬದ್ದರಾಗಬೇಕು ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದ ,ಉಪಾಧ್ಯಕ್ಷ ಯೋಗೇಂದ್ರ ಕಮಂಗಿಲ , ಪ್ರಮುಖರಾದ ತುಂಗಪ್ಪ ಬಂಗೇರ ,ಹರ್ಷಿಣಿ ಪುಷ್ಪನಾಂದ, ಲಕ್ಷ್ಮೀ ಜೆ ಬಂಗೇರ ,ಚಂದ್ರಶೇಖರ ಶೆಟ್ಟಿ ಕಮಂಗಿಲ , ಲಕ್ಷ್ಮೀ ನಾರಾಯಣ ಹೆಗಡೆ, ಕಾಂತಪ್ಪ ಕರ್ಕೆರ , ಪ್ರಕಾಶ್ ಭಟ್ ಮತ್ತಿತ್ತರು ಉಪಸ್ಥಿತರಿದ್ದರು,.
Be the first to comment on "ಶ್ಯಾಮ್ ಪ್ರಸಾದ್ ಮುಖರ್ಜಿ ದೇಶಪ್ರೇಮ ರಾಷ್ಟ್ರಭಕ್ತರಿಗೆ ಪ್ರೇರಣಾ ಶಕ್ತಿ : ಪ್ರಭಾಕರ ಪ್ರಭು"